Home latest Raveendran Byju: ಬೈಜೂಸ್‌ ಸಂಸ್ಥಾಪಕ ಬೈಜು ರವೀಂದ್ರನ್‌ ಅವರ ಮನೆ ಮೇಲೆ ಇ.ಡಿ ದಾಳಿ!

Raveendran Byju: ಬೈಜೂಸ್‌ ಸಂಸ್ಥಾಪಕ ಬೈಜು ರವೀಂದ್ರನ್‌ ಅವರ ಮನೆ ಮೇಲೆ ಇ.ಡಿ ದಾಳಿ!

Raveendran Byju
Image source: TOI

Hindu neighbor gifts plot of land

Hindu neighbour gifts land to Muslim journalist

Raveendran Byju : ವಿದೇಶಿ ಹೂಡಿಕೆ ಕಾನೂನುಗಳನ್ನು ಉಲ್ಲಂಘಿಸಿದ ಆರೋಪದ ಮೇರೆಗೆ ಜಾರಿ ನಿರ್ದೇಶನಾಲಯ (ಇ.ಡಿ) ಬೆಂಗಳೂರು ಮೂಲದ ಎಡು ಟೆಕ್ ಸಂಸ್ಥೆ ಬೈಜೂಸ್‌ ಸಿಇಒ (BYJU’S CEO)ಬೈಜು ರವೀಂದ್ರನ್ (Raveendran Byju)ಅವರ ‘ಥಿಂಕ್ & ಲರ್ನ್ ಪ್ರೈವೇಟ್ ಲಿಮಿಟೆಡ್ ಎರಡು ಕಚೇರಿಗಳ ಜೊತೆಗೆ ಮನೆ ಮೇಲೆ ದಾಳಿ ನಡೆಸಿ, ಆವರಣದಲ್ಲಿ ಶನಿವಾರ ಶೋಧ ಕಾರ್ಯ ನಡೆಸಲಾಗಿದೆ. ಈ ಪರಿಶೀಲನೆಯ ಸಂದರ್ಭ ಮನೆ ಹಾಗೂ ಕಚೇರಿ ಆವರಣದಲ್ಲಿ ದೊರೆತ ಅನೇಕ ದಾಖಲೆಗಳು ಮತ್ತು ದತ್ತಾಂಶಗಳನ್ನುವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಂಪನಿಯು ವಿದೇಶಿ ನ್ಯಾಯವ್ಯಾಪ್ತಿಗೆ ರವಾನಿಸಿದ ಮೊತ್ತ ಸೇರಿದಂತೆ ಜಾಹೀರಾತು ಮತ್ತು ಮಾರುಕಟ್ಟೆ ವೆಚ್ಚಗಳ ಹೆಸರಿನಲ್ಲಿ ಸುಮಾರು 944 ಕೋಟಿ ರೂ.ಗಳನ್ನು ಖರ್ಚು ಮಾಡಿದೆ ಎಂದು ಜಾರಿ ನಿರ್ದೇಶನಾಲಯ ಆರೋಪ ಮಾಡಿದೆ. ಕಂಪನಿಯು 2020-21ರ ಆರ್ಥಿಕ ವರ್ಷದಿಂದ ತನ್ನ ಹಣಕಾಸಿನ ಹೇಳಿಕೆಗಳನ್ನು ಜೊತೆಗೆ ತಮ್ಮ ಖಾತೆಗಳನ್ನು ಲೆಕ್ಕಪರಿಶೋಧಕರಿಂದ ಪರಿಶೀಲನೆ ಮಾಡದಿರುವುದು ಕಾನೂನು ನಿಯಮಗಳ ಪ್ರಕಾರ ಕಡ್ಡಾಯವಾಗಿದ್ದರೂ ಕೂಡ ಇದನ್ನು ಉಲ್ಲಂಘಿಸಿದೆ ಎಂದು ಇ.ಡಿ ಆರೋಪಿಸಿದೆ.

2011 ರಿಂದ 2023ರ ಅವಧಿಯಲ್ಲಿ ಕಂಪನಿಯು ಅಂದಾಜಿನ ಪ್ರಕಾರ 28,000 ಕೋಟಿ ರೂ.ಗಳಷ್ಟು ವಿದೇಶಿ ನೇರ ಹೂಡಿಕೆಯನ್ನು ಪಡೆದುಕೊಂಡಿದೆ ಎನ್ನಲಾಗಿದ್ದು, ಇದರ ಜೊತೆಗೆ ಕಂಪನಿಯು ಸಾಗರೋತ್ತರ ನೇರ ಹೂಡಿಕೆಯ ನೆಪದಲ್ಲಿ ವಿವಿಧ ವಿದೇಶಿ ಸಂಸ್ಥೆಗಳಿಗೆ ಸುಮಾರು 9,754 ಕೋಟಿ ರೂ.ಗಳನ್ನು ರವಾನಿಸಿರುವ ಬಗ್ಗೆ ಆರೋಪ ಮಾಡಿದೆ.

ಇದನ್ನೂ ಓದಿ :Actor Yash: ರಾಕಿಂಗ್ ಸ್ಟಾರ್ ಯಶ್ ರಿಜೆಕ್ಟ್ ಮಾಡಿದ್ರು 350 ಕೋಟಿ ಬಿಗ್ ಬಜೆಟ್’ನ ಆ ಚಿತ್ರ, ಯಾಕಿರಬಹುದು ಗೊತ್ತಾ ?