Tripura: 15ರ ಬಾಲಕಿಗೆ ಮರ್ಮಾಂಗ ತೋರಿಸಿ ಮುದುಕನ ವಿಕೃತಿ – ವಿಡಿಯೋ ವೈರಲ್!!

Tripura: ರೈಲಿನಲ್ಲಿ ಪ್ರಯಾಣಿಸುವಾಗ 15ರ ಬಾಲಕಿ ಒಬ್ಬಳಿಗೆ ಮುಸ್ಲಿಂ ಮುದುಕನೊಬ್ಬ ತನ್ನ ಮರ್ಮಾಂಗವನ್ನು ತೋರಿಸಿ ವಿಕೃತಿ ಮೆರೆದ ಅಮಾನುಷ ಘಟನೆ ಒಂದು ಬೆಳಕಿಗೆ ಬಂದಿದೆ.

VIDEO – Warning: Visuals pic.twitter.com/djJoQLYqCP
— Times Algebra (@TimesAlgebraIND) June 14, 2025
ಹೌದು, ತ್ರಿಪುರಾದಲ್ಲಿ ರೈಲಿನಲ್ಲಿ ಈ ಘಟನೆ ನಡೆದಿದೆ. ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬ 15 ವರ್ಷದ ಬಾಲಕಿಗೆ ತನ್ನ ಮರ್ಮಾಂಗ ತೋರಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಇದರಿಂದ ಕೋಪಗೊಂಡ ಬಾಲಕಿ ತನ್ನ ಚಪ್ಪಲಿಯಿಂದ ಆ ವ್ಯಕ್ತಿಗೆ ಹೊಡೆದಿದ್ದಾಳೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಆರೋಪಿಯನ್ನು ಅಮರಪುರ ನಿವಾಸಿ ಮೊಹಮ್ಮದ್ ಇಬ್ರಾಹಿಂ ಎಂದು ಗುರುತಿಸಲಾಗಿದೆ. ವರದಿಗಳ ಪ್ರಕಾರ, ರೈಲು ಸುರಂಗದ ಮೂಲಕ ಹಾದುಹೋದಾಗ, ಈ ಅವಕಾಶವನ್ನು ಬಳಸಿಕೊಂಡ ಆತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಮೊಹಮ್ಮದ್ ಇಬ್ರಾಹಿಂ ಅಶ್ಲೀಲ, ಲೈಂಗಿಕ ಸನ್ನೆಗಳನ್ನು ಮಾಡಿದ ಘಟನೆಯ ವಿಡಿಯೊವನ್ನು ಸಂತ್ರಸ್ತೆ ರೆಕಾರ್ಡ್ ಮಾಡಿ ತನ್ನ ಸಹೋದರನಿಗೆ ಕಳುಹಿಸಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಷಯ ಇತರ ಪ್ರಯಾಣಿಕರ ಗಮನಕ್ಕೆ ಬಂದಿದ್ದರಿಂದ ಅವರು ಆರೋಪಿಯನ್ನು ಹಿಡಿದು ಕಪಾಳಮೋಕ್ಷ ಮಾಡಿದ್ದಾರೆ. ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಕ್ಕಾಗಿ ಮಹಿಳೆಯೊಬ್ಬಳು ಇಬ್ರಾಹಿಂಗೆ ಚಪ್ಪಲಿಯಿಂದ ಹೊಡೆದಿದ್ದಾಳೆ.
ಸಧ್ಯ ಆತನನ್ನು ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ತ್ರಿಪುರಾದ ಧರ್ಮನಗರ ಪಟ್ಟಣದಲ್ಲಿ ಬಂಧಿಸಿದ್ದಾರೆ. ಈ ವ್ಯಕ್ತಿ ಅಪ್ರಾಪ್ತ ಬಾಲಕಿಯ ಕಡೆಗೆ ಅಶ್ಲೀಲ, ಲೈಂಗಿಕ ಸೂಚನೆ ನೀಡುವ ಸನ್ನೆಗಳನ್ನು ಮಾಡುತ್ತಿದ್ದ ಕಾರಣ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Comments are closed.