White hair turn Black tips : ಬಿಳಿ ಕೂದಲಿನ ಸಮಸ್ಯೆಯೇ? ಇದಕ್ಕೆ ಕಾರಣವೇನು? ಈ ಮನೆಮದ್ದು ಟ್ರೈ ಮಾಡಿ ಬಿಳಿ ಕೂದಲನ್ನು ಕಪ್ಪಾಗಿಸಿ

White hair turn Black tips : ವಯಸ್ಸಾದಂತೆ ಕೂದಲು ಬೆಳ್ಳಗಾಗುವುದು ಸಾಮಾನ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ಚಿಗುರು ಮೀಸೆಯ ಯುವಕರ ಕೂದಲು ಬೆಳ್ಳಗಾಗುತ್ತಿದೆ. ಹಲವರಲ್ಲಿ ಟೆನ್ಶನ್ ನಿಂದಾಗಿಯೂ ಬಿಳಿ ಕೂದಲಿನ ಸಮಸ್ಯೆ ಉಂಟಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯ. ಹೀಗಾಗಿ ಬಿಳಿ ಕೂದಲಿನ ಸಮಸ್ಯೆಯನ್ನು ಹೋಗಲಾಡಿಸಲು ಕಲರಿಂಗ್​ ಪೌಡರ್​ಗಳನ್ನು ಬಳಸುತ್ತಾರೆ. ಅನೇಕರು ಕೂದಲನ್ನು ಕಪ್ಪಗಾಗಿಸಲು ಕೆಮಿಕಲ್​ ಮಿಶ್ರಿತ ಹೇರ್​ ಕಲರ್​ಗಳನ್ನು ತಲೆಗೂದಲಿಗೆ ಬಳಿದುಕೊಳ್ಳುತ್ತಾರೆ. ಆದರೆ ಬಿಳಿ ಕೂದಲಿನ ಸಮಸ್ಯೆ ಯಾಕೆ ಬರುತ್ತದೆ?. ಕಾರಣ ಇಲ್ಲಿದೆ ಹಾಗೂ ಪರಿಹಾರವೂ ಇಲ್ಲಿದೆ (White hair turn Black tips).

ಪ್ರತಿಯೊಬ್ಬರ ದೇಹವು ಮೆಲನಿನ್ ಎಂಬ ನೈಸರ್ಗಿಕ ವರ್ಣದ್ರವ್ಯವನ್ನು ಹೊಂದಿರುತ್ತದೆ. ಇದರಲ್ಲಿ ಬದಲಾವಣೆ ಉಂಟಾದರೆ ಆಗ ಬಿಳಿ ಕೂದಲಿನ ಸಮಸ್ಯೆಯೂ ಉಂಟಾಗುತ್ತದೆ ಎಂದು ಬ್ಯೂಟಿಷಿಯನ್‌ಗಳು ಹೇಳುತ್ತಾರೆ. ಈ ಬಿಳಿ ಕೂದಲಿನ (white hair) ಸಮಸ್ಯೆಯಿಂದ ಬಳಲುತ್ತಿರುವವರು ವೈದ್ಯರ ಸಲಹೆಗಳನ್ನು ಪಾಲಿಸಿ.

ಅನೇಕ ಜನರು ಆನುವಂಶಿಕ ಕಾರಣಗಳಿಂದ ಬೂದು ಕೂದಲು ಪಡೆಯುತ್ತಾರೆ. ಅಲ್ಲದೆ, ವಿಟಮಿನ್ ಬಿ 12 ಕೊರತೆಯು ಕೂದಲು ಉದುರುವಿಕೆ ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಚಿಕ್ಕ ಮಕ್ಕಳಿಗೂ ಬಿಳಿ ಕೂದಲು ಬರಲಾರಂಭಿಸುತ್ತದೆ. ಆದರೆ, ಇದು ಕ್ವಾಶಿಯೋರ್ಕರ್ ಕಾಯಿಲೆಯಿಂದ ಉಂಟಾಗುತ್ತದೆ. ಹೈಪೋಥೈರಾಯ್ಡಿಸಮ್ ಸಮಸ್ಯೆಯಿಂದ ಬಳಲುತ್ತಿರುವ ಜನರು ಸಹ ಇದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಡೌನ್ ಸಿಂಡ್ರೋಮ್ ಅನೇಕ ಬಿಳಿ ಕೂದಲಿನ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಹಾಗಾಗಿ ಇಂತಹ ಸಮಸ್ಯೆ ಇರುವವರು ಕಾಳಜಿ ವಹಿಸಬೇಕು.

ಬಿಳಿ ಕೂದಲಿನ ಸಮಸ್ಯೆಗೆ ಮನೆಮದ್ದು:
• ಹೀರೆಕಾಯಿಯನ್ನು ತೆಂಗಿನ ಎಣ್ಣೆಯೊಂದಿಗೆ ಸೇರಿಸಿ 3-4 ಗಂಟೆಗಳ ಕಾಲ ಕುದಿಸಿ, ಕುದಿಸಿದ ಎಣ್ಣೆ ಕಪ್ಪು ಬಣ್ಣಕ್ಕೆ ಬಂದ ಮೇಲೆ ಕೂದಲಿಗೆ ಬಳಿದರೆ ಬಿಳಿ ಕೂದಲಿನ ಬಣ್ಣದ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು.
• ಮೆಹೆಂದಿ ಮತ್ತು ಮೊಸರನ್ನು ಸಮಪ್ರಮಾಣದಲ್ಲಿ ಬೆರೆಸಿ ಹಚ್ಚಿಕೊಂಡರೆ ಕೂದಲಿನ ಬಿಳಿ ಕೂದಲಿನ ಸಮಸ್ಯೆಯಿಂದ ಪಾರಾಗಬಹುದು.
• ದನದ ಹಸಿ ಹಾಲನ್ನು ತಲೆಗೆ ಹಚ್ಚಿ ಮಸಾದ್​ ಮಾಡುವುದರಿಂದ ಕೂದಲು ಬೆಳ್ಳಗಾಗುವುದು ಕಡಿಮೆಯಾಗುತ್ತದೆ.

Leave A Reply

Your email address will not be published.