ಪ್ರಸಾದ್ ಅತ್ತಾವರ್ ನೇತೃತ್ವದ ರಾಮ್ ಸೇನಾದ ಮೂಲ್ಕಿ ಶಿಮಂತೂರು ಘಟಕ ರಚನೆಯ ಪೂರ್ವಭಾವಿ ಸಭೆ

ಮೂಲ್ಕಿ: ಪ್ರಸಾದ್ ಅತ್ತಾವರ್ ಸಂಸ್ಥಾಪಕ ಅದ್ಯಕ್ಷರಾಗಿರುವ ರಾಮ್ ಸೇನಾ (ರಿ) ಕರ್ನಾಟಕ ಇದರ ರಾಮ್ ಸೇನಾ ಮೂಲ್ಕಿ ವಲಯದ ನೂತನ ಶಿಮಂತೂರು ಘಟಕದ ರಚನೆಯ ಕುರಿತಾಗಿ ಪೂರ್ವಭಾವಿ ಬೈಠಕ್ ಮೂಲ್ಕಿ ಶಿಮಂತೂರಿನ ಆದಿ ಜನಾರ್ಧನ ದೇವಸ್ಥಾನದಲ್ಲಿ ಜರುಗಿತು.

ಸಂಘಟನೆಯ ಸಿದ್ದಾಂತ, ಉದ್ದೇಶ,ಮತ್ತು ಘಟಕ ರಚನೆಯ ಬಗ್ಗೆ ಸಲಹೆ ಸೂಚನೆಗಳನ್ನು ರಾಮ್ ಸೇನಾ ಜಿಲ್ಲಾಧ್ಯಕ್ಷರಾದ ಕಿರಣ್ ಕುಡ್ಲ,ಜಿಲ್ಲಾ ಕಾರ್ಯದರ್ಶಿ ಲೋಕೇಶ್ ಮುಕ್ಕ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಮೂಲ್ಕಿ ನೀಡಿದರು.ಬೈಠಕ್ ನಲ್ಲಿ ಭಾಗವಹಿಸಿದ ಕಾರ್ಯಕರ್ತರು ಮಾಸ್ಕ್ ಧರಿಸಿ,ಸಾಮಾಜಿಕ ಅಂತರ ಕಾಯ್ದುಕೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಈಗಾಗಲೇ ರಾಮ್ ಸೇನಾ ಸಂಘಟನೆಯು ರಾಜ್ಯ ವ್ಯಾಪಿ ಘಟಕಗಳನ್ನು ಹೊಂದಿದ್ದು,ಸಂಸ್ಥಾಪಕ ಅಧ್ಯಕ್ಷರಾದ ಪ್ರಸಾದ್ ಅತ್ತಾವರ್ ರವರ ಮಾರ್ಗದರ್ಶನದಲ್ಲಿ ಸಂಘಟನೆಯು ರಾಜ್ಯವ್ಯಾಪಿ ಹತ್ತು ಹಲವು ಸಾಮಾಜಿಕ ಕಾರ್ಯಕ್ರಮ ನಡೆಸುತ್ತಾ ಬರುತ್ತಿದೆ.

Leave A Reply

Your email address will not be published.