Land Registration: ರಾಜ್ಯದ ಜನತೆಗೆ ಬೊಂಬಾಟ್ ನ್ಯೂಸ್- ಇನ್ಮುಂದೆ ಮನೆಯಲ್ಲಿ ಕುಳಿತೇ ಆಸ್ತಿ ರಿಜಿಸ್ಟ್ರೇಷನ್ ಮಾಡಿ
Land Registration: ಆಸ್ತಿ ನೋಂದಣಿ ಮಾಡುವವರಿಗೆ ರಾಜ್ಯ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದದು, ಇನ್ಮುಂದೆ ನೀವು ಆಸ್ತಿ ನೋಂದಣಿ ಮಾಡಲು ತಾಲ್ಲೂಕು ಕಛೇರಿಗಳಿಗೆ ಹೋಗಿ ಕಾದು ನಿಲ್ಲೋದು ಬೇಡ. ಬದಲಿಗೆ ಮನೆಯಲ್ಲಿ ಕೂತೇ ನಿಮ್ಮ ಆಸ್ತಿಯನ್ನು ನೋಂದಣಿ ಮಾಡಬಹುದು.
ಇದನ್ನೂ ಓದಿ: Arecanut Tree Benefits: ಬಹುಪಯೋಗಿ ಅಡಿಕೆ ಮರದ ಬಗ್ಗೆ ನಿಮಗೆಷ್ಟು ಗೊತ್ತು!!
ಹೌದು, ಇನ್ನು ಮುಂದೆ ಭೂಮಿ ಸೇರಿದಂತೆ ಯಾವುದೇ ನೋಂದಣಿಗೆ (Land Registration) ಉಪನೋಂದಣಿ ಕಚೇರಿಗೆ (Sub Registrar office) ಅನಗತ್ಯ ಅಲೆಯಬೇಕಾಗಿಲ್ಲ ಮನೆಯಿಂದಲೇ ರಿಜಿಸ್ಟ್ರೇಷನ್ (Registration from Home) ಮಾಡಬಹುದು. ಯಾಕೆಂದರೆ ಸಿಎಂ ಸಿದ್ದರಾಮಯ್ಯನವರ ಸರ್ಕಾರ ರಾಜ್ಯದ ಜನತೆಗೆ ಹೊಸ ತಿದ್ದುಪಡಿ ತಂದು ಸುಲಭ ಮಾರ್ಗ ನೀಡಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ (Krishna Byregowda) ಅವರು ಮಂಡಿಸಿದ ಸ್ಟ್ಯಾಂಪ್ ತಿದ್ದುಪಡಿ ವಿಧೇಯಕ-2024ರಲ್ಲಿ (Stamp amendment bill) ಈ ಅವಕಾಶ ಕಲ್ಪಿಸಲಾಗಿದೆ.
ಅಂದಹಾಗೆ ಬುಧವಾರ ವಿಧಾನಸಭೆಯಲ್ಲಿ ಸ್ಟ್ಯಾಂಪ್ ತಿದ್ದುಪಡಿ ವಿಧೇಯಕ-2024 ಅನ್ನು ಮಂಡಿಸಿ ಮಾತನಾಡಿದ ಅವರು, “ನೋಂದಣಿ ಕಚೇರಿಗಳಲ್ಲಿ ಜನಸಂದಣಿಯನ್ನು ನಿಯಂತ್ರಿಸುವ ಸಲುವಾಗಿ ಎರಡು ಮಹತ್ವದ ತಿದ್ದುಪಡಿಗಳನ್ನು ತರಲಾಗಿದೆ. ಈ ವೇಳೆ ಮಾತನಾಡಿದ ಕೃಷ್ಣ ಭೈರೇಗೌಡರು ಆ ಪೈಕಿ ಮೊದಲ ತಿದ್ದುಪಡಿ ಆಸ್ತಿ ಮಾರಾಟಗಾರರು ಹಾಗೂ ಕೊಳ್ಳುವವರು ಇಬ್ಬರ ಉಪಸ್ಥಿತಿಯೂ ಇಲ್ಲದೆ ತಾವಿದ್ದಲ್ಲಿದಂಲೇ ತಾಂತ್ರಿಕವಾಗಿ ಆಸ್ತಿ ನೋಂದಣಿ ಮಾಡಿಸಿಕೊಳ್ಳಲು ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ” ಎಂದು ಮಾಹಿತಿ ನೀಡಿದರು.
ಇನ್ನು ಮುಂದೆ ಇ-ಆಸ್ತಿ ಮೂಲಕ ಖಾತೆ ಆಗಿದ್ದರೆ ಮಾತ್ರ ನೋಂದಣಿ ಪ್ರಕ್ರಿಯೆಗೆ ಚಾಲನೆ ಸಿಗಲಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹೌಸಿಂಗ್ ಬೋರ್ಡ್ ಹಾಗೂ ಕಾವೇರಿ ಡೇಟಾಬೇಸ್‌ನಿಂದ ಅಸಲಿ ಖಾತಾ ಪರಿಶೀಲನೆ ನಡೆಸಿದ ನಂತರವೇ ನೋಂದಣಿ ಮುಂದುವರೆಯಲಿದೆ. ಆ ಮೂಲಕ ಇ-ಖಾತಾವನ್ನು ನೀಡಲಾಗುವುದು. ಇಂತಹ ಕ್ರಮಗಳಿಂದ ಅಕ್ರಮಗಳಿಗೂ ತಡೆಯೊಡ್ಡಿದಂತಾಗುತ್ತದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸದನಕ್ಕೆ ಮಾಹಿತಿ ನೀಡಿದರು. ಇನ್ನು ವಿರೋಧ ಪಕ್ಷಗಳ ಕೂಡ ಸರ್ಕಾರದ ಈ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ventolin nz: Ventolin inhaler – ventolin brand
compare ventolin prices
furosemide 100 mg: lasix online – lasix 100 mg
reputable mexican pharmacies online: medication from mexico – pharmacies in mexico that ship to usa
indian pharmacy paypal: Online medication home delivery – indian pharmacy