Parliment election 2024: ಈ 13 ಹಾಲಿ ಬಿಜೆಪಿ ಸಂಸದರಿಗೆ ಈ ಬಾರಿ ಲೋಕಸಭಾ ಟಿಕೆಟ್ ಇಲ್ಲ !!

Share the Article

Parliment election-2024: ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷಗಳು ಭರದಿಂದ ತಯಾರಿ ನಡೆಸಿವೆ. ಈಗಾಗಲೇ ತೆರೆಯ ಮರೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಕೂಡ ನಡೆಯುತ್ತಿದ್ದು, ಲಾಭಿಗಳೂ ನಡೆಯುತ್ತಿವೆ. ಇನ್ನು ರಾಜ್ಯ ಬಿಜೆಪಿಗೆ ಹೊಸ ಸಾರಥಿ ಆಯ್ಕೆಯಾಗಿದ್ದು ‘ಕಮಲ’ ಪಾಳಯದಲ್ಲೂ ಎಲ್ಲಾ ಸಕಲ ಸಿದ್ಧತೆಗಳು ನಡೆಯುತ್ತಿವೆ. ಅಂತೆಯೇ ಈಗ ಅಚ್ಚರಿ ಎಂಬಂತೆ ಬಿಜೆಪಿಯ ಈ 13 ಹಾಲಿ ಬಿಜೆಪಿ ಸಂಸದರಿಗೆ ಮುಂದಿನ ಲೋಕಸಭಾ ಟಿಕೆಟ್(Parliament election) ನೀಡುವುದಿಲ್ಲ ಎಂಬ ಸುದ್ದಿ ಎಂದು ಜೋರಾಗಿ ಸದ್ದುಮಾಡುತ್ತಿದೆ.

ಹೌದು, ಮುಂಬರುವ 2014ರ ಲೋಕಸಭಾ ಚುನಾವಣೆಯಲ್ಲಿ(Parliment election 2024)ಬಿಜೆಪಿ ಹೈಕಮಾಂಡ್ ಈಗಾಗಲೇ ಕರ್ನಾಟಕದಲ್ಲಿರುವ ತನ್ನ ಹಾಲಿ ಸಂಸದರಲ್ಲಿ ಕೆಲವರಿಗೆ ಟಿಕೆಟ್ ನೀಡದಿರಲು ನಿರ್ಧರಿಸಿದೆ ಎನ್ನಲಾಗಿದ್ದು, ವಯೋಮಿತಿಯ ಆಧಾರದ ಮೇಲೆ ಹಾಗೂ ಯುವಕರನ್ನ ಸೆಳೆಯುವ ನಿಟ್ಟಿನಲ್ಲಿ ಕೆಲವು ಹಾಲಿ ಸಂಸದರು ಟಿಕೆಟ್ ನಿಂದ ವಂಚಿತರಾಗಲಿದ್ದಾರೆ ಎನ್ನಲಾಗಿದೆ.

ಯಾರಿಗೆಲ್ಲಾ ಕೈತಪ್ಪಲಿದೆ ಟಿಕೆಟ್?
ನಿವೃತ್ತಿ ಘೋಷಿಸಿದವರು:
• ಈಗಾಗಲೇ ಹೈಕಮಾಂಡ್‌ ಸೂಚನೆ ಮೇರೆಗೆ ಮಾಜಿ ಮುಖ್ಯಮಂತ್ರಿ ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದ ಸದಾನಂದಗೌಡ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಬೆಂಗಳೂರು ಉತ್ತರಕ್ಕೆ ಹೊಸ ಮುಖಕ್ಕೆ ಮಣೆ ಹಾಕಲು ಹೈಕಮಾಂಡ್‌ ತಯಾರಿ ನಡೆಸಿದ್ದು, ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ಈ ಸಲ ಟಿಕೆಟ್ ನೀಡಲು ಚಿಂತನೆ ನಡೆಸಿದೆ ಎನ್ನಲಾಗಿದೆ.
• ಚಿಕ್ಕಬಳ್ಳಾಪುರದ ಬಿಜೆಪಿ ಸಂಸದ ಬಚ್ಚೇಗೌಡ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.
• ಚಾಮರಾಜನಗರದ ಸಂಸದ ಶ್ರೀನಿವಾಸ ಪ್ರಸಾದ್ ಅವರು ಮುಂದಿನ ವರ್ಷ ಮಾರ್ಚ್‌ ತಿಂಗಳಿನಲ್ಲಿ ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಹೇಳಿದ್ದಾರೆ.

ಅಲ್ಲದೇ ಕೋಲಾರ ಸಂಸದ ಮುನಿಸ್ವಾಮಿ, ವಿಜಯಪುರ ಸಂಸದ ರಮೇಶ್ ಜಿಗಜಿಣಗಿ, ತುಮಕೂರು ಸಂಸದ ಜಿ.ಎಸ್. ಬಸವರಾಜು, ಕೊಪ್ಪಳದ ಸಂಸದ ಸಂಗಣ್ಣ ಕರಡಿ, ದಾವಣಗೆರೆಯ ಸಂಸದ ಜಿ.ಎಂ. ಸಿದ್ದೇಶ್ವರ ಅವರು ಸೇರಿದಂತೆ ಹಲವು ಸಂಸದರಿಗೆ ಟಿಕೆಟ್‌ ಸಿಗುವುದು ಡೌಟ್‌ ಎನ್ನಲಾಗಿದೆ.

ಇದನ್ನು ಓದಿ: Cleanest man of the world: ಈತನೇ ಜಗತ್ತಿನ ಅತ್ಯಂತ ” ಶುದ್ಧ” ವ್ಯಕ್ತಿ, ದಿನಕ್ಕೆ 20 ಸಲ ಮುಖ ತೊಳೆಯೋ ಈತ ಕ್ಲೀನಿಂಗ್’ಗೆ ಕಳೆಯೋ ಕಾಲ ಕೇಳಿದ್ರೆ ಶಾಕ್ ಆಗ್ತೀರಿ !

Leave A Reply