ದಕ್ಷಿಣಕನ್ನಡದಲ್ಲಿ ಮೂವರು ಸೋಂಕಿತರ ಸೋಂಕಿನ ಮೂಲ ನಿಗೂಢ | ಉಡುಪಿಯಲ್ಲಿ ಕೋರೋನಾ ಮಹಾಸ್ಪೋಟ – ಒಂದೇ ದಿನ ದಾಖಲೆ 73 ಪಾಸಿಟಿವ್ !

ಕರಾವಳಿ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಮತ್ತೆ ನಾಲ್ಕು ಮಂದಿಗೆ ಕೊರೋನಾ ಪಾಸಿಟಿವ್ ಇರುವುದು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 137 ಕ್ಕೆ ಏರಿಕೆಯಾಗಿದೆ.

ಗುಜರಾತ್‌ನಿಂದ ಆಗಮಿಸಿ ಮಂಗಳೂರಿನಲ್ಲಿ ಕ್ವಾರಂಟೈನ್‌ನಲ್ಲಿದ್ದ 50 ವರ್ಷದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದೆ. ಇನ್ನು 24 ವರ್ಷದ ಯುವತಿ ಮತ್ತು 27 ವರ್ಷದ ಯುವಕನಲ್ಲಿ ಸೋಂಕು ಕಂಡು ಬಂದಿದ್ದು, ಇವರಿಗೆ ಸೋಂಕು ಎಲ್ಲಿಂದ ತಗುಲಿತು ಎಂಬುದು ಇನ್ನಷ್ಟೇ ಪತ್ತೆಯಾಗಬೇಕಿದೆ. ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 45 ವರ್ಷದ ಬೆಳ್ತಂಗಡಿಯ ಮಹಿಳೆಯಲ್ಲಿ ಕೂಡ ಸೋಂಕು ಕಂಡು ಬಂದಿದೆ. ಇವರ ಸೋಂಕಿನ ಮೂಲ ಕೂಡ ನಿಗೂಢವಾಗಿರುವುದು ಭಯಾತಂಕ ಸೃಷ್ಟಿಸಿರುವುದು.

ಉಡುಪಿಯಲ್ಲಿ ಇಂದು ಕೋರೋನಾ ಮಹಾಸ್ಪೋಟ

ಇಂದು ಒಂದೇ ದಿನ ಉಡುಪಿಯಲ್ಲಿ ದಾಖಲೆಯ 73 ಕೋರೋನಾ ಪ್ರಕರಣಗಳು ದಾಖಲಾಗಿದೆ.

ಗ್ರೀನ್ ಝೋನ್ ಆಗಿದ್ದ ಉಡುಪಿಗೆ ಮಹಾರಾಷ್ಟ್ರದಿಂದ ಆಮದು ಮಾಡಿಕೊಂಡ ಕೋರೋನಾ ಏಟಿನ ಮೇಲೆ ಏಟು ಕೊಡುತ್ತಿದೆ. ದಿನದಿಂದ ದಿನಕ್ಕೆ ಉಡುಪಿಯಲ್ಲಿ ಕೋರೋನಾ ಸೊಂಕಿತರ ಗ್ರಾಫ್ ಭಾರೀ ಏರಿಕೆ ಹಾದಿಯಲ್ಲೇ ಸಾಗುತ್ತಿದ್ದು, ಸದ್ಯ ಇದು ಜಿಲ್ಲಾಡಳಿತಕ್ಕೆ ಮಾತ್ರವಲ್ಲ ಇಡೀ ರಾಜ್ಯಕ್ಕೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಇಂದಿನ 73 ಪ್ರಕರಣಗಳೊಂದಿಗೆ ಉಡುಪಿಯಲ್ಲಿ ಒಟ್ಟು ಕೋರೋನಾ ಸೊಂಕಿತರ ಸಂಖ್ಯೆ 260 ಕ್ಕೆ ಏರಿ ಕೂತಿದೆ.

Leave A Reply

Your email address will not be published.