IIMB Recruitment 2023: ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಮ್ಯಾನೇಜ್​ಮೆಂಟ್ ನಲ್ಲಿ ಉದ್ಯೋಗ | ಅರ್ಜಿ ಸಲ್ಲಿಸಲು ಕೊನೆ ದಿನ-ಫೆ.6

ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಮ್ಯಾನೇಜ್​ಮೆಂಟ್ ಬೆಂಗಳೂರು ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಸಂಸ್ಥೆ : ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಮ್ಯಾನೇಜ್​ಮೆಂಟ್ ಬೆಂಗಳೂರು(Indian Institute of Management Bengaluru)
ಹುದ್ದೆ : ಅಸೋಸಿಯೇಟ್ ಮ್ಯಾನೇಜರ್ & ಅಸಿಸ್ಟೆಂಟ್ ಮ್ಯಾನೇಜರ್
ಒಟ್ಟು ಹುದ್ದೆ : 2
ವಿದ್ಯಾರ್ಹತೆ : ಪದವಿ, ಸ್ನಾತಕೋತ್ತರ ಪದವಿ
ವೇತನ : 7 ಲಕ್ಷ-12.30 ಲಕ್ಷ (ವಾರ್ಷಿಕ ಪ್ಯಾಕೇಜ್)
ಉದ್ಯೋಗದ ಸ್ಥಳ : ಬೆಂಗಳೂರು
ಅರ್ಜಿ ಸಲ್ಲಿಸಲು ಕೊನೆಯ ದಿನ : ಫೆಬ್ರವರಿ 6, 2023

ವಿದ್ಯಾರ್ಹತೆ:
ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಮ್ಯಾನೇಜ್​ಮೆಂಟ್ ಬೆಂಗಳೂರು ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪದವಿ/ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.

ವಯೋಮಿತಿ:
ಅಭ್ಯರ್ಥಿಗಳ ವಯಸ್ಸು ಎಷ್ಟಿರಬೇಕು ಎಂದು ನಿಗದಿಪಡಿಸಿಲ್ಲ. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ವೇತನ:
ಅಸಿಸ್ಟೆಂಟ್ ಮ್ಯಾನೇಜರ್- 7 ಲಕ್ಷ-9.20 ಲಕ್ಷ (ವಾರ್ಷಿಕ ಪ್ಯಾಕೇಜ್)
ಅಸೋಸಿಯೇಟ್ ಮ್ಯಾನೇಜರ್ – 10.70 ಲಕ್ಷ-12.30 ಲಕ್ಷ (ವಾರ್ಷಿಕ ಪ್ಯಾಕೇಜ್)

ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕ ಇಲ್ಲ.

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 24/01/2023
ಅರ್ಜಿ ಸಲ್ಲಿಸಲು ಕೊನಯ ದಿನ: ಫೆಬ್ರವರಿ 6, 2023

Leave A Reply

Your email address will not be published.