Ayodhya: ಜ.22 ರಂದು ಬ್ಯಾಂಕ್‌ಗಳಿಗೆ ರಜೆ ಇದೆಯೇ? ಹಣಕಾಸು ಸಚಿವಾಲಯದ ಪ್ರಕಟಣೆ ಏನು ಹೇಳಿದೆ?

Bank Holiday: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಹಾಗೂ ಬಾಲರಾಮನ ಪ್ರಾಣಪ್ರತಿಷ್ಠೆಗೆ ಭರ್ಜರಿ ತಯಾರಿ ಈಗಾಗಲೇ ನಡೆಯುತ್ತಿದೆ. ಈ ವಿಷಯದ ಮಧ್ಯೆ ಜ.22 ರಂದು ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿದ್ದು, ಮದ್ಯ ಮಾರಾಟವನ್ನು ಕೂಡಾ ನಿಷೇಧ ಮಾಡಲಾಗಿದೆ.

ಉತ್ತರ ಪ್ರದೇಶದ ಸರಕಾರ ಜನವರಿ 22 ರಂದು ರಜೆ ಘೋಷಿಸಿರುವ ಜೊತೆಗೆ ಮಾಂಸ ಮಾರಾಟ ನಿಷೇಧ ಮಾಡಿದೆ. ಜ.22 ರಂದು ಕೇಂದ್ರ ಸರಕಾರ ನೌಕರರಿಗೆ ಅರ್ಧ ದಿನ ರಜೆ ನೀಡಿದೆ. ಮಧ್ಯಾಹ್ನ 2.30 ರವರೆಗೆ ರಜೆ ಘೋಷಣೆ ಮಾಡಲಾಗಿದೆ.
ಇನ್ನೊಂದು ಕಡೆ ಜ.22 ರಂದು ರಜೆ ಇದೆಯೇ ಅಥವಾ ಇಲ್ಲವೇ ಎಂಬ ಗೊಂದಲ ಉಂಟಾಗಿದೆ. ಜ.18 ರಂದು ಹಣಕಾಸು ಸಚಿವಾಲಯ ಪ್ರಕಟಣೆ ಹೊರಡಿಸುವ ಮೂಲಕ ಈ ಗೊಂದಲಕ್ಕೆ ತೆರೆ ಎಳೆದಿದೆ.
ಇದನ್ನೂ ಓದಿ: Thirthahalli ಡಿಗ್ರಿ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ!!! ಕಾರಣ ನಿಗೂಢ
ನೋಟಿಸ್‌ನಲ್ಲಿ ಏನಿದೆ?
ಎಲ್ಲಾ ಪಬ್ಲಿಕ್ ಸೆಕ್ಟರ್ ಬ್ಯಾಂಕ್‌ಗಳು, ಜೀವವಿಮಾ ನಿಗಮ ಕಂಪನಿಗಳು, ಪಬ್ಲಿಕ್ ಸೆಕ್ಟರ್ ಹಣಕಾಸು ಸಂಸ್ಥೆಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು ಜನವರಿ 22 ರಂದು ಮಧ್ಯಾಹ್ನ 2.30 ರವರೆಗೆ ರಜೆ ಘೋಷಿಸಲಾಗಿದೆ.
ಜ.22 ರಂದು ಬ್ಯಾಂಕ್‌ಗಳಿಗೆ ಅರ್ಧ ದಿನ ರಜೆಯನ್ನು ಘೋಷಿಸಿದಂತಾಗಿದೆ.