ಜಾಯ್ ಮಿಹೋಸ್ ಇ – ಸ್ಕೂಟರ್ ಖರೀದಿಗೆ ಮುಗಿಬಿದ್ದ ಜನ | ಬುಕಿಂಗ್ ನಲ್ಲಿ ದಾಖಲೆ ಮಾಡಿತು ಈ ಗಾಡಿ!!!

ಸದ್ಯ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಈ ನಡುವೆ
ಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿ ವಾರ್ಡ್‌ವಿಜಾರ್ಡ್ ಇನ್ನೋವೇಶನ್ಸ್ ಹೊಸ ದಾಖಲೆಯೊಂದನ್ನು ಬರೆದಿದೆ. ಕಂಪನಿಯ ಜಾಯ್ ಮಿಹೋಸ್ ಎಲೆಕ್ಟ್ರಿಕ್ ಸ್ಕೂಟರ್ ಗರಿಷ್ಠ ಸಂಖ್ಯೆಯ ಬುಕಿಂಗ್ ಪಡೆದುಕೊಂಡಿದ್ದು, ಈ ಮೂಲಕ ದಾಖಲೆಯ ಪುಟ ಸೇರಿದೆ.

ಕಳೆದ ತಿಂಗಳು ಜನವರಿ 22ರಂದು ಈ ಹೊಸ ಜಾಯ್ ಮಿಹೋಸ್ ಎಲೆಕ್ಟ್ರಿಕ್ ಸ್ಕೂಟರ್ ಬುಕಿಂಗ್ ಅನ್ನು ದೇಶಾದ್ಯಂತ ಬಿಡುಗಡೆ ಮಾಡಿದ್ದು, ಕೇವಲ 15 ದಿನದಲ್ಲಿ ಈ ಸ್ಕೂಟರ್ ಅನ್ನು 18,600 ಮಂದಿ ಬುಕಿಂಗ್ ಮಾಡಿದ್ದಾರೆ. ಇನ್ನು ಜಾಯ್ ಮಿಹೋಸ್ ಎಲೆಕ್ಟ್ರಿಕ್ ಸ್ಕೂಟರ್ ಬುಕಿಂಗ್ ಮಾಡಲು ಬಯಸುವವರು, ಕಂಪನಿಯ ಅಧಿಕೃತ ವೆಬ್‌ಸೈಟ್ ಅಥವಾ ಡೀಲರ್‌ಶಿಪ್‌ಗೆ ಭೇಟಿ ನೀಡಿ ರೂ. 999 ಟೋಕನ್ ಮೊತ್ತ ಪಾವತಿಸಿ ಬುಕ್ ಮಾಡಬಹುದಾಗಿದೆ.

ಜಾಯ್ ಮಿಹೋಸ್ ಎಲೆಕ್ಟ್ರಿಕ್ ಸ್ಕೂಟರ್ ದೆಹಲಿಯ ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಯಾಗಿದ್ದು, ಇದು ರೆಟ್ರೋ ಶೈಲಿಯ ವಿನ್ಯಾಸವನ್ನು ಹೊಂದಿದೆ‌. ಈ ಸ್ಕೂಟರ್ ಗ್ರಾಹಕರಿಗೆ ರೂ.1.35 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದು 2.5 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದ್ದು, ಸಂಪೂರ್ಣ ಚಾರ್ಜಿನಲ್ಲಿ 100 km ರೇಂಜ್ ನೀಡುತ್ತದೆ. ಹಾಗೂ 7 ಸೆಕೆಂಡುಗಳಲ್ಲಿ 0-40 kmph ವೇಗವನ್ನು ಪಡೆಯಲಿದೆ.

ಸ್ಕೂಟರ್ ನ ಬ್ಯಾಟರಿ ಅತಿ ಬೇಗನೆ ಚಾರ್ಜ್ ಆಗುತ್ತದೆ. ಜಾಯ್ ಮಿಹೋಸ್ ಎಲೆಕ್ಟ್ರಿಕ್ ಸ್ಕೂಟರ್ ಫ್ರಂಟ್ ಟೆಲಿಸ್ಕೋಪಿಕ್ ಫೋರ್ಕ್‌, ರೇರ್ ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಅನ್ನು ಒಳಗೊಂಡಿದೆ. ಫ್ರಂಟ್ ಹಾಗೂ ರೇರ್, ಡಿಸ್ಕ್ ಬ್ರೇಕ್ ಗಳನ್ನು ಪಡೆದಿದೆ. ಇವು ಹೈಡ್ರಾಲಿಕ್ ಕಾಂಬಿ-ಬ್ರೇಕಿಂಗ್ ಸಿಸ್ಟಮ್ ಮೂಲಕ ಕಾರ್ಯನಿರ್ವಹಿಸುತ್ತವೆ. ಈ ಸ್ಕೂಟರ್ 1,864 ಎಂಎಂ ಉದ್ದವಾಗಿದ್ದು, 700 ಎಂಎಂ ಅಗಲ ಮತ್ತು 1,178 ಎಂಎಂ ಎತ್ತರವಾಗಿದೆ. ಹಾಗೇ 1,360 ಎಂಎಂ ಉದ್ದದ ವೀಲ್‌ಬೇಸ್, 175 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ.

ಜಾಯ್ ಇ-ಕನೆಕ್ಟ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದ್ದು, ಬ್ಲೂಟೂತ್ ಕನೆಕ್ಷನ್, ರಿವರ್ಸ್ ಮೋಡ್, ಆಂಟಿ-ಥೆಫ್ಟ್ ಸಿಸ್ಟಮ್, ಜಿಪಿಎಸ್ ಗಳು ಇದ್ದು, ಗ್ರಾಹಕರಿಗೆ ಈ ಹೊಸ ಸ್ಕೂಟರ್ ಮೆಟಾಲಿಕ್ ಬ್ಲೂ, ಸಾಲಿಡ್ ಬ್ಲ್ಯಾಕ್ ಗ್ಲೋಸಿ, ಸಾಲಿಡ್ ಯೆಲ್ಲೋ ಗ್ಲೋಸಿ ಮತ್ತು ಪರ್ಲ್ ವೈಟ್ ಎಂಬ ನಾಲ್ಕು ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಾಗಲಿದೆ.

ಸದ್ಯ ಈ ಸ್ಕೂಟರ್ ಅತಿ ಹೆಚ್ಚು ಬುಕಿಂಗ್ ಆಗಿ, ದಾಖಲೆ ಬರೆದಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಾರ್ಡ್‌ವಿಜಾರ್ಡ್ ಇನ್ನೋವೇಶನ್ಸ್ ಮತ್ತು ಮೊಬಿಲಿಟಿ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಯತಿನ್ ಗುಪ್ತ ಅವರು, ಮಾರ್ಚ್ ತಿಂಗಳಿನಿಂದ ಜಾಯ್ ಮಿಹೋಸ್ ಎಲೆಕ್ಟ್ರಿಕ್ ಸ್ಕೂಟರ್ ನ ವಿತರಣೆಗಳು ಹಂತ – ಹಂತವಾಗಿ ಪ್ರಾರಂಭವಾಗಲಿದೆ ಎಂದು ಹೇಳಿದ್ದಾರೆ. ಸದ್ಯ ಸ್ಕೂಟರ್ ಖರೀದಿದಾರರಿಗೆ ಇದು ಉತ್ತಮ ಅವಕಾಶವಾಗಿದ್ದು, ದಾಖಲೆ ಬರೆದಿದೆ ಅಂದ್ರೆ ಅಷ್ಟೇ ಅತ್ಯುತ್ತಮ ಸ್ಕೂಟರೇ ಆಗಿರುತ್ತದೆ. ಹಾಗಾದ್ರೆ ತಡ ಮಾಡದೇ ಸ್ಕೂಟರ್ ಬುಕ್ ಮಾಡಿ.

Leave A Reply

Your email address will not be published.