Rajesh Master: ಜನಪ್ರಿಯ ನೃತ್ಯ ನಿರ್ದೇಶಕ ರಾಜೇಶ್ ಮಾಸ್ಟರ್ ಸಾವು! ಕಾರಣ ನಿಗೂಢ!

Rajesh master : ದಕ್ಷಿಣ ಭಾರತದ ಜನಪ್ರಿಯ ಡ್ಯಾನ್ಸ್ ಕೊರಿಯೋಗ್ರಾಫರ್(choreographer) ರಾಜೇಶ್ ಮಾಸ್ಟರ್ ಅಂದ್ರೆ ಎಲ್ಲರಿಗೂ ಗೊತ್ತೇ ಇದೆ. ರಾಜೇಶ್ ಸ್ಟಾರ್ ನೈಟ್ ಸ್ಟೇಜ್ (star night stage) ಶೋಗಳೊಂದಿಗೆ ಅನೇಕ ವಿದೇಶಗಳಿಗೆ ಭೇಟಿ ನೀಡಿದ್ದು ಉತ್ತಮ ಗಳಿಕೆಯನ್ನು ಪಡೆದುಕೊಂಡಿದ್ದಾರೆ. ನೃತ್ಯ ವೈಭವದ ಮೂಲಕ ತನ್ನನ್ನು ತಾನು ಗುರುತಿಸಿಕೊಂಡಂತಹ ಮಾಸ್ಟರ್ ನ ಇದೀಗ ದಿಢೀರನೆ ನಿಧನದ (death) ವಿಷಯವನ್ನು ಕೇಳಿದಾಗ ಆಘಾತವಾಗುವುದು ನಿಜ. ರಾಜೇಶ್ ಮಾಸ್ಟರ್(Rajesh master) ಅವರ ದಿಢೀರನೆ ಆದಂತಹ ಸಾವು ಇದೀಗ ಎಲ್ಲರ ಮನಸಲ್ಲಿ ನಿಗೂಢವಾಗಿಯೇ ಉಳಿದುಬಿಟ್ಟಿದೆ.

ಹೌದು, ನಿರ್ದೇಶಕ ರಾಜೇಶ್ ಕೃಷ್ಣನ್ ತನ್ನ ನಿಗೂಢ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡು ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾರೆ ಎಂದು ವರದಿಯ ಮೂಲಕ ತಿಳಿಸಲಾಗಿದೆ. ತಮ್ಮ ಎಲ್ಲಾ ಕೆಲಸದಲ್ಲೂ ಮೆಚ್ಚುಗೆಯನ್ನು ಪಡೆದುಕೊಂಡು ಹೆಸರುವಾಸಿಯಾಗಿರುವ ರಾಜೇಶ್(Rajesh) ಅವರ ಇದೀಗ ಸಾವಿನ ಸುದ್ದಿ ಕೇಳಿದಾಗ ಅಭಿಮಾನಿಗಳ(fans) ಆಕ್ರಂದರ ಮುಗಿಲು ಮುಟ್ಟಿದೆ. ಹಲವಾರು ಅಭಿಮಾನಿಗಳು ಮಾಸ್ಟರ್ ಬಗ್ಗೆ ಆಘಾತವನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಸೆಲೆಬ್ರಿಟಿಗಳು (celebrities), ಮಾಸ್ಟರ್ ರಾಜೇಶ್ ವಿಷಯದಲ್ಲಿ ಎಂದೂ ಯೋಚಿಸಿಕೊಳ್ಳದಂತಹ ಅನಾಹುತ ನಡೆದುಬಿಟ್ಟಿದೆ ಎಂದು ಚಿಂತಾ ಜನಕರಾಗಿದ್ದಾರೆ.

ಮಲಯಾಳಂ ಚಿತ್ರರಂಗದ ನಟಿ ದೇವಿ ಚಂದನಾ(Devi Chandana) ಅವರು ತನ್ನ ಫೇಸ್ ಬುಕ್ ಖಾತೆಯಲ್ಲಿ ರಾಜೇಶ್ ಮಾಸ್ಟರ್(Rajesh master) ಜೊತೆಗೆ ತೆಗೆದ ಫೋಟೋವನ್ನು ನೆನಪಿಗೋಸ್ಕರ ಹಂಚಿಕೊಂಡು ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ರಾಜೇಶ್ ಮಾಸ್ಟರ್(Rajesh master) ನಮ್ಮನ್ನು ಅಗಲಿ ಇಹಲೋಕವನ್ನು ತ್ಯಜಿಸಿದ್ದಾರೆ ಎಂದು ಇಂದಿಗೂ ನಂಬಲು ನನ್ನಿಂದ ಸಾಧ್ಯವಾಗುತ್ತಿಲ್ಲಾ. ಮಾಸ್ಟರ್ ಅವರ ಬೆಂಬಲದಿಂದ ಮತ್ತು ಅವರು ನೀಡಿದ ಪ್ರೋತ್ಸಾಹದಿಂದ ನಾನು ಇವತ್ತಿಗೂ ಸಿನಿಮಾ ತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ನಿನ್ನೆ ರಾತ್ರಿ ನನಗೆ ಸಂದೇಶ ಕಳುಹಿಸಿದ್ದೀರಿ ಎಂದು ಊಹಿಸಿಕೊಳ್ಳಲು ನನ್ನಿಂದ ಸಾಧ್ಯವಾಗುತ್ತಿಲ್ಲ. ನಿಮ್ಮ ಆತ್ಮಕ್ಕೆ ಭಗವಂತ ಶಾಂತಿಯನ್ನು ನೀಡಲಿ ಎಂದು ಫೇಸ್ ಬುಕ್(Facebook) ನಲ್ಲಿ ಪೋಸ್ಟ್ ಮಾಡುವುದರ ಮೂಲಕ ತನ್ನ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಇನ್ನೂ ನಟಿ ಬೀನಾ ಆಂಟೋನಿ (Beena Antony) ತಮ್ಮ ಇನ್‌ಸ್ಟಾಗ್ರಾಮ್‌ (Instagram) ನ ಪೇಜ್ ನಲ್ಲಿ ರಾಜೇಶ್ ಮಾಸ್ಟರ್ ಅವರ ಫೋಟೋವನ್ನು ಹಾಕಿಕೊಂಡು ತನ್ನ ಬೇಸರವನ್ನುಹಂಚಿಕೊಂಡಿದ್ದಾರೆ. ರಾಜೇಶ್ ಮಾಸ್ಟರ್ (Rajesh master) ಅವರ ಸಾವಿನ ಬಗ್ಗೆ ಯಾವುದೇ ರೀತಿಯ ಸ್ಪಷ್ಟ ಮಾಹಿತಿ ಇಲ್ಲದೆ ಇದ್ದರೂ ಇದೀಗ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇದರಿಂದ ಅಭಿಮಾನಿಗಳು ಬೇಸರವನ್ನು ವ್ಯಕ್ತಪಡಿಸಿದ್ದಾರೆ.

 

ಇದನ್ನು ಓದಿ: Ivy gourd price: ಒಂದು ಕೆಜಿ ತೊಂಡೆಕಾಯಿ ಬೆಲೆ ಕಂಡು ಬೆರಗಾದ ಗ್ರಾಹಕ!

Leave A Reply

Your email address will not be published.