ನಾಳೆಯಿಂದ ಮುಳಿಯ ಜ್ಯುವೆಲ್ಸ್ ಇ-ಕಾಮರ್ಸ್ ವರ್ಚುವಲ್ ಸೇಲ್ಸ್ ಆರಂಭ

        

ಸದಾ ಹೊಸತನವನ್ನು ಪರಿಚಯಿಸುತ್ತಿರುವ ಮುಳಿಯ ಜ್ಯುವೆಲ್ಸ್ ಕೊರೋನ ಲಾಕ್‍ಡೌನ್ ಸಂದರ್ಭದಲ್ಲಿ ಗ್ರಾಹಕರಿಗೆ ತಮಗೆ ಇಷ್ಟವಾದ ಆಭರಣಗಳನ್ನು ಮನೆಯಲ್ಲಿ ಕುಳಿತು ಖರೀದಿಸುವ ವ್ಯವಸ್ಥೆಯನ್ನು ಕಲ್ಪಿಸಿದೆ. ಮುಳಿಯ ಇ-ಕಾಮರ್ಸ್ ವರ್ಚುವಲ್ ಸೇಲ್ಸ್ ದಿನಾಂಕ 10ನೇ ಮೇ 2021ರಿಂದ ಪ್ರಾರಂಭಗೊಂಡಿದೆ.
ಗ್ರಾಹಕರು ತಮಗೆ ಇಷ್ಟವಾದ ಆಭರಣಗಳನ್ನು ಮನೆಯಲ್ಲಿ ಕುಳಿತು ಮುಳಿಯ ಇ-ಕಾಮರ್ಸ್ http://browse.muliya.in
ಗೆ ಕ್ಲಿಕ್ ಮಾಡಿ ಅದರಲ್ಲಿರುವ ಸುಮಾರು 2 ಸಾವಿರಕ್ಕೂ ಮಿಕ್ಕಿ ರೆಡಿ ಆಭರಣಗಳನ್ನು ಆನ್ಲೈನ್ ಮೂಲಕ ಆಯ್ಕೆ ಮಾಡಿ ಖರೀದಿಸಬಹುದು.
ಖರೀದಿ ಮಾಡಿದ ಆಭರಣಗಳನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿಕೊಡುವ ವ್ಯವಸ್ಥೆ ಕೂಡ ಇದೆ.

ಮುಳಿಯ ಇ-ಕಾಮರ್ಸ್ ನೇತೃತ್ವದಲ್ಲಿ ಮುಳಿಯ ವರ್ಚುವಲ್ ಶೋ ದಿನಾಂಕ 12ನೇ ಮೇ 2021ರಂದು ಸಂಸ್ಥೆಯ ಚೇರ್‍ಮೇನ್ ಶ್ರೀ ಕೇಶವ ಪ್ರಸಾದ್ ಮುಳಿಯ ಇವರ ಉಪಸ್ಥಿತಿಯಲ್ಲಿ, ಬಾಗಲಕೋಟೆ ಜಿಲ್ಲೆಯ, ಭಾರತದಲ್ಲಿ ಅತೀ ಹೆಚ್ಚು ಸಕ್ಕರೆ ಉತ್ಪಾದಿಸುವ ಸಕ್ಕರೆ ಕಾರ್ಖಾನೆಗಳ ಬೆಳಗಿ ಸಮೂಹದ ನಿರ್ದೇಶಕರಾದ ಶ್ರೀ ಲಕ್ಷ್ಮಣ್ ನಿರಾಣಿ ಇವರಿಂದ ವಿದ್ಯುಕ್ತವಾಗಿ ಚಾಲನೆಗೊಳ್ಳಲಿದೆ.


ಇದೇ ಮೇ 14 ಅಕ್ಷಯ ತೃತೀಯ ಶುಭ ದಿನದಂದು ಚಿನ್ನಾಭರಣಗಳನ್ನು ಖರೀದಿಸಲು ಮುಳಿಯದ ಈ ವರ್ಚುವಲ್ ಕೌಂಟರ್‍ನ ಸದುಪಯೋಗ ಪಡೆಸಿಕೊಳ್ಳಬಹುದೆಂದು ಸಂಸ್ಥೆಯ ಆಡಳಿತ ನಿರ್ದೇಶಕರಾದ ಶ್ರೀ ಕೃಷ್ಣ ನಾರಾಯಣ ಮುಳಿಯ ತಿಳಿಸಿರುತ್ತಾರೆ.
ಮುಳಿಯ ಇ-ಕಾಮರ್ಸ್‍ನ ಸೇಲ್ಸ್‍ನ ಹೆಚ್ಚಿನ ಮಾಹಿತಿಗಾಗಿ ಗ್ರಾಹಕರು 9353030916, 18004252916 ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Leave A Reply

Your email address will not be published.