White Hair: ಬಿಳಿ ಕೂದಲಿಗೆ ನಿಜವಾದ ಕಾರಣ ಏನೆಂದು ನ್ಯೂಯಾರ್ಕ್ ಅಧ್ಯಯನ ಹೇಳಿದೆ ಶಾಕಿಂಗ್ ಮಾಹಿತಿ!

White Hair: ಕೂದಲು ಬಿಳಿಯಾಗಲು ಮೂಲ ಕಾರಣ ತಿಳಿಯಲು ಬಹುತೇಕ ಜನರು ವಿಫಲರಾಗಿದ್ದಾರೆ. ಬಿಳಿ ಕೂದಲು (White Hair) ಮತ್ತು ತಲೆಹೊಟ್ಟು ಕೂದಲು ಉದುರುವಿಕೆ, ಇತರೆ ಕೂದಲಿನ ಸಮಸ್ಯೆಗಳು ನಮ್ಮಲ್ಲಿ ಅನೇಕರಿಗೆ ದೊಡ್ಡ ತಲೆನೋವಾಗಿದೆ .

ಅದರಲ್ಲೂ ಬಿಳಿ ಕೂದಲು ಬಂದರೆ ಆಕಾಶವೇ ತಲೆ ಮೇಲೆ ಬಿದ್ದಂತೆ ಆಡುತ್ತಾರೆ. ಸದ್ಯ ಬಿಳಿ ಕೂದಲಿನ ಸಮಸ್ಯೆಗೆ ನೀವು ಪರಿಹಾರವನ್ನು ಹುಡುಕುತ್ತಿದ್ದರೆ, ಈ ಲೇಖನದಲ್ಲಿ, ಬಿಳಿ ಕೂದಲಿನ ಬೆಳವಣಿಗೆಗೆ ಕಾರಣ ತಿಳಿಸಲಾಗಿದೆ. ಮುಖ್ಯವಾಗಿ ಬಿಳಿ ಕೂದಲಿನಿಂದ ಬಳಲುತ್ತಿದ್ದವರಿಗೆ ಪರಿಹಾರವನ್ನು ನ್ಯೂಯಾರ್ಕ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಕಂಡುಹಿಡಿದ್ದಾರೆ.

ನ್ಯೂಯಾರ್ಕ್ ವಿಶ್ವವಿದ್ಯಾಲಯದ ವಿಜ್ಞಾನಿಗಳು (New York researchers) ಬಿಳಿ ಕೂದಲಿಗೆ ಮೂಲ ಕಾರಣ ಮತ್ತು ಪರಿಹಾರವನ್ನು ಕಂಡುಹಿಡಿಯುವ ಪ್ರಯತ್ನದ ಭಾಗವಾಗಿ ಹಲವಾರು ಸಂಶೋಧನೆಗಳನ್ನು (Scientific Causes) ನಡೆಸಿದ್ದಾರೆ.

ಮುಖ್ಯವಾಗಿ ಮೆಲನಿನ್ ಉತ್ಪಾದಿಸುವ ಕಾಂಡಕೋಶಗಳು ಸರಿಯಾಗಿ ಕೆಲಸ ಮಾಡದ ಕಾರಣ ಕೂದಲು ಬೆಳ್ಳಗಾಗುತ್ತದೆ ಎಂದು ಕೆಲವು ಅಧ್ಯಯನಗಳು ಹೇಳಿದರೆ, ಪ್ರೋಟೀನ್ ಕೊರತೆ ಮತ್ತು ಕಬ್ಬಿಣಾಂಶದ ಕೊರತೆಯಿಂದ ಇದು ಸಂಭವಿಸುತ್ತದೆ ಎಂದು ಇತರ ಅಧ್ಯಯನಗಳು ತೋರಿಸಿವೆ.

ಮತ್ತೊಂದೆಡೆ, ಹೊಸದಾಗಿ ಕಂಡುಹಿಡಿದ ಕಾರ್ಯವಿಧಾನವು ಮೆಲನೊಸೈಟ್ ಕಾಂಡಕೋಶಗಳನ್ನು ಅವುಗಳ ಸ್ಥಿರ ಸ್ಥಾನಗಳಲ್ಲಿ ಇರಿಸುತ್ತದೆ. ಬೆಳೆಯುತ್ತಿರುವ ಕೂದಲು ಕೋಶಕ ವಿಭಾಗಗಳ ನಡುವೆ ಸಿಲುಕಿರುವ ಕೋಶಗಳನ್ನು ಮತ್ತೆ ಚಲಿಸಲು ಸಹಾಯ ಮಾಡುವ ಮೂಲಕ ಕೂದಲು ಬಿಳಿಯಾಗುವುದನ್ನು ತಡೆಯುತ್ತದೆ. ಈ ಕಾರಣದಿಂದಾಗಿ, ಬೂದು (ಬಿಳಿ) ಕೂದಲು ಬಹಳ ಬೇಗ ಹಿಮ್ಮುಖವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಇದೀಗ ಹೊಸ ಅಧ್ಯಯನಗಳ ಪ್ರಕಾರ ಕೂದಲು ಕಿರುಚೀಲಗಳಲ್ಲಿ (ಹೇರ್​ ಫಾಲಿಕಲ್ಸ್​) ಗ್ರೋಥ್​ ಕಂಪಾರ್ಟ್​​​​ಮೆಂಟ್​​ ಮಧ್ಯೆ ಚಲಿಸುವ ಕಾಂಡಕೋಶಗಳ ಮೇಲೆ ಈ ಪ್ರಕ್ರಿಯೆ ಅವಲಂಬಿತವಾಗಿದೆ ಎಂದು ತೋರಿಸುತ್ತಿದೆ. ಅಂದರೆ ಕೂದಲಿನ ಬೆಳವಣಿಗೆಗೆ ಜವಾಬ್ದಾರಿಯಾಗಿರುವ ಕೆಲವು ರೀತಿಯ ಕೋಶಗಳನ್ನು ಚಲಿಸುವ ಸಾಮರ್ಥ್ಯದ ನಷ್ಟದಿಂದ ಬೂದು ಕೂದಲು ಉಂಟಾಗುತ್ತದೆ ಎಂಬುದಾಗಿದೆ.

ಈ ಹಿನ್ನೆಲೆಯಲ್ಲಿ ಇಲಿಗಳ ಮೇಲೆ ನಡೆಸಿದ ಹೊಸ ಅಧ್ಯಯನವು ಕೂದಲು ಬಿಳಿಯಾಗುವುದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಹಿರಂಗಪಡಿಸಿದೆ. ಮೆಲನೋಸೈಟ್ ಕಾಂಡಕೋಶಗಳು ಅಥವಾ McSC ಎಂದು ಕರೆಯಲ್ಪಡುವ ಜೀವಕೋಶಗಳು ಇದಕ್ಕೆ ಕಾರಣವಾಗಿವೆ.

ಮುಖ್ಯವಾಗಿ ಉತ್ಕರ್ಷಣ ನಿರೋಧಕ-ಭರಿತ ಆಹಾರವನ್ನು ಸೇವಿಸಿದಾಗ ಮೆಲನಿನ್ ಕಡಿಮೆಯಾಗುವ ಪ್ರಕ್ರಿಯೆಯು ನೈಸರ್ಗಿಕವಾಗಿ ಕಡಿಮೆಯಾಗುತ್ತದೆ. ಪ್ರತಿ ಊಟದಲ್ಲಿ ನೀವು ಸಾಕಷ್ಟು ಉತ್ಕರ್ಷಣ ನಿರೋಧಕ-ಭರಿತ ಆಹಾರವನ್ನು ಸೇರಿಸುವುದು ಉತ್ತಮ.

ಇದನ್ನೂ ಓದಿ: ಬಿಳಿ ಕೂದಲಿನ ಸಮಸ್ಯೆಯೇ? ಇದಕ್ಕೆ ಕಾರಣವೇನು? ಈ ಮನೆಮದ್ದು ಟ್ರೈ ಮಾಡಿ ಬಿಳಿ ಕೂದಲನ್ನು ಕಪ್ಪಾಗಿಸಿ

Leave A Reply

Your email address will not be published.