Crime: 30ರ ಮಹಿಳೆಯೊಂದಿಗೆ 22ರ ಯುವಕನ ಲಿವ್‌ ಇನ್‌ ರಿಲೇಷನ್‌ಶಿಪ್‌! ಗೋವಾದಲ್ಲಿ ಕೊಂದು ಮಹಾರಾಷ್ಟ್ರದಲ್ಲಿ ಎಸೆದ!!!

Share the Article

ಲಿವ್‌ ಇನ್‌ ರಿಲೇಷನ್‌ಶಿಪ್‌ ಸಂಬಂಧಗಳು ಇತ್ತೀಚೆಗೆ ಕೊಲೆಯ ರೂಪ ಪಡೆದುಕೊಳ್ಳುವ ವರದಿಗಳನ್ನು ನೀವು ಕೇಳಿರಬಹುದು. ಅಂತಹುದೇ ಒಂದು ಘಟನೆ ಮತ್ತೆ ನಡೆದಿದೆ. ತನ್ನ ಜೊತೆ ಇರಲು ನಿರಾಕರಿಸಿದ ತನ್ನ ಲಿವ್‌ ಇನ್‌ ಗೆಳತಿಯನ್ನು ಕೊಲೆ ಮಾಡಿ ಶವವನ್ನು ಕಾಡಿನಲ್ಲಿ ಎಸೆದಿರುವ ಭೀಕರ ಘಟನೆಯೊಂದು ನಡೆದಿದೆ. ಈತ ಬರ್ಬರವಾಗಿ ಚಾಕುವಿನಿಂದ ಇರಿದು ಕೊಂದಿದ್ದಾನೆ. ಈತನನನ್ನು ಬಂಧನ ಮಾಡಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

30 ವರ್ಷದ ಮಹಿಳೆ ಕಾಮಾಕ್ಷಿ ನಾಯಕ್‌ (30) ಎಂಬಾಕೆ 22 ವರ್ಷದ ಪ್ರಕಾಶ್‌ ಸುಂಚ್‌ವಾಡ್‌ ಎಂಬಾತನೊಂದಿಗೆ ಲಿವ್‌ ಇನ್‌ ರಿಲೇಷನ್‌ನಲ್ಲಿದ್ದಾಕೆ. ಗೋವಾದಲ್ಲಿ ಇವರಿಬ್ಬರು ನೆಲೆಸಿದ್ದರು. ಆದರೆ ಇತ್ತೀಚೆಗೆ ಇವರಿಬ್ಬರ ಮಧ್ಯೆ ಮನಸ್ತಾಪ ಉಂಟಾಗಿದೆ. ಇದು ಪೊಲೀಸ್‌ ಕೇಸ್‌ ಆಗಿದೆ. ಹೀಗಾಗಿ ಕೋಪಗೊಂಡ ಆಕೆಯನ್ನು ಆತ ಕೊಲೆ ಮಾಡಿದ್ದಾನೆ.

ಇವರಿಬ್ಬರ ಮಧ್ಯೆ ಪ್ರತಿದಿನ ಜಗಳ ನಡೆಯುತ್ತಿದ್ದುದರಿಂದ ಕಾಮಾಕ್ಷಿ ಈ ಸಂಬಂಧದಿಂದ ದೂರ ಹೋಗಲು ನಿರ್ಧಾರ ಮಾಡಿದ್ದಾಳೆ. ಇದರಿಂದ ಕೋಪಗೊಂಡ ಆತ ತನ್ನ ಮನೆಯಲ್ಲಿ ಬರ್ಬರವಾಗಿ ಚಾಕುವಿನಿಂದ ಇರಿದು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಕೊಲೆಯನ್ನು ಮುಚ್ಚಿಹಾಕಲು ಮಹಿಳೆಯ ಮೃತ ದೇಹವನ್ನು ಕಾರಿಗೆ ತುಂಬಿಸಿಕೊಂಡು ಎಂಭತ್ತು ಕಿ.ಮೀಟರ್‌ ದೂರ ಇರುವ ಮಹಾರಾಷ್ಟ್ರದ ರಾಜ್ಯದ ಒಂದು ಸ್ಥಳದಲ್ಲಿ ಎಸೆದು ಗೋವಾಕ್ಕೆ ಹಿಂತಿರುಗಿದ್ದ.

 

 

Leave A Reply