Rameswaram Cafe: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಇಟ್ಟ ಶಂಕಿತನ ಚಹರೆ ಸಿಸಿಟಿವಿಯಲ್ಲಿ ಸೆರೆ

Bengaluru: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಕುರಿತಂತೆ ಸಿಸಿಟಿವಿಯಲ್ಲಿ ಶಂಕಿತ ಆರೋಪಿಯ ಚಹರೆ, ಚಲನವಲನ ದೃಶ್ಯ ಸೆರೆಯಾಗಿದೆ. ತಲೆ ಮೇಲೆ ಹ್ಯಾಟ್‌ ಹಾಕಿಕೊಂಡಿರುವ ಶಂಕಿತ ವ್ಯಕ್ತಿಯೋರ್ವ ಓಡಾಡಿರುವ ಅನುಮಾನ ವ್ಯಕ್ತಗೊಂಡಿದೆ. ಬಿಳಿಬಣ್ಣದ ಹ್ಯಾಟ್‌ ಮೇಲೆ ನಂಬರ್‌ 10 ಎಂದು ನಮೂದಿಸಲಾಗಿದೆ. ಇದೀಗ ಆರೋಪಿಗಾಗಿ ಪೊಲೀಸರು ತೀವ್ರ ತನಿಖೆ ನಡೆಸುತ್ತಿರುವುದಾಗಿ ವರದಿಯಾಗಿದೆ.

ಇದನ್ನೂ ಓದಿ: Vitla: ಕರ್ನಾಟಕಬ್ಯಾಂಕ್‌ ದರೋಡೆ ಪ್ರಕರಣ; ನಾಲ್ಕು ಜನ ಆರೋಪಿಗಳು ಪೊಲೀಸ್‌ ವಶಕ್ಕೆ

ಕಪ್ಪು ಬಣ್ಣದ ಮಾಸ್ಕ್‌ ಹಾಕಿದ್ದು, ಕಪ್ಪು ಬಣ್ಣದ ಬ್ಯಾಗ್‌ ಜೊತೆ ರಾಮೇಶ್ವರಂ ಕೆಫೆಗೆ ಬಂದಿರುವ ಕುರಿತು ಸಿಸಿಟಿವಿಯಲ್ಲಿ ಸೆರೆಯಾಗಿದೆ. ತಿಂಡಿಯ ಪ್ಲೇಟನ್ನು ಹಿಡಿದು ವ್ಯಕ್ತಿ ಕೆಫೆಯಲ್ಲಿ ಓಡಾಡಿರುವ ದೃಶ್ಯ ಕೂಡಾ ಸೆರೆಯಾಗಿದೆ. ಅಷ್ಟು ಮಾತ್ರವಲ್ಲದೇ ವಾಚ್‌ನಲ್ಲಿ ಟೈಂ ನೋಡುತ್ತಾ ಕೆಫೆಯಿಂದ ಹೊರಗೆ ಬಂದಿದ್ದು, ನಂತರ ಎಡಭಾಗಕ್ಕೆ ಹೋಗಿದ್ದಾನೆ. ಈ ಕುರಿತು ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.

Leave A Reply

Your email address will not be published.