Home News Crime News: ಕಾಲೇಜಿಗೆ ಹೋಗ್ತೀನಿ ಅಂತ ಕಳ್ಳಾಟ ಆಡ್ತಿದ್ದ ಮಗಳು- ಗುಟ್ಟು ರಟ್ಟಾಗುತ್ತಿದ್ದಂತೆ ಹೆತ್ತಮ್ಮನನ್ನೇ 30...

Crime News: ಕಾಲೇಜಿಗೆ ಹೋಗ್ತೀನಿ ಅಂತ ಕಳ್ಳಾಟ ಆಡ್ತಿದ್ದ ಮಗಳು- ಗುಟ್ಟು ರಟ್ಟಾಗುತ್ತಿದ್ದಂತೆ ಹೆತ್ತಮ್ಮನನ್ನೇ 30 ಬಾರಿ ಇರಿದು ಕೊಂದುಬಿಟ್ಲು!

Crime News

Hindu neighbor gifts plot of land

Hindu neighbour gifts land to Muslim journalist

Crime News: ಅಮೆರಿಕಾದ ಓಹಿಯೋದಲ್ಲಿ 23 ವರ್ಷದ ಹದಿ ಹರೆಯದ ಮಗಳೊಬ್ಬಳು ತನ್ನ ಹೆತ್ತಮ್ಮನನ್ನೇ ಚಾಕುವಿನಿಂದ 30 ಬಾರಿ ಇರಿದು ಹತ್ಯೆ (Murder)ಮಾಡಿದ ಭೀಭತ್ಸ ಘಟನೆ ವರದಿಯಾಗಿದೆ.

ಮಗಳನ್ನು ಕಾಲೇಜಿನಿಂದ ಹೊರಹಾಕಲಾದ ವಿಚಾರ ಅಮ್ಮನಿಗೆ ಗೊತ್ತಾದ ಹಿನ್ನೆಲೆ 23 ವರ್ಷದ ಯುವತಿ ತಾಯಿಯ ಮೇಲೆ ದೋಸೆ ಮಾಡುವ ಪ್ಯಾನ್ ಹಾಗೂ ಚಾಕುವಿನಿಂದ ಇರಿದು ತಾಯಿಯ ಮೇಲೆ ಹಲ್ಲೆ (Crime News)ನಡೆಸಿದ್ದಾಳೆ. ಈ ಘಟನೆ 2020ರ ಫೆಬ್ರವರಿಯಲ್ಲಿ ನಡೆದಿದೆ ಎನ್ನಲಾಗಿದ್ದು,ಅಕ್ರಾನ್‌ನ ನಿವಾಸಿಯಾದ 50 ವರ್ಷದ ಬ್ರೆಂಡಾ ಪೊವೆಲ್ (Brenda Powell) ಆಸ್ಪತ್ರೆಯೊಂದರಲ್ಲಿ ದಾದಿಯಾಗಿ ಕೆಲಸ ಮಾಡುತ್ತಿದ್ದಳು.ಈಕೆಯ ಪುತ್ರಿ 23 ವರ್ಷದ ಸಿಡ್ನಿ ಪೊವೆಲ್ (Sydney Powell) ಕಾಲೇಜಿನಿಂದ ಹೊರ ಹಾಕಲ್ಪಟ್ಟ ವಿಚಾರ ತಿಳಿದ ಕೂಡಲೇ ಸಿಡ್ನಿ ತಾಯಿಯನ್ನು ಹತ್ಯೆ ಮಾಡಲು ಮುಂದಾಗಿದ್ದಾಳೆ. ಸಿಡ್ನಿ ಓದುತ್ತಿರುವ ಕಾಲೇಜಿನ ಅಧಿಕಾರಿಗಳು ದೂರವಾಣಿ ಕರೆ ಮೂಲಕ ತಾಯಿಗೆ ಮಾಹಿತಿ ನೀಡುತ್ತಿದ್ದ ಸಂದರ್ಭದಲ್ಲೇ ತಾಯಿಯ ಮೇಲೆ ಹಲ್ಲೆ ಮಾಡಲು ಆರಂಭಿಸಿದ್ದಾಳೆ.

ಸಮ್ಮಿಟ್ ಕೌಂಟಿ ಪ್ರಾಸಿಕ್ಯೂಟರ್ ಕಚೇರಿಯ ವರದಿಯ ಅನುಸಾರ,ಮೌಂಟ್ ಯೂನಿಯನ್ ಯೂನಿವರ್ಸಿಟಿಯ ಮಾಜಿ ವಿದ್ಯಾರ್ಥಿನಿಯಾದ ಸಿಡ್ನಿ ಪೊವೆಲ್ ಮಾರ್ಚ್‌ 2020ರಲ್ಲಿ ಕಬ್ಬಿಣದ ಬಾಣಲೆಯಿಂದ ತಾಯಿ ಬ್ರೆಂಡಾ ಪೊವೆಲ್ ಅವರ ತಲೆಗೆ ಹೊಡೆದಿದ್ದು, ಆಬಳಿಕ ಕುತ್ತಿಗೆಗೆ ಸುಮಾರು 30 ಬಾರಿ ಇರಿದಿದ್ದಾಳೆ ಎಂದು ಸಮ್ಮಿಟ್ ಕೌಂಟಿ ಪ್ರಾಸಿಕ್ಯೂಟರ್ ಕಚೇರಿ ಮಾಹಿತಿ ನೀಡಿದೆ. ಬ್ರೆಂಡಾ ತೀವ್ರವಾದ ಗಾಯಗಳಿಂದ ಮನೆಯಲ್ಲಿ ಬಿದ್ದಿರುವ ವಿಚಾರದ ಬಗ್ಗೆ ಮಾಹಿತಿ ತಿಳಿದು ಪೊಲೀಸರು ಆಕೆಯನ್ನು ಆಸ್ಪತ್ರೆಗೆ ರವಾನಿಸಿದರು ಕೂಡ ತೀವ್ರವಾಗಿ ಗಾಯಗೊಂಡಿದ್ದರಿಂದ ಬ್ರೆಂಡಾ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾಳೆ.ತಾಯಿಯನ್ನು ಭೀಕರವಾಗಿ ಕೊಲೆ ಮಾಡಿದ್ದರ ಜೊತೆಗೆ ಸಾಕ್ಷ್ಯ ನಾಶ ಮಾಡಿದ ಆರೋಪದ ಮೇರೆಗೆ ಸಿಡ್ನಿ ಪೊವೆಲ್ (Sydney Powell)ನನ್ನು ಪೊಲೀಸರು ಬಂಧಿಸಿದ್ದಾರೆ.

ಈ ನಡುವೆ ಆರೋಪಿತ ಮಗಳ ಪರ ವಕೀಲ ಈಕೆ ಸ್ಕಿಜೋಫ್ರೇನಿಯಾ ಕಾಯಿಲೆಯಿಂದ ಬಳಲುತ್ತಿದ್ದು, ಹೀಗಾಗಿ ಕೊಲೆಗೆ ಈಕೆ ಜವಾಬ್ದಾರಿಯಲ್ಲ ಎಂದು ವಾದ ಮಂಡಿಸಿದ್ದರು. ಆದರೆ, ಮಗಳು ತಾಯಿಯನ್ನು ಉದ್ದೇಶಪೂರ್ವಕವಾಗಿ ಹಲ್ಲೆ ಮಾಡಿದ್ದಾಳೆ ಎಂದು ವಾದ ಮಂಡಿಸಿದ ಸರ್ಕಾರಿ ವಕೀಲರ ವಾದವನ್ನು ಪುರಸ್ಕರಿಸಿದ ನ್ಯಾಯಾಲಯ ತಾಯಿಯನ್ನು ಕೊಂದ ಪ್ರಕರಣದಲ್ಲಿ ಸಿಡ್ನಿ ಪೊವೆಲ್ ದೋಷಿ ಎಂದು ಘೋಷಿಸಿದ್ದು, ಸೆಪ್ಟೆಂಬರ್ 28 ರಂದು ಶಿಕ್ಷೆಯ ಪ್ರಮಾಣವನ್ನು ಘೋಷಣೆ ಮಾಡಲಿದೆ.

 

ಇದನ್ನು ಓದಿ: Rakshith shetty: ‘ಆ ಮ್ಯಾಟರ್’ಗೋಸ್ಕರ ರಶ್ಮಿಕಾ ಜೊತೆ ಇನ್ನೂ ಟಚ್‌ನಲ್ಲಿದ್ದೇನೆ, ಅದು ನಡಿತನೂ ಇದೆ – ಅಚ್ಚರಿಯ ಹೇಳಿಕೆ ನೀಡಿದ ರಕ್ಷಿತ್ ಶೆಟ್ಟಿ