Sonu Srinivas Gowda: ಸೋನು ಗೌಡಗೆ ಜಾಮೀನು ಮಂಜೂರು; ಕೋರ್ಟ್ ವಿಧಿಸಿದ ಷರತ್ತೇನು?
Sonu Srinivas Gowda: ಕಾನೂನುಬಾಹಿರಾಗಿ ಮಗುವನ್ನು ದತ್ತು ಪಡೆದ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ರೀಲ್ ಸ್ಟಾರ್ ಸೋನು ಶ್ರೀನಿವಾಸ್ ಗೌಡ ಅವರಿಗೆ ನ್ಯಾಯಾಂಗವು ಜಾಮೀನು ನೀಡಿದೆ. ಹೌದು. 14 ದಿನಗಳ ನ್ಯಾಯಾಂಗ ಬಂಧನವನ್ನು ಕೋರ್ಟ್ ಸೋನು ಅವರಿಗೆ ವಿಧಿಸಿತ್ತು. ಇದೀಗ ಎಪ್ರಿಲ್ 4 ರಂದು ಜಾಮೀನು ಸಿಕ್ಕಿದೆ.
ಇದನ್ನೂ ಓದಿ: SSLC : ಏ.15 ರಿಂದ ಎಸ್ ಎಸ್ಎಲ್ ಸಿ ಮೌಲ್ಯಮಾಪನ ಆರಂಭ
ಇಂದು (ಎಪ್ರಿಲ್ 5) ರಂದು ಮಧ್ಯಾಹ್ನ ಸೋನು ಅವರು ಬಿಡುಗಡೆಯಾಗುವ ಸಂಭವವಿದೆ.
ಇದನ್ನೂ ಓದಿ: Mangaluru Food Poisoning: ಮಂಗಳೂರಿನಲ್ಲಿ ಫೂಡ್ಪಾಯಿಸನ್ಗೆ ತುತ್ತಾದ ನೂರಾರು ಮಂದಿ
ಪಿಡಿಜೆ ಕೋರ್ಟ್ ಸೋನು ಗೌಡ ಅವರಿಗೆ ಜಾಮೀನು ಮಂಜೂರು ಮಾಡಲು 1 ಲಕ್ಷ ಬಾಂಡ್, ಇಬ್ಬರ ಶ್ಯೂರಿಟಿ ಮೇಲೆ ಜಾಮೀನು ನೀಡಲು ಕೋರ್ಟ್ ಒಪ್ಪಿಗೆ ನೀಡಿದೆ. ಈ ಎಲ್ಲಾ ಷರತ್ತುಗಳನ್ನು ಪಾಲಿಸಿದ ನಂತರ ಸೋನು ಶ್ರೀನಿವಾಸ ಗೌಡ ಅವರು ಬಿಡುಗಡೆಯಾಗಲಿದ್ದಾರೆ.