Moral Policing: ಲಾಡ್ಜ್‌ನಲ್ಲಿ ವಿವಾಹಿತ ಮುಸ್ಲಿಂ ಮಹಿಳೆಯೊಂದಿಗೆ ಹಿಂದೂ ಯುವಕ! ವ್ಯಕ್ತಿಗೆ ಥಳಿತ!!!

Share the Article

ಹಾವೇರಿ ಜಿಲ್ಲೆಯ ಹಾನಗಲ್‌ ನ ಖಾಸಗಿ ಹೋಟೆಲ್‌ಗೆ ಯುವಕರ ತಂಡವೊಂದು ನುಗ್ಗಿ ಇಬ್ಬರನ್ನು ಥಳಿಸಿರುವ ಘಟನೆಯೊಂದು ನಡೆದಿದೆ. ಲಾಡ್ಜ್‌ನಲ್ಲಿ ವಿವಾಹಿತ ಮಹಿಳೆಯೊಂದಿಗೆ ಸಿಕ್ಕಿಬಿದ್ದ ವ್ಯಕ್ತಿಗೆ ಥಳಿಸಲಾಗಿದೆ.
ಮುಸ್ಲಿಂ ಮಹಿಳೆಯೊಂದಿಗೆ ಅನ್ಯಕೋಮಿನ ಯುವಕನ ಇದ್ದಿದ್ದನ್ನು ಕಂಡು ಹಿಗ್ಗಾಮುಗ್ಗಾ ಥಳಿಸಲಾಗಿದೆ.

ಅದೇ ರೀತಿ ಬುರ್ಖಾ ಹಾಕಿಕೊಂಡು ಇಲ್ಲಿ ಬಂದು ಮಲಗಿದ್ದೀಯ ಎಂದು ಹೇಳಿ ಮಹಿಳೆಗೆ ಯುವಕರು ಥಳಿಸಿದ್ದಾರೆ ಎಂದು ವರದಿಯಾಗಿದೆ. ಇಬ್ಬರ ಮೇಲೆ ಹಲ್ಲೆ ನಡೆಸಿರುವ ವೀಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದೆ.

ಈ ಘಟನೆ ಹಾವೇರಿ ಜಿಲ್ಲೆ ಹಾನಗಲ್‌ ಪಟ್ಟಣದ ಬಳಿಯ ನಾಲ್ಕರ ಕ್ರಾಸ್‌ ಬಳಿ ಇರುವ ಖಾಸಗಿ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ. ಮುಸ್ಲಿಂ ಮಹಿಲೆಯೊಂದಿಗೆ ಹಿಂದೂ ವ್ಯಕ್ತಿ ಲಾಡ್ಜ್‌ನಲ್ಲಿ ಸಿಕ್ಕಿಬಿದ್ದಿದ್ದಾಗಿ ಸುವರ್ಣ ನ್ಯೂಸ್‌ ವರದಿ ಮಾಡಿದೆ. ಯುವತಿಯ ಪರಿಚಯದವರು ಇಬ್ಬರ ಮೇಲೆ ಹಲ್ಲೆ ಮಾಡಿರುವ ಕುರಿತು ವರದಿಯಾಗಿದೆ.

ತಡವಾಗಿ ಬೆಳಕಿಗೆ ಬಂದ ಈ ಪ್ರಕರಣದಲ್ಲಿ ಹಾನಗಲ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಮಹಿಳೆ ಮೇಲೆ ಮತ್ತೇನಾದರೂ ದೌರ್ಜನ್ಯ ನಡೆದಿದೆಯಾ ಎಂಬುವುದರ ಕುರಿತು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಈ ಘಟನೆ ಸಂಬಂಧ ಒಬ್ಬರು ಯುವಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ.

Leave A Reply