ಬೆಳ್ತಂಗಡಿ ತಾಲೂಕಿನ ಕಲ್ಲೇರಿ ಜನತಾ ಕಾಲೋನಿ | ಒಂದೂವರೆ ತಿಂಗಳ ನಂತರ ಮತ್ತೊಬ್ಬ ಮಹಿಳೆಯಲ್ಲಿ ಕೊರೋನಾ ಪಾಸಿಟಿವ್ !

ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಗ್ರಾಮದ ಕಲ್ಲೇರಿ ಜನತಾ ಕಾಲೋನಿ ನಿವಾಸಿಯೋರ್ವರಿಗೆ ಕೊರೋನಾ ಪಾಸಿಟಿವ್ ದೃಢವಾಗಿದೆ.

 

ಈ ಮಹಿಳೆಯು ಉಬ್ಬಸ ರೋಗದಿಂದ ಬಳಲುತ್ತಿದ್ದು, ಮೇ.30 ರಂದು ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗಾಗಿ ತೆರಳಿದ್ದರು. ಅಲ್ಲಿ ಅನುಮಾನಗೊಂಡ ವೈದ್ಯರು ಅವರ ಗಂಟಲ ದ್ರವವನ್ನು ಪರೀಕ್ಷೆ ನಡೆಸಿದ್ದು, ಅದರ ವರದಿ ಬಂದಾಗಿ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

ಕರಾಯ ಕಲ್ಲೇರಿ ಜನತಾ ಕಾಲೋನಿಯಲ್ಲಿ ಕಳೆದ ಸುಮಾರು 1.5 ತಿಂಗಳ ಹಿಂದೆಯೇ ಯುವಕನೋರ್ವನಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಅದ ನಂತರ ಆತ ಗುಣಮುಖರಾಗಿ ಮನೆಗೆ ಹೋಗಿದ್ದ.
ಇಷ್ಟು ಮಹಿಳೆಗೆ ಕೊರೋನಾ ಪಾಸಿಟಿವ್ ಯಾವ ಮೂಲದಿಂದ ಬಂದಿದೆ ಎಂಬ ಬಗ್ಗೆ ಇನ್ನೂಮಾಹಿತಿ ಲಭ್ಯವಾಗಿಲ್ಲ. ಮತ್ತೊಮ್ಮೆ ಕರಾಯ – ಕಲ್ಲೇರಿ ಜನತಾ ಕಾಲೋನಿ ಪರಿಸರವು ಸೀಲ್‌ಡೌನ್‌ಗೆ ಒಳಗಾಗುವ ಸಾಧ್ಯತೆಯಿದೆ.

Leave A Reply

Your email address will not be published.