Home Crime Puttur: ಮದುವೆಯಾಗಿ ಒಂದೂವರೆ ತಿಂಗಳಿಗೆ ನೇಣಿಗೆ ಶರಣಾದ ನವವಿವಾಹಿತೆ; ಅಕ್ಕನಿಂದ ದೂರು ದಾಖಲು

Puttur: ಮದುವೆಯಾಗಿ ಒಂದೂವರೆ ತಿಂಗಳಿಗೆ ನೇಣಿಗೆ ಶರಣಾದ ನವವಿವಾಹಿತೆ; ಅಕ್ಕನಿಂದ ದೂರು ದಾಖಲು

Puttur

Hindu neighbor gifts plot of land

Hindu neighbour gifts land to Muslim journalist

Puttur: ಡಿ.4 ರಂದು ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಕುರಿಯದಲ್ಲಿ ನವ ವಿವಾಹಿತೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ರೋಹಿತ್‌ ಎಂಬವರ ಪತ್ನಿ ಶೋಭಾ (24) ಆತ್ಮಹತ್ಯೆಗೆ ಶರಣಾದವರು. ಕೇವಲ ಒಂದೂವರೆ ತಿಂಗಳ ಹಿಂದಷ್ಟೇ ಇವರ ವಿವಾಹ ನಡೆದಿತ್ತು. ಆದರೆ ಅದೇನಾಯಿತೋ ನವವಿವಾಹಿತೆ ನೇಣಿಗೆ ಕೊರಳೊಡ್ಡಿದ್ದಾರೆ.

ಇದನ್ನೂ ಓದಿ: Barnawa: ಅರಗಿನ ಅರಮನೆಯ ಜಾಗ ಹಿಂದೂಗಳದ್ದು!!! ನ್ಯಾಯಾಲಯದ ಮಹತ್ವದ ತೀರ್ಪು

ಶೋಭಾ ಅವರು ಫೆ.4 ರಂದು ತಮ್ಮ ಪತಿ ಮನೆಯ ಅಟ್ಟದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆ ಸಂಬಂಧ ಇದೀಗ ಶೋಭಾ ಅವರ ಅಕ್ಕ ಬೆಳಂದೂರು ಗ್ರಾಮದ ಕುದ್ದಾರು ನಯನ ಎಂಬುವವರು ಪುತ್ತೂರು ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಈ ಅಸಹಜ ಸಾವಿನ ಕುರಿತು ತನಿಖೆ ನಡೆಸುತ್ತಿದ್ದಾರೆ.

ಕೃತ್ಯ ನಡೆದ ದಿನ ವಿಠಲ ಶೆಟ್ಟಿ ಎಂಬುವವರ ಮನೆಯಲ್ಲಿ ನಾಗತಂಬಿಲ ಕಾಯಕ್ರಮವಿದ್ದರಿಂದ ರೋಹಿತ್‌ ಮತ್ತು ಅವರ ತಂದೆ ಅಲ್ಲಿಗೆ ಹೋಗಿದ್ದರು. ಉಳಿದ ಹಾಗೆ ರೋಹಿತ್‌ ಅವರ ಅಣ್ಣಂದಿರು, ಅತ್ತಿಗೆಯಂದಿರ ಮನೆಗೆ ಹೋಗಿದ್ದರು. ಹಾಗಾಗಿ ಶೋಭಾ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭದಲ್ಲಿ ಮನೆಯಲ್ಲಿ ಅತ್ತೆ ಹೊರತು ಬೇರೆ ಯಾರೂ ಇರಲಿಲ್ಲ ಎಂದು ವರದಿಯಾಗಿದೆ.