Barnawa: ಅರಗಿನ ಅರಮನೆಯ ಜಾಗ ಹಿಂದೂಗಳದ್ದು!!! ನ್ಯಾಯಾಲಯದ ಮಹತ್ವದ ತೀರ್ಪು

ಹಿಂದೂಗಳಿಗೆ ತಮ್ಮ ಪವಿತ್ರ ಸ್ಥಳಗಳಾದ ಅಯೋಧ್ಯೆ ರಾಮಮಂದಿರ, ಕಾಶಿಯ ಜ್ಞಾನವಾಪಿ ಮಸೀದಿಯ ಪುರಾತನ ಶೃಂಗಾರ ಗೌರಿ ದೇಗುಲದ ಪ್ರಕರಣಗಳು ಇತ್ಯರ್ಥವಾಗಿ ಗೆಲವು ಸಿಗುತ್ತಿರುವುದರ ಜೊತೆಗೆ ಮಹಾಭಾರತದ ಪ್ರಕರಣದಲ್ಲಿ ಸಹ ಹಿಂದೂಗಳಿಗೆ ಜಯವಾಗಿದೆ .

ಬರ್ನಾವಾ: ಅಯೋಧ್ಯೆ ರಾಮಮಂದಿರ, ಕಾಶಿಯ ಜ್ಞಾನವಾಪಿ ಮಸೀದಿಯ ಪುರಾತನ ಶೃಂಗಾರ ಗೌರಿ ದೇಗುಲದ ಪ್ರಕರಣಗಳು ಇತ್ಯರ್ಥವಾಗಿ ಗೆಲವು ಸಿಗುತ್ತಿರುವುದರ ಜೊತೆಗೆ ಮಹಾಭಾರತದ ಪ್ರಕರಣದಲ್ಲಿ ಸಹ ಹಿಂದೂಗಳಿಗೆ ಜಯವಾಗಿದೆ. ದೇಶದ ಉತ್ತರಪ್ರದೇಶದ ಬರ್ನಾವಾ ದಲ್ಲಿರುವ ಬದ್ರುದ್ದೀನ್ ಗೋರಿ ಜಾಗವು ಮಹಾಭಾರತದ ಅರಗಿನ ಅರಮನೆಯ ಸ್ಥಳವಾಗಿದೆ ಎಂಬ ಅರ್ಜಿದಾರ ವಾದನವನ್ನು ಜಿಲ್ಲಾ ನ್ಯಾಯಾಲಯ ಎತ್ತಿ ಹಿಡಿದಿದೆ. ಈ ಮೂಲಕ ಹಿಂದೂ ಮುಸ್ಲಿಂ 53 ವರ್ಷಗಳಿಂದ ನಡೆಯುತ್ತಿದ್ದ ಜಗಳಕ್ಕೆ ತಾತ್ಕಾಲಿಕವಾಗಿ ಬ್ರೇಕ್ ಬಿದ್ದಿದೆ.

ಏನಿದು ಪ್ರಕರಣವೆಂದರೆ, ಉತ್ತರ ಪ್ರದೇಶದ ಬರ್ನಾವಾದಲ್ಲಿ ಇರುವ ಬದ್ರುದ್ದೀನ್ ಗೋರಿ ಯ 36 ಎಕರೆ ಭೂಮಿ ಇದೆ. ಈ ವಿವಾದಿತ ಜಾಗದಲ್ಲಿ ಗುರುಕುಲ ಮಾಡಲು ಬೀಡಿ ಎಂದೂ ಹಿಂದೂಗಳು , ಇದು ಶೇಕ್ ಬದ್ರುದ್ದೀನ್ ಗೋರಿ ಎಂದು ಮುಸ್ಲಿಂ ಪರ ವಕೀಲರು ವಾದ ಮಾಡುತ್ತಾರೆ. ಈ ಅರ್ಜಿಯನ್ನು ತಿರಸ್ಕರಿಸಿ ಬ್ರಹ್ಮಚಾರಿ ಕೃಷ್ಣದತ್ತ, ಇದು ಮಹಾಭಾರತ ಕಾಲದ ಸ್ಥಳ. ದುರ್ಯೋಧನ ಪಾಂಡವರನ್ನು ಕೊಲ್ಲಲು ಕಟ್ಟಿದ ಅರಮನೆ ಎಂದು, ಸ್ಥಳ ಬಿಟ್ಟು ಕೊಡಿ ಎಂದು ವಾದ ಮಾಡಿದ್ದಾರೆ.

1952 ಸರಕಾರ ಪುರಾತತ್ತ್ವ ಇಲಾಖೆಯ ಸಂಶೋಧನೆಗೆ ತಿಳಿಸಿತು. 2018 ರಲ್ಲಿ ಶುರುಕು ಸಿಕ್ಕಿತ್ತು. ಬೆಂಕಿ ಬಿದ್ದಾಗ ಬಳಸಿದ ಸುರಂಗ, 4500 ವರ್ಷಗಳ ಹಳೆಯ ಮಣ್ಣಿನ ಪಾತ್ರೆಗಳು, ಮಾನವನ ಅಸ್ಥಿಪಂಜರದ ಕುರುಹುಗಳು ಸಂಶೋಧಕರಿಗೆ ಸಿಕ್ಕವು. ಈ ವರದಿಯ ಅನ್ವಯ ಕೋರ್ಟ್ ಈ ಜಾಗ ಹಿಂದೂಗಳಿಗೆ ಸೇರಿದ್ದು ಎಂದು ತೀರ್ಪು ನೀಡಿದೆ. ಆದರೆ ಅರ್ಜಿದಾರರಾದ ಕೃಷ್ಣದತ್ತ ಮಹಾರಾಜ್, ಮುಕೀಂ ಖಾನ್ ಇಬ್ಬರೂ ನಿಧನರಾಗಿದ್ದಾರೆ.

1 Comment
  1. […] ಇದನ್ನೂ ಓದಿ: Barnawa: ಅರಗಿನ ಅರಮನೆಯ ಜಾಗ ಹಿಂದೂಗಳದ್ದು!!! ನ್ಯ… […]

Leave A Reply

Your email address will not be published.