Vijayalakshmi Darshan: ಇನ್‌ಸ್ಟಾಗ್ರಾಮ್‌ನಲ್ಲಿ ದರ್ಶನ್‌ ಅನ್‌ಫಾಲೋ ಮಾಡಿದ ವಿಜಯಲಕ್ಷ್ಮೀ

Share the Article

Vijayalakshmi Darshan: ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಪೊಲೀಸ್‌ ಕಸ್ಟಡಿಯಲ್ಲಿರುವ ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮಿ ಅವರು ಇದೀಗ ಮೌನಕ್ಕೆ ಶರಣಾಗಿದ್ದಾರೆ. ಈ ಘಟನೆ ನಡೆದ ಬಳಿಕ ವಿಜಯಲಕ್ಷ್ಮೀ ಎಲ್ಲೂ ಕಾಣಿಸಿಕೊಂಡಿಲ್ಲ. ಹಾಗೂ ಸೋಶಿಯಲ್‌ ಮೀಡಿಯಾದಲ್ಲೂ ಯಾವುದೇ ಪೋಸ್ಟ್‌ ಕೂಡಾ ಹಾಕಿಲ್ಲ.

ಬಾಯ್‌ಫ್ರೆಂಡ್‌ನಿಂದ ಸೆಕ್ಸ್ ಮಾತ್ರವಲ್ಲ ಮಗು ಕೂಡಾ ಬೇಕು ?! ಛೇ ಛೇ ಏನಿದು ಅಸಹ್ಯ ?! ಯುವರಾಜನ ಪತ್ನಿ ಮೇಲೆ ಆಕ್ರೋಶ !!

ಈ ಸಂದರ್ಭದಲ್ಲಿ ಅವರು ಇನ್‌ಸ್ಟಾಗ್ರಾಮ್‌ ಪ್ರೊಫೈಲ್‌ ಫೋಟೋನ ಡಿಲೀಟ್‌ ಮಾಡಿದ್ದು, ಅಷ್ಟೇ ಅಲ್ಲದೇ ನಟ ದರ್ಶನ್‌ ಅವರನ್ನು ಅನ್‌ಫಾಲೋ ಮಾಡಿದ್ದಾರೆ. ಈ ನಡೆ ಇದೀಗ ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿದೆ.

ದರ್ಶನ್‌, ಪವಿತ್ರಾ ಸೇರಿ 13 ಜನರನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿಸಲಾಗಿದೆ. ವಿಜಯಲಕ್ಷ್ಮೀ ಮತ್ತು ಪವಿತ್ರಾ ಮಧ್ಯೆ ಕಳೆದ ಹಲವು ತಿಂಗಳಿನಿಂದ ಸೋಷಿಯಲ್‌ ಮೀಡಿಯಾದಲ್ಲಿ ಟಾಕ್‌ವಾರ್‌ ನಡೆದಿತ್ತು. ಅನಂತರ ಎಲ್ಲವೂ ತಣ್ಣಗಾಗಿತ್ತು. ಈಗ ದರ್ಶನ್‌ ಅವರು ಪವಿತ್ರಗಾಗಿ ಕೊಲೆ ಮಾಡಿದರು ಎನ್ನು ಆರೋಪ ಹೊತ್ತಿರೋದು ವಿಜಯಲಕ್ಷ್ಮೀ ಅವರಿಗೆ ಸಾಕಷ್ಟು ಶಾಕಿಂಗ್‌ ಎನಿಸಿದರ ಜೊತೆಗೆ ಬೇಸರ ಕೂಡಾ ತಂದಿದೆ.

ಈಗ ವಿಜಯಲಕ್ಷ್ಮೀ ಅವರು ಇನ್ಸ್‌ಸ್ಟಾಗ್ರಾಮ್‌ನಲ್ಲಿ ದರ್ಶನ್‌ ಸೇರಿ ಎಲ್ಲರನ್ನೂ ಅನ್‌ಫಾಲೋ ಮಾಡಿದ್ದಾರೆ. ಹಾಗೂ ಇನ್‌ಸ್ಟಾಗ್ರಾಂ ಡಿಪಿ ಕೂಡಾ ತೆಗೆದು ಹಾಕಿದ್ದಾರೆ. ಈ ವಿಷಯ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

Actor Darshan: ರೇಣುಕಾಸ್ವಾಮಿ ಕೊಲೆ ಪ್ರಕರಣ; ನಟ ದರ್ಶನ್‌ ಸೇರಿ ಎಲ್ಲಾ ಆರೋಪಿಗಳಿಗೆ ಬಿರಿಯಾನಿ ಊಟ

Leave A Reply

Your email address will not be published.