ಲೀಕ್ ಆಗಿದ್ದ ನಗ್ನ ವೀಡಿಯೋ ಬಗ್ಗೆ ನೋವು ತೋಡಿಕೊಂಡ ಈ ನಟಿ ಮುಂದೊಂದು ದಿನ ‘ಬಾಟಮ್ ಲೆಸ್ ‘ ಆಗಿ ನಟಿಸಿದ್ದಳು !

ತನ್ನ ಬೋಲ್ಡ್ ಪಾತ್ರಗಳಿಂದಲೇ ಹೆಸರು ಮಾಡಿರುವ ನಟಿ ರಾಧಿಕಾ ಆಪ್ಟೆ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ತಮ್ಮ ನೋವನ್ನು ಹೊರ ಹಾಕಿದ್ದಾರೆ. ಈ ಹಿಂದೆ ಲೀಕ್ ಆಗಿದ್ದ ತಮ್ಮ ಪೋಟೋ ಮತ್ತು ವಿಡಿಯೋ ಬಗ್ಗೆ ಮಾತನಾಡಿದ್ದಾರೆ.

‘ನನ್ನ ನಗ್ನ ಪೋಟೋಗಳು ಲೀಕ್ ಆಗಿವೆ ಎಂಬ ಸುದ್ದಿ ಕೇಳಿ ನಾಲ್ಕು ದಿನ ಮನೆಯಿಂದ ಹೊರಗೆ ಬಂದಿರಲಿಲ್ಲ ಎಂದು ನಟಿ ಹೇಳಿಕೊಂಡಿದ್ದಾರೆ. ಆನಂತರ
ನನ್ನನ್ನು ಕೆಟ್ಟದಾಗಿ ಟ್ರೋಲ್ ಮಾಡಲಾಯಿತು. ಅದು ನನ್ನ ಮನಸ್ಸಿನ ಮೇಲೆ ಎಷ್ಟು ದೊಡ್ಡ ಪರಿಣಾಮ ಬೀರಿತು ಎಂದರೆ ನಾಲ್ಕು ದಿನ ನಾನು ಮನೆಯಿಂದ ಹೊರಬರಲೇ ಇಲ್ಲ. ನನ್ನ ಡ್ರೈವರ್, ವಾಚ್ ಮ್ಯಾನ್ ಮುಂತಾದವರು ಕೂಡ ಆ ಫೋಟೋಗಳನ್ನು ನೋಡಿ ಅದು ನಾನೇ ಎಂದು ಹೇಳಿದ್ದರು ‘ ಎಂದು ರಾಧಿಕಾ ಆಪ್ಟೆ ಹೇಳಿದ್ದಾರೆ.

ವರ್ಷಗಳ ಹಿಂದೆ ರಾಧಿಕಾ ಆಪ್ಟೆ ಅವರದ್ದು ಎನ್ನಲಾದ ಬೆತ್ತಲೆ ವಿಡಿಯೋಗಳು ಲೀಕ್ ಆಗಿದ್ದವು.
‘ಮ್ಯಾಡ್ಲಿ’ ಚಿತ್ರದ ‘ಕ್ಲೀನ್ ಶೇವನ್’ ಸೆಪ್ಟೆಂಟ್‌ನಲ್ಲಿನ ರಾಧಿಕಾ ಆಷ್ಟೆ ಅವರದ್ದು ಎನ್ನಲಾದ ಬೆತ್ತಲೆ ವಿಡಿಯೋಗಳು ಆನ್‌ಲೈನ್‌ನಲ್ಲಿ ಹರಿದಾಡಿದ್ದವು.
ಅದರಲ್ಲಿರುವುದು ನಾನಲ್ಲ ಎಂದು ರಾಧಿಕಾ ಅಪ್ಟೆ ಸ್ಪಷ್ಟ ಪಡಿಸಿದ್ದರು. ಹೀಗಿದ್ದರೂ, ಆ ಸಮಯದಲ್ಲಿ ರಾಧಿಕಾ ಅಷ್ಟೆ ಅನುಭವಿಸಿದ್ದ ಸಂಕಟ ಮಾತ್ರ ಅಷ್ಟಿಷ್ಟಲ್ಲ.

ರಾಧಿಕಾ 2005ರಲ್ಲಿ ಬಿಡುಗಡೆಯಾದ ವಾಹ್ ಲೈಫ್ ಹೋ ತೊ ಐಸಿ ಚಿತ್ರದಲ್ಲಿ ನಟಿಸಿದರು. ಶಾಹಿದ್ ಕಪೂರ್ ಸಹೋದರಿಯ ಪಾತ್ರದಲ್ಲಿ ಕಾಣಿಸಿಕೊಂಡಾಗ ಹೆಚ್ಚು ಗಮನ ಸೆಳೆದಿರಲಿಲ್ಲ. ಇದರ ನಂತರ, ಅವರು 2011ರ ಶೋರ್ ಇನ್ ದಿ ಸಿಟಿ ಸಿನಿಮಾದಲ್ಲಿ ಪ್ರಮುಖ ನಟಿಯಾಗಿ ಕಾಣಿಸಿಕೊಂಡರು .ನಂತರ ಅವರು ‘ರಕ್ತ ಚರಿತ್ರಾ’, ‘ರಕ್ತ ಚರಿತ್ರ 2’ ಮತ್ತು ‘ಐ ಆಮ್’ ಚಿತ್ರಗಳಲ್ಲಿ ನಟಿಸಿದರು.

2016ರಲ್ಲಿ ರಾಧಿಕಾ ಆಪ್ಟೆ ಅಭಿನಯದ ಮ್ಯಾಡ್ಲಿ ಚಿತ್ರ ತೆರೆ ಕಂಡಿತ್ತು. ಈ ಚಿತ್ರದ ಶೂಟಿಂಗ್ ಸಮಯದಲ್ಲಿ ನನ್ನ ಕೆಲ ನಗ್ನ ದೃಶ್ಯಗಳು ಲೀಕ್ ಆಗಿದ್ದವು. ಈ ವಿಚಾರ ನನ್ನ ಡ್ರೈವರ್ ನಿಂದ ತಿಳಿಯಿತು. ಆದರೆ ಅದರಲ್ಲಿ ಇದ್ದುದ್ದು ಮಾತ್ರ ನಾನಲ್ಲ.ನನ್ನನ್ನು ತುಂಬಾ ಕೆಟ್ಟದಾಗಿ ಟ್ರೋಲ್ ಮಾಡಿದ್ದರು. ಈ ಕಾರಣಕ್ಕಾಗಿ ನಾನು ನಾಲ್ಕು ದಿನ ಮನೆಯಿಂದ ಹೊರಬರಲಿಲ್ಲ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಲೀಕ್ ಆಗಿದ್ದ ಫೋಟೋಗಳು ಎಲ್ಲವೂ ನಗ್ನ ಸೆಲ್ವಿಗಳಾಗಿದ್ದವು. ಸರಿಯಾಗಿ ನೋಡಿದರೆ ಅದು ನಾನು ಅಲ್ಲ ಎಂಬುದು ಗೊತ್ತಿದ್ದರೂ ಯಾರೂ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ .ನನ್ನ ಡ್ರೈವರ್, ನನ್ನ ವಾಚ್‌ಮ್ಯಾನ್, ನನ್ನ ಸ್ಟೈಲಿಸ್ಟ್ ಆ ಫೋಟೋಗಳನ್ನು ನೋಡಿದ್ದರು. ಅವರಿಂದ ವಿಚಾರ ಗೊತ್ತಾಗಿತ್ತು ಎಂದು ಅಂದಿನ ಘಟನೆ ವಿವರಿಸಿದ್ದಾರೆ.

ಪಾರ್ಚ್ ಸಿನಿಮಾದಲ್ಲಿ ರಾಧಿಕಾ ಆಪ್ಟೆ s*x ವರ್ಕರ್ ಪಾತ್ರ ಮಾಡಿದ್ದರು. ಈ ಚಿತ್ರಕ್ಕಾಗಿ ಅವರು ನಗ್ನವಾಗಿ ಕಾಣಿಸಿಕೊಂಡಿದ್ದರು. ಇಂತಹ ವಿಚಾರ ಮುಚ್ಚಿಡುವ ಅಗತ್ಯವೂ ಇರಲಿಲ್ಲ. ಈ ರೀತಿಯ ಪಾತ್ರ ನನಗೆ ಖಂಡಿತವಾಗಿಯೂ ಬೇಕಿತ್ತು ಎಂದು ಅವರು ಹೇಳಿದ್ದಾರೆ.

2005ರಿಂದಲೂ ಬಾಲಿವುಡ್‌ನಲ್ಲಿ ಸಕ್ರಿಯರಾಗಿರುವ ರಾಧಿಕಾ ಅವರು ‘ಲಸ್ ಸ್ಟೋರೀಸ್’ ಸೇರಿದಂತೆ ಹಲವು ವೆಬ್ ಸಿರೀಸ್‌ಗಳಲ್ಲೂ ನಟಿಸಿದ್ದಾರೆ. ಪ್ಯಾಡ್ ಮ್ಯಾನ್, ಅಂಧಾಧುನ್ ಮುಂತಾದ ಯಶಸ್ವಿ ಸಿನಿಮಾಗಳಲ್ಲಿ ಅವರು ನಾಯಕಿಯಾಗಿ ಅಭಿನಯಿಸಿದ್ದಾರೆ.

ಪಾರ್ಚ್ ಸಿನಿಮಾದಲ್ಲಿ ‘ಬಾಟಮ್ ಲೆಸ್’ ಆಗಿ ನಗ್ನಳಾಗಿ ನಟಿಸಿದ ಮೇಲೂ ಈ ಹಿಂದೆ ಸೋರಿಕೆಯಾಗಿದ್ದ ನಗ್ನ ಫೋಟೋಗಳು ಮತ್ತು ವಿಡಿಯೋಗಳು ನನ್ನದಲ್ಲ ಎಂಬುದನ್ನು ಜನರು ನಂಬುವುದಾದರೂ ಹೇಗೆ??? ಹಾಗೆಯೇ ಇದೆಲ್ಲ ಪಬ್ಲಿಸಿಟಿ ಗಿಮಿಕ್ ಎಂಬ ಮಾತು ಕೂಡ ಎಲ್ಲೆಡೆ ಕೇಳಿಬರುತ್ತಿದೆ.

Leave A Reply

Your email address will not be published.