ಅರಂತೋಡು | ಭಾರಿ ಮಳೆಯ ಕಾರಣ ಕಾರು ಚಾಲಕನಿಗೆ ರಸ್ತೆ ಕಾಣದೆ ಕ್ರೇಟಾ ಕಾರು ಡಿಕ್ಕಿ ಹೊಡೆದು ಅಪರಿಚಿತ ಮೃತ್ಯು

ಸುಳ್ಯ: ಮಾಣಿ-ಮೈಸೂರು ರಾಜ್ಯ ಹೆದ್ದಾರಿ ಅರಂತೋಡು ಬಳಿಯ ಬಿಳಿಯಾರಿನಲ್ಲಿ ಕಾರು ಡಿಕ್ಕಿ ಹೊಡೆದು ಪಾದಚಾರಿ ಒಬ್ಬರು ಮೃತಪಟ್ಟಿದ್ದಾರೆ. ಅಡ್ಕಾರು ಮೂಲದ ವ್ಯಕ್ತಿ ಚಲಾಯಿಸುತ್ತಿದ್ದ ಕ್ರೇಟಾ ಕಾರ್ ಒಂದು ಹೆದ್ದಾರಿಯಲ್ಲಿ ಚಲಿಸುತ್ತಿದ್ದಾಗ ರಸ್ತೆ ದಾಟುತ್ತಿದ್ದ ಪಾದಾಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಅಪಘಾತ ಸಂಭವಿಸಿದ್ದು ವ್ಯಕ್ತಿ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮೃತಪಟ್ಟಿದ್ದಾರೆ.

ಮೃತ್ತ ವ್ಯಕ್ತಿ ಪರಿಚಿತರಾಗಿದ್ದು, ದೇಹವನ್ನು ಸುಳ್ಯ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ.

ಭಾರಿ ಮಳೆಯಾದ ಕಾರಣ ಕಾರು ಚಾಲಕನಿಗೆ ಪಾದಚಾರಿ ಅಡ್ಡ ದಾಟುತ್ತಿರುವುದು ದೂರದಿಂದ ಸರಿಯಾಗಿ ಗೋಚರಿಸದೆ ಅಪಘಾತ ಸಂಭವಿಸಿದೆ. ಕಾರು ವ್ಯಕ್ತಿಗೆ ಡಿಕ್ಕಿ ಹೊಡೆದು ಪಕ್ಕದ ಮಣ್ಣಿನ ದಿಣ್ಣೆಗೆ ಏರಿ ನಿಂತಿದೆ.

ಸುಳ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave A Reply

Your email address will not be published.