Health Tips: ಮುಖದ ಅಂದ ಹೆಚ್ಚಿಸಲು ಮನೆಯಲ್ಲೇ ಇದೆ ಮದ್ದು- ಇವೆರಡರ ಬಳಕೆಯಿಂದ ಹೊಳೆಯುವ ಸೌಂದರ್ಯ ನಿಮ್ಮದಾಗೋದು ಪಕ್ಕಾ !!

Lifestyle skin care tips health news home remedies for naturally glowing skin in Kannada

Glowing skin tips: ಚೆನ್ನಾಗಿ ಕಾಣಿಸಬೇಕು ಅನ್ನೋ ಆಸೆ ಯಾರಿಗೆ ಇರಲ್ಲ ಹೇಳಿ. ಎಲ್ಲರಿಗೂ ಇಂಥದ್ದೊಂದು ಆಸೆ ಇದ್ದೇ ಇರುತ್ತೆ. ಅದರಲ್ಲೂ ಹೊಳೆಯುವ ಚರ್ಮ(Glowing Skin) ಇರಬೇಕೆಂದು ಎಲ್ಲರೂ ಬಯಸ್ತಾರೆ. ಅದಕ್ಕಾಗಿ ಚರ್ಮದ ಡೆಡ್‌ ಸ್ಕಿನ್(Dead Skin)‌ ತೆಗೆಯಲು, ಚರ್ಮದ (Skin Care) ಸುಕ್ಕು ತಡೆಗಟ್ಟಲು, ಹೊಳಪಾಗಿ ಕಾಣಿಸಲು, ಚರ್ಮದ ಕಾಂತಿ, ಸೌಂದರ್ಯವನ್ನು (Beauty) ಹೆಚ್ಚಿಸೋಕೆ ಬಗೆ ಬಗೆಯ ಕ್ರೀಮ್‌ ಗಳು(Creams), ಸೀರಂಗಳನ್ನು(Serum) ಉಪಯೋಗಿಸ್ತಾರೆ. ಆದರೆ, ಮುಖದ ಅಂದ ಹೆಚ್ಚಿಸಲು ಮನೆಯಲ್ಲೇ ಇದೆ ಮದ್ದು(Glowing skin tips). ಇವೆರಡರ ಬಳಕೆಯಿಂದ ಹೊಳೆಯುವ ಸೌಂದರ್ಯ ನಿಮ್ಮದಾಗೋದು ಪಕ್ಕಾ !!

 

ತರಕಾರಿಗಳು ಮಾನವನ ಆರೋಗ್ಯದ ಮೇಲೆ ಎಷ್ಟು ಪರಿಣಾಮ ಬೀರುತ್ತವೆ ಅಂದ್ರೆ ಊಹೆ ಮಾಡಲೂ ಸಾಧ್ಯವಿಲ್ಲ. ಆದ್ರೆ ಯಾವ ತರಕಾರಿಯನ್ನು ತಿಂದರೆ ನಮ್ಮ ದೇಹಕ್ಕೆ ಒಳ್ಳೆಯದು ಎಂಬ ವಿಚಾರವನ್ನ ತಿಳಿದರಬೇಕು ಅಷ್ಟೆ. ಇದೇ ಹಿನ್ನೆಲೆಯಲ್ಲಿ ನೋಡುವುದಾದರೆ ಬೀಟ್ರೂಟ್ ನಲ್ಲಿ ಪೋಷಕಾಂಶಗಳು ಹೇರಳವಾಗಿದ್ದು, ಈ ತರಕಾರಿಯನ್ನು ಆಹಾರದಲ್ಲಿ ನಿಯಮಿತವಾಗಿ ಸೇವನೆ ಮಾಡುವುದರಿಂದ ಸಾಕಷ್ಟು ಆರೋಗ್ಯ ಸಂಬಂಧಿ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಮಣ್ಣಿನ ಅಡಿಯಲ್ಲಿ ಸಿಗುವ ಕೆಲ ತರಕಾರಿಗಳಲ್ಲಿ ಇತರೆ ತರಕಾರಿಗಳಿಗಿಂತಲೂ ಹೆಚ್ಚು ಪೋಷಕಾಂಶಗಳು ಇರುತ್ತವೆ ಎಂದು ಹೇಳಲಾಗುತ್ತದೆ. ತರಕಾರಿಗಳಿಂದ ಮುಖದ ಸೌಂದರ್ಯವೂ ಹೆಚ್ಚುತ್ತದೆ.

ಹೌದು, ಬೀಟ್ರೂಟ್‌ ಮತ್ತು ಬೆಟ್ಟದ ನೆಲ್ಲಿಕಾಯಿ ಬಳಸಿಕೊಳ್ಳುವ ಮೂಲಕ ಮುಖದ ಕಾಂತಿ ಹೆಚ್ಚಿಸಿಕೊಳ್ಳಬಹುದೆಂದು ಪೌಷ್ಟಿಕ ತಜ್ಞ ಲವ್ನೀತ್‌ ಬಾತ್ರಾ ಹೇಳಿದ್ದಾರೆ. ಬೀಟ್ರೂಟ್ ಮತ್ತು ಬೆಟ್ಟದ ನೆಲ್ಲಿಯಲ್ಲಿ ವಿಟಮಿನ್ ಸಿ ಅಂಶ ಹೇರಳವಾಗಿದೆ. ಇದು ಅತ್ಯಂತ ಶಕ್ತಿಯುತವಾದ ಆಂಟಿ ಆಕ್ಸೀಡೆಂಟ್‌ಗಳೂ ಹೆಚ್ಚಾಗಿವೆ. ಇದು ಚರ್ಮದ ಆರೈಕೆಗೆ ಸಹಕಾರಿ.

ವಿಟಮಿನ್ ಸಿ ಜೊತೆಗೆ ಅಮೈನೋ ಆಮ್ಲಗಳು ಮತ್ತು ಕಬ್ಬಿಣ ಅಂಶವೂ ಇದರಲ್ಲಿರುವುದರಿಂದ ದೇಹದಲ್ಲಿನ ವಿಷವನ್ನು ತೆಗೆದುಹಾಕುವ ಮೂಲಕ ರಕ್ತವನ್ನು ಶುದ್ಧಗೊಳಿಸುತ್ತದೆ. ಬೀಟ್ರೂಟ್ ಮತ್ತು ಆಮ್ಲಾ ಚರ್ಮಕ್ಕೆ ತ್ವರಿತ ಹೊಳಪನ್ನು ನೀಡುತ್ತದೆ. ಬ್ಯಾಕ್ಟೀರಿಯಾದ ಸೋಂಕಿನ ವಿರುದ್ಧವೂ ಹೋರಾಡುವುದರ ಜತೆಗೆ ಚರ್ಮದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಬೀಟ್‌ರೂಟ್‌ ಬೆಟಾಲೈನ್ಸ್ ಎಂಬ ವರ್ಣದ್ರವ್ಯಗಳನ್ನು ಹೊಂದಿರುತ್ತದೆ. ಇದು ಕೆಂಪು ಕಲೆಗಳನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ. ಬೀಟ್‌ರೂಟ್‌ ಮತ್ತು ಬೆಟ್ಟದ ನೆಲ್ಲಿಯನ್ನು ಹೇರಳವಾಗಿ ಬಳಸುವುದರಿಂದ ಚರ್ಮದ ಕಾಂತಿಯನ್ನು ಅತ್ಯಂತ ಕಡಿಮೆ ಅವಧಿಯಲ್ಲಿಯೇ ಹೆಚ್ಚಿಸಿಕೊಳ್ಳಬಹುದು. ಎರಡನ್ನೂ ಸೇರಿಸಿ ಜ್ಯೂಸ್‌ ರೂಪದಲ್ಲಿಯೂ ಇದನ್ನು ಸೇವಿಸಬಹುದು.

ಇದನ್ನೂ ಓದಿ: Alcohol : ‘ಮದ್ಯ’ ಪ್ರಿಯರೇ ಎಚ್ಚರ !! ಎಣ್ಣೆ ಹೊಡೆಯುವಾಗ ಯಾವುದೇ ಕಾರಣಕ್ಕೂ ಈ ತಪ್ಪು ಮಾಡದಿರಿ

Leave A Reply

Your email address will not be published.