Home Crime Gurupatwant Singh Pannun: 2014 ರಿಂದ 2022ರ ನಡುವೆ ಖಲಿಸ್ತಾನಿ ಗುಂಪುಗಳು ಆಮ್ ಆದ್ಮಿ...

Gurupatwant Singh Pannun: 2014 ರಿಂದ 2022ರ ನಡುವೆ ಖಲಿಸ್ತಾನಿ ಗುಂಪುಗಳು ಆಮ್ ಆದ್ಮಿ ಪಕ್ಷಕ್ಕೆ 100 ಕೋಟಿ ರು. ನೀಡಿವೆ : ಖಲಿಸ್ತಾನಿ ಉಗ್ರ ಗುರುಪತ್‌ವಂತ್ ಸಿಂಗ್ ಪನ್ನುನ್

Gurupatwant Singh Pannun

Hindu neighbor gifts plot of land

Hindu neighbour gifts land to Muslim journalist

Gurupatwant Singh Pannun: ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) 2014ರಿಂದ 2022ರವರೆಗೆ ಸುಮಾರು 133.54 ಕೋಟಿ ರೂ.ಗಳ ಆರ್ಥಿಕ ನೆರವು ನೀಡಿವೆ ಎಂದು ಖಲಿಸ್ತಾನಿ ಭಯೋತ್ಪಾದಕ ಗುರುಪತ್‌ವಂತ್ ಸಿಂಗ್ ಪನ್ನುನ್ ಆಮ್ ಆದ್ಮಿ ಪಕ್ಷದ ವಿರುದ್ಧ ಆರೋಪಿಸಿದ್ದಾನೆ.

ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿರುವ ವೀಡಿಯೊದಲ್ಲಿ, ಪನ್ನುನ್‌ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಆರ್ಥಿಕ ನೆರವಿನ ಬದಲಾಗಿ ದೇವಿಂದರ್ ಪಾಲ್ ಸಿಂಗ್ ಭುಲ್ಲರ್ ನನ್ನು ಬಿಡುಗಡೆ ಮಾಡಲು ಪ್ರಸ್ತಾಪಿಸಿದ್ದಾಗಿ ಎಂದು ಹೇಳಿದ್ದಾನೆ. ಭುಲ್ಲರ್ 1993 ರ ದೆಹಲಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಅಪರಾಧಿಯಾಗಿದ್ದು, ಈ ಬಾಂಬ್ ದಾಳಿಯ ಪರಿಣಾಮವಾಗಿ ಒಂಬತ್ತು ಸಾವುಗಳು ಮತ್ತು 31 ಮಂದಿ ಗಾಯಗೊಂಡಿದ್ದರು.

ಇದನ್ನೂ ಓದಿ: Death News: ಹೋಳಿ ಸಂಭ್ರಮಾಚರಣೆ ಬಳಿಕ ನದಿಯಲ್ಲಿ ಮುಳುಗಿ ನಾಲ್ವರು ಯುವಕರು ಸಾವು

ಭಯೋತ್ಪಾದಕ ಗುರುಪತ್‌ವಂತ್ ಸಿಂಗ್ ಪನ್ನುನ್ ಈ ಹಿಂದೆ ಭಾರತದ ವಿರುದ್ಧ ಬೆದರಿಕೆಗಳನ್ನು ಹಾಕಿದ್ದಾನೆ, ಅದರಲ್ಲೂ ಸಂಸತ್ತಿಗೆ ಬಾಂಬ್ ಬೆದರಿಕೆಯನ್ನು ಹಾಕಿದ್ದ. ಅದೃಷ್ಟವಶಾತ್, ಈ ಬೆದರಿಕೆಗಳು ಕಾರ್ಯರೂಪಕ್ಕೆ ಬಂದಿಲ್ಲ.

ಇದನ್ನೂ ಓದಿ: CM Pinarayi Vijayan: ” ಭಾರತ್ ಮಾತಾ ಕೀ ಜಯ್ ” ಎಂಬ ಘೋಷಣೆ ಹುಟ್ಟು ಹಾಕಿದ್ದು ಮುಸ್ಲಿಮರು, ಇದನ್ನು ಬಿಟ್ಟುಕೊಡಲು ಆರ್ ಎಸ್ ಎಸ್ ಸಿದ್ಧವಿದೆಯಾ? : ತಮಿಳುನಾಡು ಸಿಎಂ ಪಿಣರಾಯಿ ವಿಜಯನ್

ಪ್ರಸ್ತುತ ದೆಹಲಿ ಅಬಕಾರಿ ನೀತಿ “ಹಗರಣ” ದಲ್ಲಿ ಕೇಜ್ರೀವಾಲ್‌ ಬಂಧನದ ನಂತರ ಜಾರಿ ನಿರ್ದೇಶನಾಲಯದ ವಶದಲ್ಲಿದ್ದಾರೆ. ಬಂಧನದಿಂದ ರಕ್ಷಣೆ ಕೋರಿ ಅವರ ಮನವಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ. ಸದ್ಯ ಅವರು ಮಾರ್ಚ್ 28ರ ವರೆಗೆ ಇಡಿ ಕಸ್ಟಡಿಯಲ್ಲಿ ಇರಲಿದ್ದಾರೆ.

ಬಂಧನದಲ್ಲಿದ್ದರೂ ಮುಖ್ಯಮಂತ್ರಿಯಾಗಿ ಮುಂದುವರಿಯಲು ಕೇಜ್ರಿವಾಲ್ ನಿರ್ಧರಿಸಿದ್ದು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕೇಜ್ರಿವಾಲ್ ಪಕ್ಷದ ಸಂಚಾಲಕರಾಗಿ ಪ್ರಚಾರ ಮಾಡಲು ಸಾಧ್ಯವಾಗದ ಕಾರಣ ಪಕ್ಷವು “ಮೈ ಭಿ ಕೇಜ್ರವಾಲ್” ಅಭಿಯಾನವನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ.