Anti Conversion Law: ಹಿಂದೂ ಅಧಿಕಾರಿ ಮುಸ್ಲಿಂಗೆ ಮತಾಂತರ! ಹಿಂದೂ ಪತ್ನಿ ಇದ್ದರೂ ಮುಸ್ಲಿಂ ಯುವತಿ ಜೊತೆ ಮದುವೆ!!!
Anti Conversion Law: ಉತ್ತರ ಪ್ರದೇಶದಲ್ಲಿ ಕಂದಾಯ ಅಧಿಕಾರಿಯೊಬ್ಬರು ಅನುಮಾನಾಸ್ಪದವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿರುವ ಘಟನೆಯೊಂದು ನಡೆದಿದೆ. ಇವರಿಗೆ ಈಗಾಗಲೇ ಹಿಂದು ಪತ್ನಿ ಇದ್ದು, ಈಗ ಎರಡನೇ ಮದುವೆಯಾಗಲು ಮುಸ್ಲಿಂ ಧರ್ಮದ ಯುವತಿಯನ್ನು ವರಿಸಲು ಮತಾಂತರವಾಗಿದ್ದು ಭಾರೀ ವಿವಾದ ಉಂಟಾಗಿದೆ. ನನ್ನ ಪತಿಯನ್ನು ಬಲವಂತವಾಗಿ ಮತಾಂತರ ಮಾಡಲಾಗಿದೆ ಎಂದು ಮೊದಲ ಪತ್ನಿ ದೂರು ನೀಡಿದ್ದಾರೆ. ಪೊಲೀಸರಿಗೆ ಈ ಘಟನೆ ನಿಜಕ್ಕೂ ಕಬ್ಬಿಣದ ಕಡಲೆ ತರಹ ಆಗಿದೆ.
ಆಶಿಶ್ ಗುಪ್ತಾ ಎಂಬ ತಹಶೀಲ್ದಾರ್ ಆಗಿ ಅಧಿಕಾರ ವಹಿಸಿಕೊಂಡಿದ್ದು, ಇದೀಗ ಮೊಹಮ್ಮದ್ ಯೂಸುಫ್ ಆಗಿ ಬದಲಾಗಿದ್ದಾರೆ. ಇವರು ಸೆ.2 ರಂದು ಮುಸ್ಲಿಂ ಟೋಪಿ ಧರಿಸಿ ಕಚಾರಿಯಾ ಬಾಬಾ ಮಸೀದಿಯಲ್ಲಿ ದಿನವಿಡೀ ನಮಾಜ್ ಮಾಡಿದ್ದು, ತಮ್ಮನ್ನು ಇವರು ಇತರರಿಗೆ ಮೊಹಮ್ಮದ ಯೂಸುಫ್ ಎಂದು ಪರಿಚಯ ಮಾಡಿಸಿಕೊಂಡಿದ್ದಾರೆ. ಕೆಲವು ದಿನಗಳ ನಂತರ ಇವರು ಮುಸ್ಲಿಂ ಯುವತಿಯನ್ನು ಮದುವೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನು ಓದಿ: Travel Documents: ಇನ್ನು ಮುಂದೆ ಇಲ್ಲಿಗೆ ಹೋಗಲು ಕೂಡ ವೀಸಾದ ಅಗತ್ಯವಿಲ್ವಂತೆ! ಆದರೆ ಈ ಡಾಕ್ಯಮೆಂಟ್ಸ್ಗಳು ಬೇಕೇ ಬೇಕು
ಮಸೀದಿಯ ಮೌಲ್ವಿ ಹಾಗೂ ಹಲವಾರು ಸೇರಿ ನನ್ನ ಪತಿಯನ್ನು ಬಲವಂತವಾಗಿ ಮತಾಂತರಗೊಳಿಸಿ, ಮದುವೆ ಮಾಡಿಸಿದ್ದಾರೆ ಎಂದು ಆಶಿಶ್ ಗುಪ್ತಾ ಅವರ ಪತ್ನಿ ಆರತಿ ಯಜ್ಞಸೈನಿ ಅವರು ದೂರು ನೀಡಿದ್ದಾರೆ. ಈ ಕುರಿತು ಕೇಸು ದಾಖಲು ಮಾಡಿದ್ದಾರೆ. ಪೊಲೀಸರು ಈಗ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.