Rahul Gandhi: ರಾಹುಲ್‌ ಗಾಂಧಿ ಬೆಂಗಾವಲು ವಾಹನದ ಮೇಲೆ ಕಲ್ಲು ತೂರಾಟ;

Share the Article

Rahul Gandhi: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಬೆಂಗಾವಲು ವಾಹನದ ಮೇಲೆ ದಾಳಿ ನಡೆದಿದೆ. ಕೆಲ ಅಪರಿಚಿತರು ಅವರ ಕಾರಿಗೆ ಕಲ್ಲು ಎಸೆದಿದ್ದಾರೆ. ಇದರ ಪರಿಣಾಮ ಕಾರಿನ ಗಾಜು ಒಡೆದಿದೆ. ಹಿಂದಿನಿಂದ ಯಾರೋ ವಾಹನಕ್ಕೆ ಕಲ್ಲು ಎಸೆದಿದ್ದಾರೆ ಎಂದು ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ.

ಇದನ್ನೂ ಓದಿ: HSRP ನಂಬರ್ ಪ್ಲೇಟ್ ಅಳವಡಿಸದಿದ್ರೆ ಕಟ್ಟಬೇಕು ಇಷ್ಟು ದೊಡ್ಡ ಮೊತ್ತದ ದಂಡ !!

ಇಂದು ಭಾರತ್ ಜೋಡೋ ನ್ಯಾಯ್ ಯಾತ್ರೆ ಬಂಗಾಳ ತಲುಪಿದೆ. ಈ ವೇಳೆ ಕಾಂಗ್ರೆಸ್ ಮುಖಂಡರ ಬೆಂಗಾವಲು ವಾಹನದ ಮೇಲೆ ದಾಳಿ ನಡೆದಿದೆ.

ಅವರ ಕಾರಿಗೆ ಕೆಲವರು ಕಲ್ಲು ತೂರಾಟ ನಡೆಸಿದ್ದಾರೆ. ಅವರು ಪ್ರಯಾಣಿಸುತ್ತಿದ್ದ ಕಾರಿನ ಗಾಜು ಒಡೆದಿದೆ. ಯಾತ್ರೆಯು ಬಿಹಾರದಿಂದ ಪಶ್ಚಿಮ ಬಂಗಾಳಕ್ಕೆ ಮರು ಪ್ರವೇಶಿಸುತ್ತಿದ್ದಾಗ ಮಾಲ್ಡಾದ ಹರಿಶ್ಚಂದ್ರಪುರ ಪ್ರದೇಶದಲ್ಲಿ ದಾಳಿ ನಡೆದಿದೆ. ಈ ಪ್ರಕರಣದಲ್ಲಿ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಹುಲ್‌ ಗಾಂಧಿ ಅವರ ಕಾರನ್ನು ಗುರಿಯಾಗಿಸಿಕೊಂಡು ಅದರ ವಿಂಡೋ ಗ್ಲಾಸ್‌ ಪುಡಿ ಮಾಡಲಾಗಿದೆ ಎಂದು ಕಾಂಗ್ರೆಸ್‌ ಬುಧವಾರ ಹೇಳಿದೆ.

Leave A Reply