ಏರ್‌ಫ್ರೆಶನರ್‌ ಮನೆಯಲ್ಲೇ ಮಾಡುವ ಸುಲಭ ವಿಧಾನ ತಿಳಿಯಬೇಕೇ ? ಇಲ್ಲಿದೆ ನೋಡಿ

ಇತ್ತೀಚಿಗೆ ಜನರು ಆಕರ್ಷಣೆಯ ಅನುಸಾರವಾಗಿ ಜೀವನ ಕ್ರಮವನ್ನು ಅನುಸರಿಸುತ್ತಾರೆ. ಪ್ರತಿಯೊಂದು ವಿಚಾರದಲ್ಲಿ ಅಂದರೆ ನಾವು ಬಳಸುವ ವಸ್ತು ಆಗಲಿ, ತಿನ್ನುವ ಆಹಾರ ಆಗಲಿ ಕೇವಲ ಮೇಲಿನ ಅಂದ ಮತ್ತು ಪರಿಮಳವನ್ನು ಮಾತ್ರ ಜನರು ಇಷ್ಟಪಡುತ್ತಾರೆ. ಅದರ ಹಿಂದಿನ ಆರೋಗ್ಯ ಏರುಪೇರುಗಳನ್ನು ಪರಿಗಣಿಸುವುದಿಲ್ಲ. ಮುಖ್ಯವಾಗಿ ಡಿಯೋಡರೆಂಟ್‌ಗಳು, ಏರ್ ಫ್ರೆಶ್‌ನರ್‌ ಉತ್ಪನ್ನಗಳು ಮನೆಗಳಲ್ಲಿ ಬಳಸಲಾಗುವ ಕೃತಕ ಪರಿಮಳಕಾರಗಳು ಇವುಗಳು ನಮ್ಮ ಆರೋಗ್ಯಕ್ಕೆ ಪರಿಣಾಮ ಬೀರುತ್ತವೆ.

ನಾವು ಶಾಂತವಾಗಿ ಮನೆಯಲ್ಲಿ ಕಾಲ ಕಳೆಯುವಾಗ ಉತ್ತಮ ಪರಿಮಳ ಇದ್ದಾಗ ಮನಸ್ಸಿಗೆ ಖುಷಿ ಅನಿಸುತ್ತೆ ತಾನೇ. ಪರಿಮಳ ಬರಲು ನೀವು ಇದ್ದ ಬದ್ದ ಏರ್ ಫ್ರೆಶನರ್ ಬಳಸುತ್ತೀರಿ ಆದರೆ ಇದಕ್ಕೆ ರಾಸಾಯನಿಕಗಳನ್ನು ಉಪಯೋಗಿಸುವುದರಿಂದ ಇದರ ವಾಸನೆ ತೆಗೆದುಕೊಂಡಾಗ ಕೆಲವರಿಗೆ ವಾಂತಿ ಬರುವುದು, ಹೊಟ್ಟೆ ತೊಳೆಸಿದಂತೆ ಆಗುತ್ತದೆ. ಹಾಗಾಗಿ ಮನೆಯಲ್ಲಿ ಪರಿಮಳಭರಿತವಾದ ಏರ್ ಫ್ರೆಶನರ್ ನ್ನು ಸುಲಭವಾಗಿ ಮಾಡುವ ವಿಧಾನ ಇಲ್ಲಿದೆ.

ಬೇಕಾಗುವ ಬಗೆಗಳು:

  • 10 ಹನಿಗಳಾಗುವಷ್ಟು ಯಾವುದಾದರೂ ಎಸೆನ್ಸಿಯಲ್ ಆಯಿಲ್. ನಿಮಗೆ ಯಾವುದು ಇಷ್ಟನೋ ಅದನ್ನು ತೆಗೆದುಕೊಳ್ಳಿ.
  • 1 ಸ್ಪ್ರೇ ಬಾಟಲ್,
  • 1 ಟೇಬಲ್ ಸ್ಪೂನ್ ಬೇಕಿಂಗ್ ಸೋಡಾ,
  • 500 ಎಂ.ಎಲ್ ಡಿಸ್ಟಿಲ್ಡ್ ವಾಟರ್.

ಮಾಡುವ ವಿಧಾನ :

  • ಒಂದು ಬೌಲ್ ಗೆ ಎಸೆನ್ಸಿಯಲ್ ಆಯಿಲ್, ಬೇಕಿಂಗ್ ಸೋಡಾ ಹಾಕಿ ಒಂದು ಪೋರ್ಕ್ ನ ಸಹಾಯದಿಂದ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
  • ಇದನ್ನು ಸ್ಪೇ ಬಾಟಲಿಗೆ ಹಾಕಿಕೊಂಡು ಅದಕ್ಕೆ ಡಿಸ್ಟಿಲ್ಡ್ ವಾಟರ್ ಸೇರಿಸಿ ಮುಚ್ಚಳ ಮುಚ್ಚಿ, ಉಪಯೋಗಿಸುವ ಮೊದಲು ಸ್ಪ್ರೇ ಬಾಟಲ್ ಅನ್ನು ಚೆನ್ನಾಗಿ ಅಲ್ಲಾಡಿಸಿ ಉಪಯೋಗಿಸಿ. ನಿಮ್ಮ ಮನೆ, ಆಫೀಸ್, ಕರ್ಟನ್, ಫರ್ನಿಚರ್ ಎಲ್ಲಾ ಕಡೆ ಇದನ್ನು ಸ್ಪ್ರೇ ಮಾಡಬಹುದು.

ಈ ರೀತಿಯಾಗಿ ಮನೆಯಲ್ಲಿ ನೀವು ಪರಿಮಳಕಾರಕವನ್ನು ತಯಾರಿಸಿ ಬಳಸುವುದರಿಂದ ಆರೋಗ್ಯಕ್ಕೂ ಉತ್ತಮ ಮತ್ತು ಹಣದ ಉಳಿತಾಯ ಸಹ ಮಾಡಬಹುದಾಗಿದೆ ಜೊತೆಗೆ ಮನೆಯವರ ಮನಸ್ಸನ್ನು ಗೆಲ್ಲಬಹುದು.

Leave A Reply

Your email address will not be published.