ಚಿಕಿತ್ಸೆಗೆ ನೆರವಾಗುವ ನೆಪದಲ್ಲಿ ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಲು ಯತ್ನ !! | ಮತಾಂತರ ತಡೆದ ಕಾಂಗ್ರೆಸ್ ಶಾಸಕರ ಮುಂದಾಳತ್ವದ ಖಾಸಗಿ ಆಸ್ಪತ್ರೆ
ಅನಾರೋಗ್ಯಕ್ಕೆ ತುತ್ತಾಗಿದ್ದ ಕುಟುಂಬದ ಮಗುವೊಂದರ ಚಿಕಿತ್ಸೆಗೆ ನೆರವಾಗುವ ನೆಪದಲ್ಲಿ ಇಡೀ ಹಿಂದೂ ಕುಟುಂಬವನ್ನೇ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಕ್ಕೆ ಯತ್ನಿಸಿರುವ ಘಟನೆ ವಿಜಯಪುರದಲ್ಲಿ ಬೆಳಕಿಗೆ ಬಂದಿದೆ. ಅಪರೂಪದ ಕಾಯಿಲೆಯಾಗಿರುವ ಥಲಸ್ಸಿಮಿಯಾದಿಂದ ಬಳಲುತ್ತಿದ್ದ ಮಗುವಿಗೆ ಚಿಕಿತ್ಸೆ ಕೊಡಿಸಲು ಸಾಧ್ಯವಾಗದೆ ಹಿಂದೂ ಧರ್ಮ ತೊರೆದು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳಲು ನಿರ್ಧರಿಸಿದ್ದ ಬಡ ಕುಟುಂಬವೊಂದಕ್ಕೆ ಬಿಎಲ್ಡಿಇ ಆಸ್ಪತ್ರೆ ನೆರವಿನ ಹಸ್ತ ಚಾಚಿದೆ. ಬಸವನ ಬಾಗೇವಾಡಿಯ ನಿವಾಸಿ ಈರಣ್ಣ (34) ಅವರು ಡಾಬಾದಲ್ಲಿ ಕೆಲಸ ಮಾಡಿಕೊಂಡಿದ್ದು, ತೀವ್ರ ಬಡತನ ಹಿನ್ನೆಲೆಯಲ್ಲಿ ತಮ್ಮ ಮಗನಿಗೆ ಎದುರಾಗಿರುವ …