Puttur: ಅನೈತಿಕ ಚಟುವಟಿಕೆ, ಪೊಲೀಸ್ ದಾಳಿ: ಯುವತಿ ರಕ್ಷಣೆ, ಪ್ರಕರಣ ದಾಖಲು

Puttur: ಸಾಮೆತ್ತಡ್ಕದ ಮನೆಯೊಂದರಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿರುವ ಮಾಹಿತಿ ಆಧರಿಸಿ ದಾಳಿ ಮಾಡಿದ ಪೊಲೀಸರು ಯುವತಿಯನ್ನು ರಕ್ಷಿಸಿ, ಇಬ್ಬರು ಪುರುಷರ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ.

ಪೊಲೀಸರ ದಾಳಿ ಸಮಯದಲ್ಲಿ ಮನೆ ಮಾಲಕ, ಯುವತಿ ಮತ್ತು ಪುರುಷನನ್ನು ಅಲ್ಲಿಂದ ಬಿಡಿಸುವಲ್ಲಿ ಸಹಾಯ ಮಾಡಿದ್ದಾರೆ. ಸುಳ್ಯ ಮೂಲದ ಪುರಷ ಮತ್ತು ಅವರಿಗೆ ಮನೆ ನೀಡಿದ ವಿಲ್ಫ್ರೆಡ್ ಎಂಬುವವರನ್ನು ವಶಕ್ಕೆ ಪಡೆದು ಮಹಿಳಾ ಪೊಲೀಸ್ ಠಾಣೆಯಲ್ಲಿ ಆರೋಪಿಗಳಿಬ್ಬರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿರುವ ಕುರಿತು ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: Karvara: ಕೆಲಸ ಕೊಡಿಸುವುದಾಗಿ 200 ರೂ ವಂಚನೆ – 30 ವರ್ಷಗಳ ಬಳಿಕ ಆರೋಪಿಯ ಬಂಧನ
Comments are closed.