Deepavali festival: ದೀಪಾವಳಿ ಹಬ್ಬ: ರೈಲು ನಿಲ್ದಾಣಗಳಲ್ಲಿ ದಟ್ಟಣೆ ತಡೆಗೆ ಸ್ಕೌಟ್ಸ್-ಗೈಡ್ಸ್ ತಂಡ ನೇಮಕ

Deepavali festival: ದೀಪಾವಳಿ ಹಬ್ಬದ ಹಿನ್ನೆಲೆ ಪ್ರಯಾಣಿಕರ(passenger’s) ದಟ್ಟಣೆ ಹೆಚ್ಚಿದೆ. ಇದನ್ನು ತಡೆಯುವ ಸಲುವಾಗಿ ಹೆಚ್ಚುವರಿ ಭದ್ರತೆ(Security) ಒದಗಿಸಲು ರೈಲ್ವೆ ಇಲಾಖೆ(Railway department) ನಿರ್ಧರಿಸಿದೆ. ಕೆಎಸ್‌ಆರ್‌ ಬೆಂಗಳೂರು, ಯಶವಂತಪುರ, ಬೆಂಗಳೂರು ಕಂಟೋನ್ಮೆಂಟ್ ರೈಲ್ವೆ ನಿಲ್ದಾ ಣಗಳಲ್ಲಿ(Railway station) ಭದ್ರತಾ ಅಧಿಕಾರಿಗಳು, ವಾಣಿಜ್ಯ ಸಿಬ್ಬಂದಿ ಮತ್ತು ಸೌಟ್ಸ್ ಮತ್ತು ಗೈಡ್ಸ್(Scout and guides) ಸ್ವಯಂ ಸೇವಕರ ನೇಮಕ ಮಾಡಲು ತೀರ್ಮಾನಿಸಿದೆ.

ಹೆಚ್ಚುವರಿ ಸಿಸಿಟಿವಿ ಕ್ಯಾಮೆರಾ ಮತ್ತು ಬ್ಯಾಗೇಜ್ ಸ್ಕ್ಯಾನರ್ ಗಳ ಅಳವಡಿಕೆ ಮಾಡಲಾಗಿದ್ದು, ಜನ ದಟ್ಟಣೆ ನಿಯಂತ್ರಿಸಲು ಹೆಚ್ಚುವರಿ ಟಿಕೆಟಿಂಗ್ ಕೌಂಟರ್‌ ಓಪನ್ ಮಾಡಲಾಗಿದೆ. ಮೆಜೆಸ್ಟಿಕ್ ಕೆಎಸ್‌ಆರ್‌ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗಾಗಿ ನೆರವು ಕೇಂದ್ರ ಕೂಡ ಸ್ಥಾಪನೆ ಮಾಡಲಾಗಿದೆ. ತಮ್ಮ ಊರುಗಳತ್ತ ತೆರಳುವ ಪ್ರಯಾಣಿಕರಿಗೆ ಸಮಸ್ಯೆಯಾಗದಂತೆ ರೈಲ್ವೇ ಇಲಾಖೆ ವ್ಯವಸ್ಥೆ ಕಲ್ಪಿಸಿದೆ. ಪ್ರಯಾಣಿಕರು ಸದುಪಯೋಗ ಪಡೆದುಕೊಳ್ಳುವಂತೆ ರೈಲ್ವೆ ಇಲಾಖೆ ಮನವಿ ಮಾಡಿದ್ದು, ರೈಲ್ವೆ ಇಲಾಖೆಯಿಂದ ಮಾಧ್ಯಮ ಪ್ರಕಟಣೆ ಹೊರಡಿಸಿದೆ.

Leave A Reply

Your email address will not be published.