Bengaluru: ಬೆಂಗಳೂರಿನ ಹೋಟೆಲ್ ನಲ್ಲಿ ಉಜ್ಬೇಕಿಸ್ತಾನ್ ಮಹಿಳೆ ಶವ ಪತ್ತೆ : ಕೊಲೆ ಶಂಕೆ

Share the Article

ಬೆಂಗಳೂರು ಪೊಲೀಸರು ನಗರದ ಹೋಟೆಲ್ ಒಂದರಲ್ಲಿ 37 ವರ್ಷದ ಉಜ್ಬೇಕಿಸ್ತಾನ್ ಮಹಿಳೆಯ ಶವ ಪತ್ತೆಯಾಗಿದೆ. ಮೃತ ಮಹಿಳೆಯನ್ನು ಜರೀನಾ ಎಂದು ಗುರುತಿಸಲಾದ ಮಹಿಳೆ ಬೆಂಗಳೂರಿನ ಶೇಷಾದ್ರಿಪುರಂ ಪ್ರದೇಶದ ಜಗದೀಶ್ ಹೋಟೆಲ್ಲಿನ ತನ್ನ ರೂಮ್ನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ . ಜರೀನಾ ನಾಲ್ಕು ದಿನಗಳ ಹಿಂದೆ ಪ್ರವಾಸಿ ವೀಸಾದಲ್ಲಿ ಬೆಂಗಳೂರಿಗೆ ಬಂದಿದ್ದರು .

ಇದನ್ನೂ ಓದಿ: OTT Platforms: ಒಟಿಟಿ ಪ್ಲಾಟ್ಫಾರ್ಮ್ಗಳ ನಿಷೇಧ : ಅಶ್ಲೀಲ ವಿಷಯದ ಆಧಾರದ ಮೇಲೆ 18 ಒಟಿಟಿ ಪ್ಲಾಟ್ಫಾರ್ಮ್ಗಳನ್ನು ತೆಗೆದುಹಾಕಿದ ಕೇಂದ್ರ ಸರ್ಕಾರ

ನಿನ್ನೆ ಮಧ್ಯಾಹ್ನ 4:30 ಕ್ಕೆ ಎರಡನೇ ಮಹಡಿಯಲ್ಲಿರುವ ಜರೀನಾ ಅವರ ರೂಮನ್ನು ಹೋಟೆಲ್ ಸಿಬ್ಬಂದಿ ತಟ್ಟಿದರು, ಆದರೆ ಯಾವುದೇ ಪ್ರತಿಕ್ರಿಯೆ ಬರದಿದ್ದಾಗ , ಅವರು ಮಾಸ್ಟರ್ ಕೀಲಿಯಿಂದ ಬಾಗಿಲನ್ನು ತೆರೆದಿದ್ದಾರೆ ಆಗಿ ಆಕೆ ಸತ್ತು ಬಿದ್ದಿರುವುದು ಕಂಡುಬಂದಿದೆ.

ಹೋಟೆಲ್ ಮ್ಯಾನೇಜರ್ ತಕ್ಷಣವೇ ದೂರು ದಾಖಲಿಸಿದ್ದು , ಪೊಲೀಸರು ನಿಗೂಢ ಸಾವಿನ ಪ್ರಕರಣವನ್ನು ದಾಖಲಿಸಿದ್ದಾರೆ. ಆದರೆ ಪ್ರಾಥಮಿಕ ವರದಿಯ ಪ್ರಕಾರ ಕೊಲೆ ಸಾದ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ಕಳುಹಿಸಲಾಗಿದೆ.

ಎಫ್ಎಸ್ಎಲ್ ತಂಡವು , ಶ್ವಾನ ದಳದೊಂದಿಗೆ , ಪ್ರಕರಣದ ಪುರಾವೆಗಳ ಕುರುಹುಗಳಿಗಾಗಿ ರೂಮನ್ನು ಸೂಕ್ಷ್ಮವಾಗಿ ಶೋಧಿಸಿದೆ, ಬುಧವಾರ ಜರೀನಾ ಅವರ ರೂಮಿಗೆ ಯಾರಾದರೂ ಭೇಟಿ ನೀಡಿದ್ದಾರೆಯೇ ಎಂದು ತಿಳಿಯಲು ಹೋಟೆಲ್ನ ಸಿಸಿಟಿವಿ ಮತ್ತು ರಿಜಿಸ್ಟರ್ ಅನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave A Reply