Smoking Bird: ಬೀಡಿ ಸೇದಿ ಹೊಗೆ ಉಗುಳುವ ಹಕ್ಕಿ ?! ವೈರಲ್ ಆಗಿದೆ ಈ ಸ್ಮೋಕಿಂಗ್ ಹಕ್ಕಿ !

Viral video news smoking bird this bird omits smoke from its mouth viral video

Smoking Bird: ಕೆಲವೊಂದು ಹಕ್ಕಿಗಳು ನೋಡಲು ಸುಂದರವಾಗಿರುತ್ತದೆ ಅಷ್ಟೇ ಅಲ್ಲ ತಮ್ಮ ಇಂಪಾದ ಧ್ವನಿಯಿಂದ ಮಧುರವಾಗಿ ಹಾಡುತ್ತದೆ, ಕೋಗಿಲೆಯ ಹಾಗೆ. ಆದರೆ ನೀವೆಲ್ಲಾದರೂ ಹೊಗೆ ಉಗುಳುವ ಪಕ್ಷಿಯನ್ನು (Smoking Bird) ನೋಡಿದ್ದೀರಾ? ಇಲ್ಲ ಅಲ್ವಾ, ಇಲ್ಲಿದೆ ನೋಡಿ ಹೊಗೆ ಉಗುಳುವ ಹಕ್ಕಿಯ ಬಗ್ಗೆ ಮಾಹಿತಿ !

ಸೋಷಿಯಲ್ ಮೀಡಿಯಾದಲ್ಲಿ ಪ್ರತಿದಿನ ಒಂದಲ್ಲ ಒಂದು ವಿಚಾರಗಳು ಹರಿದಾಡುತ್ತಲೇ ಇರುತ್ತವೆ. ಅದರಲ್ಲಿ ಕೆಲವೊಂದು ವಿಷಯಗಳು ಭಾರಿ ವೈರಲಾಗುತ್ತವೆ. ಇದೀಗ ಅಂತಹದೇ ವಿಚಾರ ವೈರಲ್ ಆಗಿದ್ದು, ಪಕ್ಷಿ ತನ್ನ ಬಾಯಿಂದ ಹೊಗೆಯನ್ನು ಹೊರಗಟ್ಟುವುದು ಸಖತ್ ವೈರಲ್ ಆಗಿದೆ.

ಈ ಹಕ್ಕಿಯ ಹೆಸರು ‘ಬೆಲ್ ಬರ್ಡ್’. ಈ ಪಕ್ಷಿಯನ್ನು ‘ಸ್ಮೋಕಿಂಗ್ ಬರ್ಡ್’ ಎಂದೂ ಕರೆಯುತ್ತಾರೆ. ಏಕೆಂದರೆ ಸಹಜವಾಗಿಯೇ ಅದರ ಬಾಯಿಂದ ಹೊಗೆ ಬರುತ್ತಲೇ ಇರುತ್ತದೆ. ಈ ಹಕ್ಕಿ ಮುಖ್ಯವಾಗಿ ಬ್ರೆಜಿಲ್ನಲ್ಲಿ ಕಂಡುಬರುತ್ತದೆ.

ಯುಟ್ಯೂಬ್ (YouTube) ಒಂದರಲ್ಲಿ ಈ ಹಕ್ಕಿಯ ವಿಡಿಯೋ (bird video) ಅಪ್ಲೋಡ್ ಮಾಡಲಾಗಿದ್ದು, ಛಾಯಾಗ್ರಾಹಕರೊಬ್ಬರು ಅತ್ಯಂತ ಸುಂದರವಾದ ಈ ಪಕ್ಷಿಯ ಕ್ಲೋಸ್-ಅಪ್ ಶಾಟ್ ತೆಗೆದುಕೊಳ್ಳುತ್ತಿರುವುದನ್ನು ವಿಡಿಯೋದಲ್ಲಿ ಇದೆ. ಈ ಹಕ್ಕಿ ಬಿಳಿ ಬಣ್ಣದ ರೆಕ್ಕೆಗಳನ್ನು ಹೊಂದಿದ್ದು, ಹಕ್ಕಿಯ ಕಣ್ಣಿನಿಂದ ಗಂಟಲಿನವರೆಗಿನ ಭಾಗವು ವಿಭಿನ್ನ ಬಣ್ಣದ್ದಾಗಿದೆ. ಸದ್ಯ ಹಲವು ಸಾಮಾಜಿಕ ಮಾಧ್ಯಮ ಬಳಕೆದಾರರು ತಮ್ಮ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ಮತ್ತು ಕಾಮೆಂಟ್ ನಲ್ಲಿ ತರಹೇವಾರಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

ಇದನ್ನೂ ಓದಿ: Vande Bharat Train: ಮಂಗಳೂರು – ಬೆಂಗಳೂರು, ಗೋವಾ ವಂದೇ ಭಾರತ್ ರೈಲು, ಪ್ರಾರಂಭ ಯಾವಾಗ ಗಮನಿಸಿ !

Comments are closed.