ಕ್ವಾರೆಂಟೈನ್ ಗೂ ಸಪ್ಲೈ ಆಯ್ತು ಓಲ್ಡ್ ಮಂಕ್ ರಮ್ ಬಾಟಲ್…!

 

ಕೋರೋನಾ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ವಿದೇಶಗಳಿಂದ ಹಾಗೂ ಹೊರ ರಾಜ್ಯಗಳಿಂದ ಬಂದವರನ್ನು ಕರೆಸಿಕೊಂಡದ್ದೆ ತಪ್ಪಾಯಿತೇನೋ ಅನ್ನಿಸುವ ಘಟನೆಗಳು ನಡೆಯುತ್ತಿವೆ. ಕ್ವಾರಂಟೈನ್ ಕೇಂದ್ರಗಳಲ್ಲಿ ಇರಿಸಿದವರ ಮತ್ತು ಅವರ ಸುತ್ತ ಮುತ್ತಲಿನ ಜನರು ಎಷ್ಟು ಸುರಕ್ಷಿತ ಅನ್ನುವ ಪ್ರಶ್ನೆ ಇದೀಗ ಎದ್ದಿದೆ.

ಉಡುಪಿ ತಾಲೂಕಿನ ಹೆಬ್ರಿಯಲ್ಲಿ ಕ್ವಾರಂಟೈನ್ ಕೇಂದ್ರದಲ್ಲಿರುವ ಶ್ರೀಮಂತ ಜನರ ಜೊತೆಗೆ ಹೊರಗಿನವರು ಸಂಪರ್ಕ ಸಾಧಿಸುತ್ತಿರುವುದು ಈಗ ಬಟಾ ಬಯಲಾಗಿದೆ. ಕ್ವಾರಂಟೈನ್ ಕೇಂದ್ರಕ್ಕೆ ಮದ್ಯ ಸರಬರಾಜು ಮಾಡುತ್ತಿರುವ ವಿಡಿಯೋ ಭಾರೀ ವೈರಲ್ ಆಗಿದ್ದು ಒಟ್ಟಾರೆ ಆತಂಕವನ್ನು ಸೃಷ್ಟಿಸಿದೆ.

ಹೆಬ್ರಿಯ ಕ್ವಾರಂಟೈನ್ ಕೇಂದ್ರದಲ್ಲಿ ಹೊರ ರಾಜ್ಯಗಳಿಂದ ಬಂದವರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಆದರೆ ಅಲ್ಲಿನ ತಾಲೂಕು ಪಂಚಾಯತ್ ಸದಸ್ಯರೋರ್ವರ ಆದೇಶದ ಮೇಲೆ ಕ್ವಾರಂಟೈನ್ ಕೇಂದ್ರದಲ್ಲಿದ್ದವರಿಗೆ ಮದ್ಯ ಸರಬರಾಜು ಮಾಡಲಾಗುತ್ತಿದೆ ಎನ್ನಲಾದ, ಓಲ್ಡ್ ಮಂಕ್ ರಮ್ ಸರಬರಾಜು ಮಾಡುತ್ತಿದ್ದ ವ್ಯಕ್ತಿಯನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ. ಕ್ವಾರಂಟೈನ್ ಕೇಂದ್ರಗಳಿಗೆ ರಕ್ಷಣೆ ನೀಡಬೇಕಾದ ಪೊಲೀಸರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿರುವುದು ಬಯಲಾಗಿದೆ. ಹಾಗಾದರೆ, ಸರಕಾರದ ನಿಯಂತ್ರಣ ಎಲ್ಲಿಗೆ ಬಂತು ಎಂಬ ಕೂಗು ಸುತ್ತಲಿನ ಜನರದ್ದು.

ಹೊರ ರಾಜ್ಯದ ಶ್ರೀಮಂತರು ದುಡ್ಡು ಖರ್ಚು ಮಾಡಲು ಹಿಂದೆ ಮುಂದೆ ನೋಡುವುದಿಲ್ಲ.
ಕ್ವಾರಂಟೈನ್ ಕೇಂದ್ರಗಳಿಗೆ ಮದ್ಯ ಸರಬರಾಜು ಮಾಡಲಾಗಿರುವುದರಿಂದ ಸುರಕ್ಷತೆಯ ಪ್ರಶ್ನೆ ಎದುರಾಗಿದೆ.
ಕ್ವಾರಂಟೈನ್ ಕೇಂದ್ರಗಳನ್ನು ಇವರು ರೆಸ್ಟ್ ರೂಮ್ ಥರ ಮಾಡಿಕೊಂಡರಾ ಎನ್ನುವುದು ಜನರ ಪ್ರಶ್ನೆ. ಈ ನಿಟ್ಟಿನಲ್ಲಿ ಉಡುಪಿ ಜಿಲ್ಲಾಡಳಿತ ಸೂಕ್ತ ತನಿಖೆ ಮತ್ತು ಕ್ರಮ ಕೈಗೊಳ್ಳಬೇಕಾಗಿದೆ.

Leave A Reply

Your email address will not be published.