Cleanest man of the world: ಈತನೇ ಜಗತ್ತಿನ ಅತ್ಯಂತ ” ಶುದ್ಧ” ವ್ಯಕ್ತಿ, ದಿನಕ್ಕೆ 20 ಸಲ ಮುಖ ತೊಳೆಯೋ ಈತ ಕ್ಲೀನಿಂಗ್’ಗೆ ಕಳೆಯೋ ಕಾಲ ಕೇಳಿದ್ರೆ ಶಾಕ್ ಆಗ್ತೀರಿ !

Cleanest man of the world: ದಿನಕ್ಕೆ 9 ಗಂಟೆಗಳವರೆಗೆ ತನ್ನ ಅಡುಗೆಮನೆಯನ್ನು ಸ್ವಚ್ಛಗೊಳಿಸುವ ಮತ್ತು ದಿನಕ್ಕೆ 20 ಬಾರಿ ತನ್ನ ಮುಖವನ್ನು ತೊಳೆದುಕೊಳ್ಳುವ ಒಬ್ಬ ವ್ಯಕ್ತಿಯನ್ನು ಇದೀಗ ಜಗತ್ತಿನ ಅತ್ಯಂತ ಶುದ್ಧತೆ ಉಳ್ಳ (Cleanest man of the world) ವ್ಯಕ್ತಿಯೆಂದು ಕರೆಯಲಾಗುತ್ತಿದೆ.

ಫಾರ್ಮಸಿ ಮೇಲ್ವಿಚಾರಕರಾಗಿರುವ 37 ವರ್ಷ ಪ್ರಾಯದ ಅಮರ್ ಸ್ವತಃ ಮನೆಯನ್ನು ಸ್ವಚ್ಛಗೊಳಿಸುವುದು ತಮ್ಮ ದೈನಂದಿನ ಒಂದು ಡ್ಯೂಟಿ ಥರ ಆಗಿದೆ ಎಂದಿದ್ದಾರೆ. ಆತ ತನ್ನ ಒಟ್ಟಾರೆ ದಿನದ 9 ಗಂಟೆಗಳಷ್ಟು ಸಮಯವನ್ನು ತನ್ನ ಅಡುಗೆ ಮನೆ ಶುದ್ಧಗೊಳಿಸುವುದರಲ್ಲಿ ಕಳೆಯುತ್ತಾರೆ ಎಂದರೆ ಊಹಿಸಿ ಆತನ ಕ್ಲೀನಿಂಗ್ ಮಟ್ಟ ಎಷ್ಟರಮಟ್ಟಿಗಿರಬಹುದೆಂದು.

ಅಮರ್ ದಿನಕ್ಕೆ ಒಂಬತ್ತು ಗಂಟೆಗಳವರೆಗೆ ತನ್ನ ಅಡುಗೆಮನೆಯನ್ನು ಸ್ವಚ್ಛಗೊಳಿಸುತ್ತಾರೆ. ಆದರೆ ಆತನ ದಿನಚರಿ ಶುರುವಾಗುವುದು ಸ್ವಯಂ ಸ್ವಚ್ಛತೆಯಿಂದ. ಮೊದಲು ತನ್ನನ್ನು ತಾನು ಶುದ್ಧಗೊಳಿಸಿಕೊಂಡು ತನ್ನ ದೇಹದ ಎಲ್ಲಾ ಭಾಗಗಳನ್ನು ಪರಿಪೂರ್ಣವಾಗಿ ಉಜ್ಜಿ ಕ್ಲೀನ್ ಮಾಡಿಕೊಂಡು ನಂತರ ಮನೆಯ ಶುದ್ಧತೆಗೆ ಅಮರ್ ಅವರು ಪ್ರತಿದಿನ ಹೊರಡುತ್ತಾರೆ.
“ನನ್ನ ಶುಚಿಗೊಳಿಸುವ ದಿನಚರಿಯು ಮೊದಲು ನನ್ನಿಂದಲೇ ಪ್ರಾರಂಭವಾಗುತ್ತದೆ, ನಾನು ದಿನಕ್ಕೆ 20 ಬಾರಿ ನನ್ನ ಮುಖವನ್ನು ತೊಳೆಯುತ್ತೇನೆ” ಎಂದು ಆತ ಹೇಳಿದ್ದಾರೆ.
“ಇದು ನನಗೆ ಒಂದು ರೀತಿಯ ಧ್ಯಾನದಂತಿದೆ ಮತ್ತು ಇದು ನಕಾರಾತ್ಮಕತೆಯನ್ನು ತೊಡೆದುಹಾಕಲು ಮತ್ತು ನನ್ನ ಮನೆಯಲ್ಲಿ ಕೆಲವು ಸಕಾರಾತ್ಮಕ ಬದಲಾವಣೆಗಳನ್ನು ತರಲು ಇದು ನನಗೆ ಸಹಾಯ ನೀಡುತ್ತದೆ” ಎಂದು ಅವರು ಹೇಳಿದ್ದಾರೆ. ಒಂದು ಸರ್ವೆ 60% ರಷ್ಟು ಪುರುಷರು ಶೌಚಾಲಯಕ್ಕೆ ಭೇಟಿ ನೀಡಿದ ನಂತರ ಕೂಡಾ ತಮ್ಮ ಕೈಗಳನ್ನು ತೊಳೆಯುವುದಿಲ್ಲ ಎಂದು ಬಹಿರಂಗಪಡಿಸಿದೆ. ಆದರೆ ಅಮರ್ ತನ್ನ ಇಡೀ ಮನೆಯನ್ನು ರೋಗಾಣು ಮುಕ್ತವಾಗಿಡಲು ಶುದ್ಧ ಮಾಡುವ ಕೆಲಸಕ್ಕೆ ನಾವು ನೀವೆಲ್ಲ ಆಫೀಸಿನಲ್ಲಿ ಕಳೆಯುವಷ್ಟು ಸಮಯ ವ್ಯಯ ಮಾಡುತ್ತಾರೆ.

ಇದನ್ನು ಓದಿ: Robbery Case: ಮಾಡ್ರನ್ ಕಳ್ಳರ ಕಹಾನಿ: ಕಳ್ಳತನ ಮಾಡಿ ಉಂಡು ಹೋದ ಕೊಂಡು ಹೋದ ಕಳ್ಳರು!!

“ನಾನು ಸ್ಟೀಮರ್ ಬಳಸಿ ಎಲ್ಲಾ ಸೂಕ್ಷ್ಮಾಣುಗಳನ್ನು ತೊಡೆದು ಹಾಕಲು ಪ್ರಯತ್ನಿಸುತ್ತೇನೆ ಮತ್ತು ಹೆಚ್ಚಿನ ಉಷ್ಣತೆಯ ಈ ಹಬೆಯಿಂದ ಎಲ್ಲಾ ಸೂಕ್ಷ್ಮಜೀವಿಗಳು ನಾಶವಾಗುತ್ತವೆ ಎಂದು ನಾನು ನಂಬುತ್ತೇನೆ” ಎಂದು ಅಮರ್ ಹೇಳುತ್ತಾರೆ. ತನ್ನ ಅಡುಗೆ ಮನೆಯನ್ನು 9 ಗಂಟೆಗಳ ಕಾಲ ಶುದ್ಧ ಮಾಡಿದರು ಅಮರ್ಗೆ ಪೂರ್ಣ ತೃಪ್ತಿ ಎಂದೇನಿಲ್ಲ.
“ನಾನು ಒಂಬತ್ತು ಗಂಟೆಗಳವರೆಗೆ ನನ್ನ ಅಡುಗೆಮನೆಯನ್ನು ಸ್ವಚ್ಛಗೊಳಿಸಲು ಕಳೆದಿದ್ದೇನೆ. ನೀವು ಅದಕ್ಕಿಂತ ಹೆಚ್ಚು ಸಮಯ ಅಲ್ಲಿ ಖರ್ಚು ಮಾಡಬಹುದು, ಅಲ್ಲಿ ಮಾಡಲು ಇನ್ನೂ ತುಂಬಾ ಇದೆ.” ಎನ್ನುತ್ತಾರೆ ಅಮರ್.

ಮನೆಯ ಶುದ್ಧತೆಗೆ ಇಳಿಯುವ ಯಾವುದೇ ಗ್ಲೋಸ್ ಹಾಕುವುದಿಲ್ಲ ಮೊದಲು ತನ್ನ ಕೈಯನ್ನು ಶುದ್ಧ ಎನಿಸಿಕೊಂಡು ನಂತರ ಮನೆಯ ಮೂಲೆ ಮೂಲೆಗಳಿಗೆ ಕೈ ಆಡಿಸಿ ಬೆರಳಾಡಿಸಿ ಪಿನ್ ಹಾಕಿ ಮಾಪ್ ಹಾಕಿ, ಉಜ್ಜಿ, ತಿಕ್ಕಿ ತೀಡಿ ಕ್ಲೀನ್ ಮಾಡುತ್ತಾರೆ.

ಈ ಕ್ಲೀನಿಂಗ್ ಅಭ್ಯಾಸ ಅವರಿಗೆ ಹೇಗೆ ಆಯಿತು ಗೊತ್ತೇ ?

4 ವರ್ಷಗಳ ಹಿಂದೆ, ಅಂದರೆ 2019ರ ಸುಮಾರಿಗೆ ಅಮರ್ ತನ್ನ ಕುಟುಂಬದೊಂದಿಗೆ ಭಾರತದಿಂದ ಇಂಗ್ಲೆಂಡ್ ಗೆ ಪ್ರಯಾಣಿಸಿದ್ದರು. ಭಾರತದಿಂದ ಯುಕೆಗೆ ತೆರಳಿದಾಗಲೇ ಅಮರ್ ಅವರ ಶುಚಿಗೊಳಿಸುವ ಅಭ್ಯಾಸವು ಪ್ರಾರಂಭವಾಯಿತು. ಹಾಗೆ ಇಂಗ್ಲಡ್ ಗೆ ತೆರಳಿದ ಕೂಡಲೇ, ಅಲ್ಲಿ ಅವರೊಂದು ಹಳೆಯ ಮನೆಯನ್ನು ಕೊಂಡರು. ಆ ಮನೆ ಎಷ್ಟು ಗಲೀಜು ಇತ್ತೆಂದರೆ ಅದನ್ನು ನೋಡಿ ಅಮರ್ ಅವರ ಕ್ಲೀನಿಂಗ್ ಪ್ರಜ್ಞೆ ಉದ್ದೀಪನಗೊಂಡಿತು. ಅವತ್ತು ಶುದ್ಧತೆ ಶುರು ಮಾಡಿದ ಅಮರ್ ಇವತ್ತಿಗೂ ತನ್ನ ಕ್ಲೀನಿಂಗ್ ನಿಲ್ಲಿಸಿಲ್ಲ.

ಅಮರ್ ಅವರ ಪತ್ನಿ ನಿಮ್ರತ್ ಗೆ ಗಂಡ ಈ ರೀತಿ ಮನೆಯನ್ನು ಶುದ್ಧವಾಗಿ ಇಟ್ಟುಕೊಳ್ಳುವುದು ಖುಷಿ ತಂದರೂ, ಆತನ ಬಹುಪಾಲು ಸಮಯ ಶುದ್ಧ ಮಾಡುವ ಕಾರ್ಯದಲ್ಲಿ ಕಳೆದು ಹೋಗುತ್ತಿದೆ. ಆ ಸಮಯವನ್ನು ತನ್ನ ಕುಟುಂಬಕ್ಕಾಗಿ ನೀಡಬಹುದಿತ್ತು ಅಲ್ಲವೇ ಎನ್ನುವುದು ಆಕೆಯ ನೋವು.
“ನಾನು ಸ್ವಚ್ಛತೆಯಲ್ಲಿ ಹೆಚ್ಚು ಸಮಯವನ್ನು ಕಳೆಯಲು ಬಯಸುವುದಿಲ್ಲ, ಆದರೆ ನಾನು ಕ್ಲೀನ್ ಮಾಡಲೇಬೇಕು, ಇಲ್ಲದಿದ್ದರೆ ನನಗೆ ಶಾಂತಿ ಇರುವುದಿಲ್ಲ” ಎಂದು ಅಮರ್ ಹೇಳುತ್ತಾರೆ. ಈ ರೀತಿ ಹಲವು ಬಾರಿ ಶುದ್ಧ ಮಾಡಿದನ್ನೇ ಮತ್ತೆ ಮತ್ತೆ ಶುದ್ಧ ಮಾಡುವ ಮನಸ್ಥಿತಿಯು ಮಾನಸಿಕ ಗೀಳು ಇರಬಹುದಾ ಎನ್ನುವುದು ಕೂಡಾ ಹಲವರ ಪ್ರಶ್ನೆ.

ಇದನ್ನು ಓದಿ: BBMP ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಹೃದಯಾಘಾತದಿಂದ ನಿಧನ !

Leave A Reply

Your email address will not be published.