ಅಂದರ್- ಬಾಹರ್ ಆಟ | ಒಟ್ಟು11 ಮಂದಿ ಅಂದರ್ !

ಮಂಗಳೂರಿನ ಬಿಕರ್ನಕಟ್ಟೆಯ ಬಾಡಿಗೆ ಮನೆಯಲ್ಲಿ ಅಕ್ರಮ ಜೂಜಾಟ ಅಂದರ್- ಬಾಹರ್ ಆಟ ಆಡುತ್ತಿದ್ದ ಆರೋಪದಲ್ಲಿ 11 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿಗಳನ್ನು ರಾಜೇಂದ್ರ ಹಲ್ದಾರ್(41), ಕನಕಪ್ಪ ಕೋಟಿ(40), ರಾಘವೇಂದ್ರ(24), ಉಮೇಶ ರಾಮಪ್ಪ ಚೌಡಪ್ಪ,(24), ಲಕ್ಷ್ಮಪ್ಪ (37), ರೋಹನ್ (24), ಲಕ್ಕಪ್ಪ, ಹನುಮಪ್ಪ ವಾಲಿಕಾರ್(26), ಬಾಸ್ಕರ (54) ಚಿದಾನಂದ (25), ಶಿವಲಿಂಗಪ್ಪ(30) ಎಂದು ಗುರುತಿಸಿದ್ದು,ಬಂಧಿತರಿಂದ ಜೂಜಾಟಕ್ಕೆ ಬಳಸಿದ 90.000 ರೂ. ನಗದು, ಮೊಬೈಲ್ ಫೋನುಗಳು ಹಾಗು ಇತರ ಸೊತ್ತುಗಳನ್ನು ವಶಪಡಿಸಿ ಕೊಳ್ಳಲಾಗಿದೆ.

ಈ ಕುರಿತು ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.