Auto Expo 2023 : ಸುಂದರ ಬಣ್ಣದ ಮೇಲೆ ಎಲೆಕ್ಟ್ರಿಕ್ LEV ಬಿಡುಗಡೆ

ಭಾರತದ ಸಾರಿಗೆ ಕ್ಷೇತ್ರದಲ್ಲಿ ಕೊನೆಯ ಮೈಲಿ ಮತ್ತು ಮಧ್ಯಂತರ ಮೈಲಿ ಅಂತರದ ಸುಸ್ಥಿರ ಚಲನಶೀಲತೆ ಪರಿಹಾರಗಳಿಗೆ ಹೆಚ್ಚಿನ ಬೇಡಿಕೆಯಿದೆ. ಎಲೆಕ್ಟ್ರಿಕ್ ವಾಹನ ಉದ್ಯಮದಲ್ಲಿ ಬ್ರಾಂಡ್ ಅನ್ನು ಸ್ಥಾಪಿಸುವಲ್ಲಿ ಸ್ವಿಚ್ ಯಶಸ್ವಿಯಾಗಿದ್ದು, ಜಾಗತಿಕ ಮಟ್ಟದಲ್ಲಿ ಅಪ್ರತಿಮ ಉತ್ಪನ್ನದ ಆಯ್ಕೆಯನ್ನು ನೀಡಲು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದೆ. ಹಿಂದುಜಾ ಸಮೂಹ ಕಂಪನಿ ಸ್ವಿಚ್ ಮೊಬಿಲಿಟಿ ಲಿಮಿಟೆಡ್ ಆಟೋ ಎಕ್ಸ್‌ಪೋ 2023 ರಲ್ಲಿ ಹೊಚ್ಚ ಹೊಸ ಎಲ್‍ಇವಿ ಸರಣಿಯನ್ನು ಅನಾವರಣಗೊಳಿಸಿದೆ.

ಎಲೆಕ್ಟ್ರಿಕ್ ವಾಹನಗಳ ಮೂಲಕ ಸ್ವಿಚ್ ಭಾರತದಲ್ಲಿ ಕೊನೆಯ ಮೈಲು ಮತ್ತು ಮಧ್ಯಂತರ ದೂರದ ಮೊಬಿಲಿಟಿ ಅಪ್ಲಿಕೇಶನ್‍ಗಳ ಮೇಲೆ ಬೇಡಿಕೆ ಹೆಚ್ಚಾಗುತ್ತಿದ್ದೂ, ಅಗತ್ಯತೆಗಳನ್ನು ಈಡೇರಿಸಲಿದೆ. ಎಲೆಕ್ಟ್ರಿಕ್ ಸಂಪರ್ಕಿತ ವಾಹನವನ್ನು ಸಾಬೀತಾಗಿರುವ ಮತ್ತು ದೃಢವಾದ ಮಾಡ್ಯುಲರ್ ಪ್ಲಾಟ್‍ಫಾರ್ಮ್‍ನಲ್ಲಿ ನಿರ್ಮಿಸಲಾಗಿದ್ದೂ, ಅಸಾಧಾರಣ ಕಾರ್ಯಕ್ಷಮತೆ ಮತ್ತು ದಕ್ಷತೆಯನ್ನು ನೀಡುತ್ತದೆ.

ಸ್ವಿಚ್ ಎಲ್‍ಇವಿ ಸರಣಿಯು ಜಿವಿಡಬ್ಲ್ಯುಗೆ ಹೋಲಿಸಿದರೆ ವರ್ಗದಲ್ಲೇ ಅತ್ಯುತ್ತಮ ಪೇಲೋಡ್, 150 ಕಿ.ಮೀ.ವರೆಗಿನ ದೀರ್ಘ ವ್ಯಾಪ್ತಿಯ ಕವರೇಜ್, ವೇಗವಾದ ಟರ್ನ್‍ಅರೌಂಡ್ ಸಮಯ, ವರ್ಗದಲ್ಲೇ ಉತ್ತಮ ಸರಕು ಸ್ಥಳ ಮತ್ತು ವಿಶೇಷವೆನಿಸಿದ ವಿಶ್ವಾಸಾರ್ಹತೆಯೊಂದಿಗೆ ವೆಚ್ಚಕ್ಕೆ ಹೋಲಿಸಿದರೆ ಒಟ್ಟಾರೆ ಅನುಕೂಲಕರ ಕಾರ್ಯಾಚರಣೆಯನ್ನು ನೀಡುತ್ತದೆ. ರಿಮೋಟ್, ನೈಜ-ಸಮಯದ ಸಮಸ್ಯೆನಿರ್ಣಯ ಮತ್ತು ಮೇಲ್ವಿಚಾರಣೆಯನ್ನು ಸಕ್ರಿಯಗೊಳಿಸಲು ಸ್ವಾಮ್ಯದ ‘ಸ್ವಿಚ್ ಐಯಾನ್’ ಎಂಬೆಡ್ ಎಂಬ ತಂತ್ರಜ್ಞಾನ ಪರಿಹಾರಗಳೊಂದಿಗೆ ಮಾಡಲಾಗಿದೆ.

ಭಾರತದಲ್ಲಿ ಕೊನೆಯ ಮೈಲಿ ಮತ್ತು ಮಧ್ಯಂತರ ಮೈಲಿ ಅಂತರದ ಸಾರಿಗೆ ಅಗತ್ಯಗಳನ್ನು ಪರಿವರ್ತಿಸಲು ಆಟೋ ಎಕ್ಸ್’ಪೋ 2023 ರಲ್ಲಿ ನಮ್ಮ ಹೊಚ್ಚ ಹೊಸ ಸ್ವಿಚ್ ಎಲ್‍ಇವಿ ಸರಣಿಯ ಪ್ರಾರಂಭದೊಂದಿಗೆ ನಾವು ಹೊಸ ಅಧ್ಯಾಯದತ್ತ ಸಾಗುತ್ತಿರುವ ಹಂತದಲ್ಲಿ ಇದು ನಮಗೆ ಪ್ರಮುಖ ಮೈಲಿಗಲ್ಲು. ಈ ಎಲ್‍ಇವಿ ಸರಣಿಯು ಗ್ರಾಹಕರಿಗೆ ಉತ್ಕೃಷ್ಟ ಮೌಲ್ಯ ಪ್ರತಿಪಾದನೆಯನ್ನು ನೀಡುವ ಜತೆಗೆ 1.2 ಟಿ – 4.5 ಟಿ ಯಿಂದ ಪ್ರಾರಂಭವಾಗುವ ವಿಶಾಲವಾದ ಪೇಲೋಡ್ ಅನ್ನು ಗುರಿ ಮಾಡಿದೆ.

ಈ ಮಾರುಕಟ್ಟೆಯ ಪ್ರಮುಖ ಉತ್ಪನ್ನ ಸರಣಿ ಮತ್ತು ತಂತ್ರಜ್ಞಾನದ ಮೂಲಕ, ಸಾರಿಗೆಯನ್ನು ಸುಲಭ, ಸ್ವಚ್ಛ, ಆರಾಮದಾಯಕ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ಸ್ವಚ್ಛ ಮತ್ತು ಹಸಿರು ಚಲನಶೀಲತೆಯನ್ನು ಬೆಂಬಲಿಸುವಲ್ಲಿ ಸ್ವಿಚ್ ಪ್ರಮುಖ ಪಾತ್ರವನ್ನು ವಹಿಸುತ್ತದೆ.

“ಆಟೋ ಎಕ್ಸ್‍ಪೋ 2023 ರಲ್ಲಿ ಪ್ರದರ್ಶಿಸಲಾದ ನಮ್ಮ ಉತ್ಪನ್ನಗಳ ಮೂಲಕ ಮುಂಬರುವ ವರ್ಷಗಳಲ್ಲಿ ನಮ್ಮ ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡಲು ಮತ್ತು ಬಲವಾದ ಆವೇಗವನ್ನು ಎದುರು ನೋಡಲು ವಿವಿಧ ಭಾಗಗಳ ಸಮುದಾಯಗಳಿಗೆ ಸಹಾಯ ಮಾಡಲು ಬದ್ಧವಾಗಿರುವ ಉದ್ಯಮದ ಭಾಗವಾಗಲು ನಾವು ಹೆಮ್ಮೆಪಡುತ್ತೇವೆ” ಎಂದು ಸ್ವಿಚ್ ಮೊಬಿಲಿಟಿಯ ಕಾರ್ಯಕಾರಿ ಅಧ್ಯಕ್ಷ ಧೀರಜ್ ಹಿಂದುಜಾ ಹೇಳಿದ್ದಾರೆ.

“ಬೆಳೆಯುತ್ತಿರುವ ಅಗತ್ಯಗಳನ್ನು ಪೂರೈಸಲು ಸಮರ್ಥನೀಯ ಉತ್ಪನ್ನಗಳು, ಸೇವೆಗಳು ಮತ್ತು ಪರಿಹಾರಗಳ ಕ್ರಿಯಾಶೀಲ ಉತ್ಪನ್ನ ಶ್ರೇಣಿಗಳಲ್ಲಿ ಕಾರ್ಯ ನಿರ್ವಹಿಸುವುದನ್ನು ನಾವು ಮುಂದುವರಿಸುತ್ತೇವೆ “ಎಂದು ಸ್ವಿಚ್ ಮೊಬಿಲಿಟಿ ಲಿಮಿಟೆಡ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ಬಾಬು ಹೇಳಿದ್ದಾರೆ.

Leave A Reply

Your email address will not be published.