Hassana: ಬುದ್ಧಿಮಾಂದ್ಯ ಯುವತಿಯ ಮೇಲೆ ಗ್ಯಾಂಗ್‌ ರೇ*ಪ್‌

Share the Article

Hassana: ಬುದ್ಧಿಮಾಂದ್ಯ ಯುವತಿಯ ಮೇಲೆ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಮಾಡಿರುವ ಹೇಯ ಕೃತ್ಯ ಹಾಸನದಲ್ಲಿ ನಡೆದಿದೆ.

ಯುವತಿಯ ಮೇಲೆ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಮಾಡಿದ್ದಲ್ಲದೇ ವಿಡಿಯೋ ಮಾಡಿ ಯುವತಿ ಸಹೋದರನಿಗೆ ಕಳುಹಿಸಿದ್ದಾರೆ. ವೀಡಿಯೋ ನೋಡಿದಾಗ ತನ್ನ ಅಕ್ಕನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವುದು ತಿಳಿದು ಬಂದಿದೆ. ಸಹೋದರ ನಂತರ ಪೊಲೀಸರಿಗೆ ದೂರನ್ನು ನೀಡಿದ್ದಾನೆ.

ವಿಡಿಯೋ ಕಳುಹಿಸಿದ ದುಷ್ಕರ್ಮಿಗಳು ನಂತರ ಡಿಲೀಟ್‌ ಮಾಡಿದ್ದು, ಆದರೆ ಅಷ್ಟರಲ್ಲಿ ಸಹೋದರ ವಿಡಿಯೋವನ್ನು ತನ್ನ ಸ್ನೇಹಿತನಿಗೆ ಕಳುಹಿಸಿ ಆಗಿದೆ. ಈ ಘಟನೆ ಸಂಬಂಧ ಅಬ್ದುಲ್‌ ಅಫ್ತಾಬ್‌, ರಾಜಿಕ್‌ ಪಾಷ, ಉಮ್ರಾನ್‌ ವಿರುದ್ಧ ಪ್ರಕರಣ ದಾಖಲಾಗಿದೆ.

Comments are closed.