Sleeping position : ನೀವೇನಾದರು ಈ ರೀತಿ ಮಲಗ್ತೀರಾ ? ಇದು ಅಪಾಯ ಖಂಡಿತ!

ಉತ್ತಮ ಆರೋಗ್ಯಕ್ಕೆ ಆರರಿಂದ ಎಂಟು ಗಂಟೆ ಗಾಢ ನಿದ್ದೆಯ ಅಗತ್ಯವಿದೆ. ನಿದ್ರೆಯೊಂದು ಸರಿಯಾಗುತ್ತಿದೆ ಎಂದರೆ ಬದುಕಿನಲ್ಲಿ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸೇರಿದಂತೆ ಬಹಳಷ್ಟು ವಿಷಯಗಳು ಸರಾಗವಾಗುತ್ತವೆ. ನಿದ್ರೆಯ ಕೊರತೆಯಾದರೆ ಒತ್ತಡ, ಆತಂಕ, ಗೊಂದಲ, ಸುಸ್ತು ಒಟ್ಟಿನಲ್ಲಿ ಮರುದಿನ ಯಾವ ಕೆಲಸಗಳೂ ಸುಸೂತ್ರವಾಗಿ ಆಗುವುದಿಲ್ಲ. ಜೊತೆಗೆ ಯಾವ ನಿರ್ಧಾರಗಳನ್ನು ಸರಿಯಾಗಿ ತೆಗೆದುಕೊಳ್ಳಲು ಆಗುವುದಿಲ್ಲ, ಇನ್ನು ಪರಿಚಿತರೊಂದಿಗೆ ಸಂತೋಷವಾಗಿ ಮಾತಾಡಲು ಸಾಧ್ಯವಾಗುವುದಿಲ್ಲ. ಒಟ್ಟಿನಲ್ಲಿ ಆರೋಗ್ಯ, ಆಯಸ್ಸು, ಸಂಬಂಧ, ಹಣಕಾಸು ಎಲ್ಲಕ್ಕೂ ಗೊಂದಲಮಯವಾಗುತ್ತದೆ . ಹಾಗಿದ್ದರೆ ನಿದ್ದೆ ಚೆನ್ನಾಗಾಗಬೇಕು ಎಂಬುದು ಎಷ್ಟು ಮುಖ್ಯವೋ, ಹಾಗೆಯೇ ಯಾವ ಭಂಗಿಯಲ್ಲಿ ಮಲಗಬೇಕು ಎಂಬುದೂ ಅಷ್ಟೇ ಮುಖ್ಯ ಎಂದು ತಜ್ಞರು ಹೇಳುತ್ತಾರೆ.

ಹೌದು ನಮಗೆ ನಿದ್ದೆ ಎಷ್ಟು ಮುಖ್ಯವೂ ಅಷ್ಟೇ ಮಲಗುವ ಭಂಗಿ ಕೂಡ ಮುಖ್ಯ ಎಂಬುದು ಮರೆಯಬಾರದು. ಸರಿಯಾದ ಭಂಗಿಯಲ್ಲಿ ಮಲಗದೇ ಇದ್ದರೆ ಇದರ ಪರಿಣಾಮವಾಗಿ ಬೆನ್ನಿನ ನೋವು, ಕುತ್ತಿಗೆ ನೋವು, ಹೊಟ್ಟೆಯಲ್ಲಿ ತೊಂದರೆ ಮತ್ತು ಅವಧಿಗೂ ಮುನ್ನ ವೃದ್ಧಾಪ್ಯ ಆವರಿಸುವುದು ಮೊದಲಾದ ತೊಂದರೆಗಳು ಎದುರಾಗುತ್ತವೆ.

  • ನೀವು ನಿರಂತರವಾಗಿ ಒಂದು ಬದಿಯಲ್ಲಿ ಮಲಗಿದಾಗ ನಿಮ್ಮ ತೋಳುಗಳು ಮತ್ತು ಕಾಲುಗಳಲ್ಲಿ ನೋವು ಉಂಟಾಗಬಹುದು. ನಿಮ್ಮ ದೇಹದ ಬಲಭಾಗದಲ್ಲಿ ಮಲಗುವುದು ನಿಮ್ಮ ಜೀರ್ಣಕ್ರಿಯೆ ಹಾಗೂ ಎದೆಯ ಭಾಗದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಇದರಿಂದಾಗುವ ಒಂದು ಪ್ರಯೋಜನವೆಂದರೆ ನೀವು ಈ ಭಂಗಿಯಲ್ಲಿ ಮಲಗುವುದರಿಂದ ಗೊರಕೆ ಕಡಿಮೆಯಾಗುತ್ತದೆ.
  • ನಿಮ್ಮ ಹೊಟ್ಟೆಯ ಮೇಲೆ ಮಲಗುವ ಅಭ್ಯಾಸ ನಿಮಗಿದ್ದರೆ, ಈ ಅಭ್ಯಾಸ ನಿಮಗೆ ಆರಾಮದಾಯಕವೆನಿಸಿದರೂ ಕೂಡ, ಈ ಅಭ್ಯಾಸವನ್ನು ಇವತ್ತೇ ಬಿಟ್ಟು ಬಿಡಿ. ಯಾಕೆಂದರೆ ಇದು ನಿಮ್ಮ ಆರೋಗ್ಯವನ್ನು ಸಂಪೂರ್ಣವಾಗಿ ಹದಗೆಡಿಸುತ್ತದೆ. ಇದರಿಂದಾಗಿ ನಿಮ್ಮ ಬೆನ್ನು ಮತ್ತು ಕುತ್ತಿಗೆ ನೋವು ಉಂಟಾಗಲು ಕಾರಣವಾಗುತ್ತದೆ. ಜೊತೆಗೆ ನಿಮ್ಮ ಬೆನ್ನು ಮೂಳೆ ವಿಚಿತ್ರವಾದ ಆಕಾರವನ್ನು ಪಡೆದುಕೊಳ್ಳಲು ಕಾರಣವಾಗಬಹುದು. ಆದ್ದರಿಂದ ಈ ಅಭ್ಯಾಸವನ್ನು ಇಂದೇ ಬಿಟ್ಟು ಬಿಡಿ. ಅದಲ್ಲದೆ ಹೊಟ್ಟೆ ಮೇಲೆ ಮಲಗುವುದು ಶ್ವಾಸಕೋಶದ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ, ಇದರಿಂದಾಗಿ ಉಸಿರಾಟದ ತೊಂದರೆಗಳು ಉಂಟಾಗಬಹುದು. ಹೊಟ್ಟೆಯ ಬದಿಯಲ್ಲಿ ಮಲಗುವುದರಿಂದ ಮಹಿಳೆಯರಲ್ಲಿ ಬೆನ್ನುಮೂಳೆಯಲ್ಲಿ ನೋವು ಉಂಟಾಗುತ್ತದೆ ಮತ್ತು ಇತರ ಅಂಗಗಳಿಗೆ ಹಾನಿಯಾಗುತ್ತದೆ. ಹೆಚ್ಚಿನ ತೂಕ ಹೊಂದಿರುವ ಮಹಿಳೆಯರಲ್ಲಿ ಇಂತಹ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತವೆ.

ಒಟ್ಟಿನಲ್ಲಿ ನೀವು ಮಲಗುವ ಭಂಗಿ ಹೀಗಿರಲಿ ಯಾಕೆಂದರೆ ಮುಖ್ಯವಾಗಿ ಉಸಿರಾಟದ ಸಮಸ್ಯೆ ಇರುವ ಮಹಿಳೆಯರು ಬೆನ್ನ ಮೇಲೆ ಮಲಗುವುದು ಉತ್ತಮ. ಬೆನ್ನಿನ ಮೇಲೆ ಮಲಗುವುದು ಬೆನ್ನುಮೂಳೆಯನ್ನು ನೇರವಾಗಿರಿಸುತ್ತದೆ ಮತ್ತು ಸ್ನಾಯುವಿನ ಒತ್ತಡದ ಅಪಾಯವನ್ನು ಕಡಿಮೆ ಮಾಡುತ್ತದೆ. ಪ್ರತಿಯೊಬ್ಬರೂ ಬೆನ್ನಿನ ಮೇಲೆ ಮಲಗುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನಿಮ್ಮ ಬೆನ್ನಿನ ಮೇಲೆ ಮಲಗುವುದು ನಿಮ್ಮ ಬೆನ್ನುಮೂಳೆಗೆ ಒಳ್ಳೆಯದು. ಈ ರೀತಿಯಾಗಿ ಮಲಗುವುದರಿಂದ ನಿಮ್ಮ ಬೆನ್ನು ಮತ್ತು ಕತ್ತಿನ ಸ್ನಾಯುಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಜೊತೆಗೆ ಈ ಭಂಗಿ ನಿಮ್ಮ ಚರ್ಮದಲ್ಲಿ ವಿಶೇಷವಾಗಿ ಮಹಿಳೆಯರ ಎದೆಯ ಭಾಗದಲ್ಲಿ ಸುಕ್ಕು ಬರದಿರಲು ಸಹಾಯಕವಾಗಿದೆ ಎಂದು ತಜ್ಞರು ತಿಳಿಸುತ್ತಾರೆ.

Leave A Reply

Your email address will not be published.