Gadag: ಅತ್ತೆಯಿಂದ ಬಣ್ಣದ ಕುರಿತು ಅವಹೇಳನ; ಸೊಸೆ ಆತ್ಮಹತ್ಯೆ, ಡೆತ್ ನೋಟ್ ಪತ್ತೆ!

Share the Article

Gadag: ಪೂಜಾ ಅಮರೇಶ ಅಯ್ಯನಗೌಡರ್‌(27) ಎಂಬ ನವ ವಿವಾಹಿತ ಯುವತಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಸಾವಿಗೆ ಕಾರಣ ತಿಳಿಸಿ ಡೆತ್‌ನೋಟ್ ಬರೆದಿಟ್ಟು ತನ್ನ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಾಲ್ಕು ತಿಂಗಳ ಹಿಂದಷ್ಟೇ ಇವರು ಅಮರೇಶ್ ಎಂಬುವವರನ್ನು ಮದುವೆಯಾಗಿದ್ದರು. ಅಮರೇಶ ಖಾಸಗಿ ಕಂಪನಿಯ ಉದ್ಯೋಗಿ ಎನ್ನಲಾಗಿದ್ದು ಚೆನ್ನೈಗೆ ಕೆಲಸಕ್ಕೆ ತೆರಳಿದ್ದರು ಎನ್ನಲಾಗಿದೆ.

ಗಂಡನ ಮನೆಯವರ ನಿರಂತರ ಕಿರುಕುಳದ ಕುರಿತು ಡೆತ್ ನೋಟಲ್ಲಿ ಉಲ್ಲೇಖ ಮಾಡಲಾಗಿದೆ. ಪೂಜಾ ಬಣ್ಣದಲ್ಲಿ ಕಪ್ಪು ಇದ್ದುದರಿಂದ ಆಕೆಯ ಅತ್ತೆ ಚರ್ಮದ ಬಣ್ಣದ ಕುರಿತು ಅಪಹಾಸ್ಯ ಮಾಡುತ್ತಿದ್ದರು ಎಂದು ಮೃತ ಪೂಜಾ ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ಸದ್ಯ ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಬೆಟಗೇರಿ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿದ್ದಾರೆ.

Comments are closed.