HSRP ನಂಬರ್ ಪ್ಲೇಟ್ ಅಳವಡಿಸದಿದ್ರೆ ಕಟ್ಟಬೇಕು ಇಷ್ಟು ದೊಡ್ಡ ಮೊತ್ತದ ದಂಡ !!

HSRP Number plate: ಹೈಸೆಕ್ಯೂರಿಟಿ ನಂಬರ್ ಪ್ಲೇಟ್ ಅಳವಡಿಸಲು ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ ನೀಡಿರುವ ಗಡುವು ಫೆಬ್ರವರಿ 17 ಅಂತ್ಯವಾಗಲಿದೆ. ಇದು ಮುಗಿದರೂ HSRP ನಂಬರ್ ಪ್ಲೇಟ್ ಅಳವಡಿಸದವರು ದುಬಾರಿ ದಂಡ ಪಾವತಿಸಬೇಕಾಗುತ್ತದೆ. ಈ ಕುರಿತಂತೆ ಇದೀಗ ಬಿಗ್ ಅಪ್ಡೇಟ್ ಒಂದು ಹೊರಬಿದ್ದಿದೆ.

ಇದನ್ನೂ ಓದಿ: Suicide Tragedy: 6ನೇ ಮಹಡಿಯಿಂದ ಜಿಗಿದು PES ಕಾಲೇಜಿನ ವಿದ್ಯಾರ್ಥಿ ಆತ್ಮಹತ್ಯೆ!

ಹೌದು, ದೇಶದಲ್ಲಿ 2019 ರ ಏಪ್ರಿಲ್ 1 ಕ್ಕಿಂತ ಮೊದಲು ನೋಂದಣಿಯಾದ ವಾಹನಗಳು ಫೆಬ್ರವರಿ 17ರ ಒಳಗಾಗಿ High Security Registration Plate (HSRP) ಅಳವಡಿಸಿಕೊಳ್ಳಬೇಕು. ಇದು ಕಡ್ಡಾಯ ಕೂಡ. ಇಲ್ಲವಾದರೆ ಭಾರೀ ದಂಡ ಕಟ್ಟಬೇಕಾದೀತು. ಎಷ್ಟು ದಂಡ ಕಟ್ಟಬೇಕು ಎಂಬುದು ಇಲ್ಲಿದೆ ನೋಡಿ.

HARP ನಂಬರ್ ಪ್ಲೇಟ್ ಅಳವಡಿಸದಿದ್ದರೆ ಕಟ್ಟಬೇಕಾದ ದಂಡ:

HSRP Number Plate ಇಲ್ಲದ ವಾಹನ ಮಾಲೀಕರೆ ಎಚ್ಚರ. ಯಾಕೆಂದರೆ ನೀವು ಈ ನಂಬರ್ ಪ್ಲೇಟ್ ಅಳವಡಿಸದೆ ಮೊದಲ ಬಾರಿಗೆ ರಸ್ತೆಗಿಳಿದರೆ 1000 ದಂಡ ಪಾವತಿಸಬೇಕು. ಇದರಿಂದಲೂ ಎಚ್ಚರಗೊಳ್ಳದೆ ನಂಬರ್ ಪ್ಲೇಟ್ ಹಾಕಿಸದೆ ಎರಡನೇ ಬಾರಿ ರಸ್ತೆಗಿಳಿದರೆ 2000 ಹಾಗೂ ಪದೇ ಪದೇ ಇದೆ ತಪ್ಪಾದರೆ ಇನ್ ಹೆಚ್ಚಿನ ದಂಡ ವಿಧಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ.

Homeರಾಜಕೀಯ

HSRP Number Plate: ವಾಹನ ಮಾಲೀಕರಿಗೆ ಮುಖ್ಯ ಮಾಹಿತಿ; HSRP ನಂಬರ್‌ ಪ್ಲೇಟ್‌ ಅಳವಡಿಕೆಗೆ ಸುಲಭ ವಿಧಾನ ಇಲ್ಲಿದೆ

ರಾಜಕೀಯ

By ಹೊಸ ಕನ್ನಡ LAST UPDATED JAN 30, 2024 1

HSRP Number Plate

ಹಳೆಯ ವಾಹನಗಳಿಗೆ HSRP ಅವಳವಡಿಕೆಯ ಕಾರ್ಯವಿಧಾನ:

• ಮೊದಲಿಗೆ https://transport.karnataka.gov.in ಅಥವಾ www.siam.in  ಗೆ ಭೇಟಿ ನೀಡಿ ನಂತರ Book HSRP ನ್ನು ಕ್ಲಿಕ್‌ ಮಾಡಿ.

• ವಾಹನ ತಯಾರಕರನ್ನು ಆಯ್ಕೆ ಮಾಡಿ

• ವಾಹನದ ಮೂಲ ವಿವರ ಭರ್ತಿ ಮಾಡಿ

• ಡೀಲರ್‌ ಸ್ಥಳವನ್ನು ಆಯ್ಕೆ ಮಾಡಿ (HSRP ಅಳವಡಿಕೆಗೆ ನಿಮ್ಮ ಅನುಕೂಲಕ್ಕೆ ತಕ್ಕಂತೆ)

• HSRP ಶುಲ್ಕವನ್ನು ನಗದು ರೂಪದಲ್ಲಿ ಪಾವತಿ ಮಾಡಲು ಅವಕಾಶವಿಲ್ಲ, ಹಾಗಾಗಿ ಆನ್‌ಲೈನ್‌ನಲ್ಲಿ ಪಾವತಿಸಿ.

• ಆವಾಗ, ವಾಹನ ಮಾಲೀಕರ ಮೊಬೈಲ್‌ ಸಂಖ್ಯೆಗೆ ಒಟಿಪಿ ರವಾನಿಸಲಾಗುವುದು.

• ನಿಮಗೆ ಯಾವಗ ಸೂಕ್ತ ಅನಿಸುತ್ತದೆಯೋ ಅದಕ್ಕೆ ತಕ್ಕಂತೆ HSRP ಅಳವಡಿಕೆಯ ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಿ

• ನಂತರ ನಿಮ್ಮ ವಾಹನದ ಯಾವುದೇ ತಯಾರಕ/ ಡೀಲರ್‌ ಸಂಸ್ಥೆಗೆ ಭೇಟಿ ನೀಡಿ.

Leave A Reply

Your email address will not be published.