Kodekal basavanna: ಸರ್ಕಾರದ ಕುರಿತು ಹೊರಬಿತ್ತು ಮತ್ತೊಂದು ಸ್ಫೋಟಕ ಭವಿಷ್ಯ- ಕೇಳಿದ್ರೆ ನೀವೂ ಒಂದ್ಸಲ ಶಾಕ್ ಆಗ್ತೀರಾ !!

Karnataka news yadgiri kodekal basavanna prediction about government latest news

Share the Article

Kodekal basavanna: ಸರ್ಕಾರದ ಕುರಿತು ಕೋಡಿಮಠದ ಶ್ರೀಗಳು ಹಾಗೂ ಯಶವಂತ ಗುರೂಜಿ ಅವರು ಹಲವಾರು ಅಚ್ಚರಿಯ ಭವಿಷ್ಯಗಳನ್ನು ನೀಡಿ ಎಲ್ಲರನ್ನು ಅಚ್ಚರಿಗೊಳಿಸುವುದನ್ನು ನಾವು ನೋಡಿದ್ದೇವೆ. ಆದರೆ ಈಗ ಮತ್ತೊಂದು ಹೊಸ ಭವಿಷ್ಯ ಹೊರಬಿದ್ದಿದ್ದು, ಕೋಡೆಕಲ್ ಬಸವಣ್ಣನವರು(Kodekal basavanna) ಸ್ಫೋಟಕ ನುಡಿಗಳನ್ನು ನುಡಿದಿದ್ದಾರೆ.

ಹೌದು, ಯಾದಗಿರಿಯ ಪ್ರಸಿದ್ಧ ಕಾಲಜ್ಞಾನಿಯಾಗಿರುವ ಕೊಡೇಕಲ್ ಬಸವಣ್ಣನವರು ಲೋಕಸಭಾ ಚುನಾವಣೆಯ ಹೊಸ್ತಿಲಲ್ಲೇ ರಾಜ್ಯ ಸರ್ಕಾರದ ಬಗ್ಗೆ ಅಚ್ಚರಿ ಭವಿಷ್ಯ ನುಡಿದಿದ್ದಾರೆ. ರಾಜ್ಯ ಸರ್ಕಾರದ ಒಳಗೆ ಸಾಕಷ್ಟು ಭಿನ್ನಾಭಿಪ್ರಾಯಗಳು ಏರ್ಪಡುತ್ತಿವೆ. ಅಪಾಯ ಉಂಟಾಗುವ ಮೊದಲು ಪಕ್ಷಗಳಲ್ಲಿನ ಗೊಂದಲಗಳನ್ನು ಸರಿಪಡಿಸಿಕೊಳ್ಳದಿದ್ದರೆ ಸರ್ಕಾರಕ್ಕೆ ಕಂಟಕ ಎದುರಾಗಲಿದೆ. ವಿಶ್ವಾಸದಿಂದ ಹೋಗದಿದ್ದರೆ ಸಮಸ್ಯೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದು ಸರ್ಕಾರದಲ್ಲೀಗ ಕೊಂಚ ಗಲಿಬಿಲಿ ಉಂಟಾಗಿದೆ.

ಇಷ್ಟೇ ಅಲ್ಲದೆ ಹಲವು ಮನಸ್ಥಿತಿಗಳು ಸೇರಿ ಅಧಿಕಾರ ಪಡೆಯಲು ಯತ್ನಿಸಿ, ಹಲವರು ಸೇರಿ ಅಧಿಕಾರ ಪಡೆಯಲು ಮುಂದಾಗಿದ್ದಾರೆ. ಎಚ್ಚರಿಕೆ ಹೆಜ್ಜೆ ಇಡುವುದು ಮುಖ್ಯವಾಗಿದೆ. ರಾಜಕೀಯದಲ್ಲಿ ಮುಂದಿನ ದಿನಗಳಲ್ಲಿ ಯಾರನ್ನೂ ಸಹ ನಂಬದಂತಹ ಸ್ಥಿತಿ ಎದುರಾಗಬಹುದು. ಸದಾ ಜಾಗ್ರತೆಯಿಂದ ಇದ್ದರೆ ಒಳಿತು ಎಂದು ಕೊಡೇಕಲ್ ಬಸವಣ್ಣನವರ ಈ ಭವಿಷ್ಯವಾಣಿ ನುಡಿದಿದ್ದಾರೆ. ಸದ್ಯ ಈ ಹೊಸ ಭವಿಷ್ಯವು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

ಇದನ್ನೂ ಓದಿ: Udupi: SSLC ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ – ಶಿಕ್ಷಕನ ವಿರುದ್ಧ ಫೋಕ್ಸೋ ಪ್ರಕರಣ ದಾಖಲು !!

Leave A Reply