Dharmashala Soujanya Case: ಉಗ್ರ ರೂಪ ಪಡೆಯುವತ್ತ ಧರ್ಮಸ್ಥಳ ಸೌಜನ್ಯ ಪ್ರಕರಣ- ದೆಹಲಿಯಲ್ಲಿ ಸೌಜನ್ಯ ಹೋರಾಟಗಾರರಿಗೆ ಆಟೋ ಚಾಲಕರಿಂದ ಭರ್ಜರಿ ಸ್ವಾಗತ !!

Share the Article

12 ವರ್ಷಗಳ ಹಿಂದೆ ಧರ್ಮಸ್ಥಳದ ನೇತ್ರಾವತಿ ಬಳಿ ಅತ್ಯಾಚಾರವಾಗಿ ಅನುಮಾನಸ್ಪದವಾಗಿ ಸಾವಿಗೀಡಾದ ಹಾಗೂ ನಾಡಿನಾದ್ಯಂತ ಸಂಚಲನ ಸೃಷ್ಟಿಸಿದ ಸೌಜನ್ಯಳ(Dharmasthala sowjanya case) ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇನ್ಮುಂದೆ ಉಗ್ರ ಹೋರಾಟದ ಸ್ವರೂಪ ಪಡೆಯಲು ಮುಂದಾಗಿದ್ದು, ಹೋರಾಟ ರಾಷ್ಟ್ರ ರಾಜಧಾನಿ ತಲುಪಿದೆ. ಇದಕ್ಕೆ ಮುನ್ನುಡಿ ಎಂಬಂತೆ ದೆಹಲಿ ಆಟೋ ಚಾಲಕರು ತಮ್ಮ ತಾಯ್ನಾಡಿಗೆ ಬಂದ ಸೌಜನ್ಯ ಹೋರಾಟಗಾರರನ್ನು ಅಧ್ಧೂರಿಯಾಗಿ ಸ್ವಾಗತಿಸಿದ್ದಾರೆ.

ಇದನ್ನೂ ಓದಿ: Rameswaram Cafe: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಇಟ್ಟ ಶಂಕಿತನ ಚಹರೆ ಸಿಸಿಟಿವಿಯಲ್ಲಿ ಸೆರೆ

ಹೌದು, ಸೌಜನ್ಯ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ, ಪ್ರಸನ್ನ ರವಿ, ರವಿ ಮಟ್ಟಣ್ಣನವರ್ ಹಾಗೂ ಸೌಜನ್ಯ ಕುಟುಂಬದವರಾದಿಯಾಗಿ ಅನೇಕ ಹೋರಾಟಗಾರರು ದೆಹಲಿ ರೈಲ್ವೆ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ‘ಧರ್ಮಸ್ಥಳ ನಿರ್ಭಯಾ ಪ್ರಕರಣಕ್ಕೆ ಜಯವಾಗಲಿ’ ಎಂಬ ಜಯಘೋಷದೊಂದಿಗೆ ಆಟೋ ಹಾಗೂ ಟ್ಯಾಕ್ಸಿ ಚಾಲಕರು ಸ್ವಾಗತಕೋರಿ ನಮ್ಮ ಸಂಪೂರ್ಣ ಬೆಂಬಲ ನಿಮಗೆ ಎಂಬ ಮಹತ್ವದ ಸಂದೇಶ ರವಾನಿಸಿದರು. ಈ ಮೂಲಕ ಕೇವಲ ರಾಜ್ಯ, ನೆರೆ ರಾಜ್ಯ ಮಾತ್ರವಲ್ಲ ರಾಷ್ಟ್ರ ರಾಜಧಾನಿ ದೆಹಲಿಗೂ ಸೌಜನ್ಯಳ ಆರ್ತನಾದ ತಲುಪಿತು, ನ್ಯಾಯಕ್ಕಾಗಿ ಹಂಬಲಿಸೋ ಆ ಹೆಣ್ಣುಮಗುವಿನ ಕೂಗು ಅಲ್ಲಿ ಪ್ರತಿಧ್ವನಿಸಿತು.

ಆರಂಭದಲ್ಲಿ ಪ್ರಮುಖ ಹೋರಾಟಗಾರ, ದೆಹಲಿ ಹೋರಾಟದ ನೇತಾರ ರವಿ ಮಟ್ಟಣ್ಣನವರ್ ಅವರು ಎಲ್ಲಾ ದೆಹಲಿ ಬಂಧುಗಳಿಗೆ ಹೋರಾಟಗಾರರ ಪರಿಚಯ ಮಾಡಿಸಿ, ಅವರ ಬೆಂಬಲ ಕೋರಿದರು. ನಿಮ್ಮೊಂದಿಗೆ ನಾವಿದ್ದೇವೆ, ನ್ಯಾಯ ಸಿಕ್ಕೇ ಸಿಗುತ್ತದೆ ಎಂಬ ಘೋಷಣೆಯೊಂದಿಗೆ ನೆರದವೆರಲೆಲ್ಲಾ ಬೆಂಬಲ ಸೂಚಿದರು. ಬಳಿಕ ಮಹೇಶ್ ಶೆಟ್ಟಿ ತಿಮರೋಡಿಯವರು ರೋಷಭರಿತ ಮಾತುಗಳೊಂದಿಗೆ ತಮ್ಮ ಆಕ್ರೋಶ ಹೊರಹಾಕಿದರು.

Leave A Reply