Hyderabad: ಯಾರೂ ಇಲ್ಲದಾಗ ಮನೆಗೆ ಬಾಯ್ ಫ್ರೆಂಡ್ ಕರೆಸಿದ ಹುಡುಗಿ – ಸಡನ್ ಆಗಿ ಎಂಟ್ರಿ ಕೊಟ್ಟ ಅಮ್ಮ, ನಡೆದೇ ಹೋಯ್ತು ಘೋರ ಕೃತ್ಯ

Share the Article

Hyderabad : ಯಾರೂ ಇಲ್ಲದ ವೇಳೆ ತನ್ನ ಮಗಳು ಬಾಯ್‌ಫ್ರೆಂಡ್‌ ಅನ್ನು ಮನೆಗೆ ಕರೆಸಿಕೊಂಡು, ಆತನ ಜೊತೆ ಇರುವುದನ್ನು ಕಂಡು ಕೋಪಗೊಂಡ ತಾಯಿ ತಾನೇ ಮಗಳನ್ನು ಕೊಂದ ಘಟನೆ ಹೈದರಾಬಾದ್‌ನಲ್ಲಿ (Hyderabad) ನಡೆದಿದೆ.

ಇದನ್ನೂ ಓದಿ: Sadguru: ತುರ್ತು ಮೆದುಳು ಚಿಕಿತ್ಸೆಗೆ ಒಳಗಾದ ಸದ್ಗುರು

ಹೌದು, ಹೈದರಾಬಾದಿನ ಇಬ್ರಾಹಿಂಪಟ್ಟಣದ ತಮ್ಮ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಭಾರ್ಗವಿ ಎಂಬ ಹುಡುಗಿಯು ತನ್ನ ಪ್ರಿಯಕರನನ್ನು ಮನೆಗೆ ಕರೆಸಿದ್ದಾಳೆ. ಈ ವೇಳೆ ಸಡನ್ ಆಗಿ ಎಂಟ್ರಿಕೊಟ್ಟ ಆಕೆಯ ತಾಯಿ, ಮಗಳು ಹುಡುಗನ ಜೊತೆ ಇರುವುದನ್ನು ಕಂಡು, ಕೋಪಗೊಂಡು ಕತ್ತು ಹಿಸುಕಿ ಮಗಳ ಕೊಲೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: Crime News: ಬೆಂಗಳೂರಿನಲ್ಲಿ ತನ್ನ 2 ವರ್ಷದ ಮಗುವನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಗಂಭೀರ

ಅಂದಹಾಗೆ ಬುಧವಾರ ಹುಡುಗಿಯ ತಾಯಿ ಜಂಗಮ್ಮ ಕೆಲಸ ಮುಗಿಸಿ ಮನೆಗೆ ಊಟಕ್ಕೆ ಬಂದಿದ್ದರು. ಈ ವೇಳೆ ಅವರ ಪುತ್ರಿ ಭಾರ್ಗವಿ ತನ್ನ ಪ್ರಿಯಕರನ ಜೊತೆಯಲ್ಲಿದ್ದಳು. ಮಗಳ ಪ್ರಿಯಕರನನ್ನು ಬೈದು ಮನೆಯಿಂದ ಹೊರಗೆ ಕಳುಹಿಸಿದ್ದಾಳೆ. ನಂತರ ಮಗಳ ಮೇಲೆ ಹಲ್ಲೆ ನಡೆಸಿ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಅಲ್ಲದೆ ಕೊಲೆ ಮಾಡಿದ್ದನ್ನು ಯುವತಿಯ ಅಪ್ರಾಪ್ತ ಸಹೋದರ, ತಾಯಿ ತನ್ನ ಸಹೋದರಿಯ ಮೇಲೆ ಹಲ್ಲೆ ಮಾಡುವುದನ್ನು ಕಿಟಕಿಯಿಂದ ನೋಡಿದ್ದೇನೆ ಎಂದು ತನ್ನ ತಾಯಿಯ ವಿರುದ್ಧ ದೂರು ದಾಖಲಿಸಿದ್ದಾನೆ.

Leave A Reply