ಸವಣೂರು| ವಿದ್ಯುತ್ ವಿತರಣಾ ಕಂಪನಿಗಳ ಖಾಸಗೀಕರಣದ ವಿರುದ್ಧ ಮೆಸ್ಕಾಂ ಕಛೇರಿಯಲ್ಲಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ

ಭಾರತ ವಿದ್ಯುತ್ ಸಚಿವಾಲಯವು 2003ರ ವಿದ್ಯುತ್ ಕಾಯ್ದೆಯನ್ನು ತಿದ್ದುಪಡಿ ತಂದು, ಪ್ರಸ್ತಾಪಿತ 2020ರಲ್ಲಿ ಎಲ್ಲಾ ವಿದ್ಯುತ್ ವಿತರಣಾ ಕಂಪನಿಗಳನ್ನು ಖಾಸಗೀಕರಣಗೊಳಿಸುವ ನೀತಿಯ ವಿರುದ್ಧ ವಿವಿದೆಡೆ ಪ್ರತಿಭಟನೆ ನಡೆದಿದೆ.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನೌಕರರ ಸಂಘ ನೀಡಿದ ಕರೆಗೆ ಬೆಂಬಲವಾಗಿ ಸವಣೂರು ಮೆಸ್ಕಾಂ ಶಾಖಾ ಕಛೇರಿಯ ಮುಂಭಾಗದಲ್ಲಿ ಸವಣೂರು ಮೆಸ್ಕಾಂ ಶಾಖಾಧಿಕಾರಿ ನಾಗರಾಜ್ ಹಾಗೂ ಸಿಬ್ಬಂದಿಗಳು ಜೂ.1ರಂದು ಸಾಂಕೇತಿಕವಾಗಿ ಕೈಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.

Leave A Reply

Your email address will not be published.