Xiaomi 13 Pro ಭಾರತದಲ್ಲಿ ಬಿಡುಗಡೆಯಾಗಲು ರೆಡಿ!
ಭಾರತದಲ್ಲಿ ಸ್ಮಾರ್ಟ್’ಫೋನ್ ಮಾರುಕಟ್ಟೆಯು ವಿಸ್ತಾರವಾಗಿ ಹಬ್ಬಿದೆ. ಕೈಗೆಟುಕುವ ಬೆಲೆಯಿಂದ ಹಿಡಿದು ಹೈ ರೇಂಜ್ ಮಾದರಿಯವರೆಗೂ ಸ್ಮಾರ್ಟ್’ಫೋನ್’ಗಳು ಬಿಡುವಿಲ್ಲದೇ ಮಾರುಕಟ್ಟೆಗೆ ಲಗ್ಗೆಯಿಡುತ್ತಲಿದೆ. ಇದೀಗ ಚೀನಾ ಮೂಲದ ಜನಪ್ರಿಯ ಸ್ಮಾರ್ಟ್’ಫೋನ್ ತಯಾರಕ ಕಂಪನಿ ಶಿಯೊಮಿಯು ತನ್ನ 13 ನೇ ಸರಣಿಯನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. Xiaomi 13 Pro ಫೋನಿನ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದ್ದು, ಇದೇ ಫೆಬ್ರವರಿ 26 ರಂದು ರಾತ್ರಿ 9:30 ಕ್ಕೆ ಈ ಫೋನ್ ಅನ್ನು ಬಿಡುಗಡೆ ಮಾಡಲಾಗುವುದು ಎಂದು ಪ್ರಕಟಿಸಿದೆ. ಫೋನ್ನ ಫೀಚರ್ಗಳಿಗೆ ಸಂಬಂಧಿಸಿದ ಮಾಹಿತಿ ಹೆಚ್ಚಾಗಿ ತಿಳಿದು ಬಂದಿಲ್ಲ.
XIAOMI 13 PROನ ನಿರೀಕ್ಷಿತ ಫೀಚರ್ಗಳ ಮಾಹಿತಿ ಈ ರೀತಿಯಿದೆ. ಈ ಸ್ಮಾರ್ಟ್’ಫೋನ್ 6.73-ಇಂಚಿನ 2K OLED ಡಿಸ್ಪ್ಲೇ ಹೊಂದಿದ್ದು, 120Hz ರಿಫ್ರೆಶ್ ದರವನ್ನು ಏಕಕಾಲದಲ್ಲಿ ಬೆಂಬಲಿಸಲಿದೆ. ಇನ್ನು ಇದರ ಸ್ಟೋರೇಜ್ ಕ್ಯಪಾಸಿಟಿಯು 256 GB ವರೆಗೆ ಸ್ಪೇಸ್ ಪಡೆದಿದೆ ಹಾಗೂ 12 GB LPDDR5X RAM ಅನ್ನು ಹೊಂದಿರುತ್ತದೆ. ಈ ಫೋನ್ನ ಚೈನೀಸ್ ವೇರಿಯಂಟ್ ಪ್ರಕಾರ ಸ್ನಾಪ್ಡ್ರಾಗನ್ 8 ಜನರೇಷನ್ 2 ಪ್ರೊಸೆಸರ್ ಅನ್ನು ಒಳಗೊಂಡಿರುತ್ತದೆ.
XIAOMI 13 PRO ಕ್ಯಾಮೆರಾ ಬಗ್ಗೆ ನೋಡುವುದಾದರೆ, ಭಾರತದಲ್ಲಿ ಲೈಕಾ ಬ್ರ್ಯಾಂಡಿಂಗ್ನೊಂದಿಗೆ 50-ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿರುತ್ತದೆ ಹಾಗೂ ಸೆಲ್ಫಿಗಾಗಿ 32-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಲಭ್ಯವಿರುತ್ತದೆ. XIAOMI 13 PRO ಸ್ಮಾರ್ಟ್’ಫೋನ್ 4820mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್ ಅಪ್ ಅನ್ನು ಹೊಂದಿರಲಿದೆ ಹಾಗೂ 120W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
50-ವ್ಯಾಟ್ ವೈರ್ಲೆಸ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಫೋನ್ ಪಡೆದಿದೆ. ವೈ-ಫೈ 6, ಬ್ಲೂಟೂತ್ 5.3, ಯುಎಸ್ಬಿ ಟೈಪ್-ಸಿ ಪೋರ್ಟ್, ಎನ್ಎಫ್ಸಿಗೆ ಬೆಂಬಲವನ್ನು ಪಡೆಯುತ್ತದೆ. ವಾಟರ್ ರೆಸಿಸ್ಟನ್ಟ್ ಗಾಗಿ IP68 ರೇಟಿಂಗ್ ಅನ್ನು ಫೋನ್ನೊಂದಿಗೆ ಕಾಣಬಹುದು.
ಫೋನ್ನ ಬೆಲೆಯನ್ನು Xiaomi ಇನ್ನೂ ಬಹಿರಂಗ ಪಡಿಸಿಲ್ಲ. ಇತ್ತೀಚೆಗೆ ಕಂಪನಿಯು ಈ ಫೋನ್ ಅನ್ನು ದೇಶೀಯ ಮಾರುಕಟ್ಟೆಯಲ್ಲಿ CNY 4,999 ಕ್ಕೆ (ಸುಮಾರು ರೂ. 61,000)ಗೆ ಪರಿಚಯಿಸಿತು . ಭಾರತದಲ್ಲಿ ಈ ಫೋನ್ಗೆ ಅದೇ ಬೆಲೆಯನ್ನು ವಿಧಿಸಬಹುದು ಎಂಬ ನಿರೀಕ್ಷೆಯಿದೆ.