ಪುತ್ತಿಲ ಶ್ರೀ ರಾಮ ಗೆಳೆಯರ ಬಳಗದಿಂದ ಆರ್ಥಿಕ ನೆರವು

ಪುತ್ತೂರು : ಮುಂಡೂರು ಗ್ರಾಮದ ಪುತ್ತಿಲ ಶ್ರೀ ರಾಮ ಗೆಳೆಯರ ಬಳಗದಿಂದ ಅನಾರೋಗ್ಯದಿಂದ ಬಳಲುತ್ತಿರುವ ಬಾಬು ನಾಯ್ಕ ಕೇದಗೆದಡಿ ಅವರಿಗೆ ಆರ್ಥಿಕ ನೆರವು ನೀಡಲಾಯಿತು.

ಶ್ರೀ ರಾಮ ಗೆಳೆಯರ ಬಳಗದಿಂದ ರೂ12,800 ವನ್ನು ಗೌರವಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಇವರು ಹಸ್ತಾಂತರಿಸಿದರು.ಈ ಸಂಧರ್ಭ ಮುಂಡೂರು ಗ್ರಾ.ಪಂ.ಸದಸ್ಯರಾದ ಅಶೋಕ್ ಕುಮಾರ್ ಪುತ್ತಿಲ, ಬಾಲಕೃಷ್ಣ ಪೂಜಾರಿ ಕುರೆಮಜಲು ಹಾಗೂ ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷ ಶ್ರೀಧರ ನಾಯ್ಕ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು

Leave A Reply

Your email address will not be published.