Vitla: ಕರ್ನಾಟಕಬ್ಯಾಂಕ್‌ ದರೋಡೆ ಪ್ರಕರಣ; ನಾಲ್ಕು ಜನ ಆರೋಪಿಗಳು ಪೊಲೀಸ್‌ ವಶಕ್ಕೆ

Vitla: ಕರ್ನಾಟಕ ಬ್ಯಾಂಕ್‌ಗೆ ನುಗ್ಗಿ ನಗ,ನಗದು ದೋಚಿದ ಪ್ರಕರಣದ ಕುರಿತು ಇದೀಗ ಮಂಗಳೂರು ಸಿಸಿಬಿ ಪೊಲೀಸರು ಮತ್ತು ದ.ಕ.ಕ್ರೈಂ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ನಾಲ್ಕು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ದೊರಕಿದೆ. ಹಾಗೂ ಉಳಿದ ಆರೋಪಿಗಳಿಗೆ ಬಲೆ ಬೀಸಲಾಗಿದೆ.

ಇದನ್ನೂ ಓದಿ: PSI Exam: PSI ರೀ ಎಕ್ಸಾಂ ರಿಸಲ್ಟ್ ಮಾಹಿತಿ

ಪ್ರಕರಣ ಕುರಿತು ಮಂಗಳೂರು ಸಿಸಿಬಿ ಪೊಲೀಸರ ತಂಡ ಮತ್ತು ದಕ್ಷಿಣ ಕನ್ನಡ ಜಿಲ್ಲಾ ವಿಶೇಷ ಕ್ರೈಂ ಪೊಲೀಸರ ತಂಡ ಆರೋಪಿಗಳ ಕೃತ್ಯಕ್ಕೆ ಬಳಸಿದ ಕಾರಿನ ಸಿಸಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ಮಾಡಿದ್ದರು.

ಇದೀಗ ವಶಕ್ಕೆ ಪಡೆದ ಆರೋಪಿಗಳಿಂದ ವಾಹನಗಳನ್ನು ಪಡೆದುಕೊಂಡಿದ್ದು, ಬ್ಯಾಂಕ್‌ನಿಂದ ದರೋಡೆ ಮಾಡಿದ ಚಿನ್ನಾಭರಣಗಳನ್ನು ಹೊರ ರಾಜ್ಯದಲ್ಲಿ ಮಾರಾಟ ಮಾಡಲಾಗಿದ್ದು, ಅದನ್ನು ವಶಕ್ಕೆ ಪಡೆಯಲು ಪೊಲೀಸರು ಮುಂದಾಗಿರುವ ಕುರಿತು ವರದಿಯಾಗಿದೆ. ದರೋಡೆ ಪ್ರಕರಣದ ಆರೋಪಿಗಳು ಈ ಹಿಂದೆ ಬೇರೆ ಅಪರಾಧ ಕೃತ್ಯಗಳಲ್ಲಿ ಕೂಡಾ ಭಾಗಿಯಾಗಿರುವ ಕುರಿತು ಶಂಕೆ ವ್ಯಕ್ತವಾಗಿದ್ದು, ತನಿಖೆ ತೀವ್ರಗೊಂಡಿದೆ.

Leave A Reply

Your email address will not be published.