ಕೊಡಗು | ನೆರೆಸಂತ್ರಸ್ತರಿಗೆ ಕೊನೆಗೂ ಸಿದ್ದವಾಯ್ತು ವಾಸಿಸಲೊಂದು ಸೂರು

2018 ರ ಆಗಸ್ಟ್ ತಿಂಗಳಿನಲ್ಲಿ ಕೊಡಗಿನಲ್ಲಿ ಏಕಾಏಕಿ ಸುರಿದ ಬಾರಿಮಳೆಗೆ ಗುಡ್ಡ ಕುಸಿತ ಹಾಗೂ ನೆರೆ ಹಾವಳಿ ಉಂಟಾಗಿತ್ತು. ಇದಕ್ಕೆ ತುತ್ತಾಗಿ ಅದೇಷ್ಟೊ ಕುಟುಂಬಗಳು ಮನೆ ಕಳೆದುಕೊಂಡು ಬೀದಿ ಪಾಲಗಿದ್ದವು. ಇದೀಗ
ಜೂನ್ 4 ರಂದು ಸಿಎಂ ಯಡಿಯೂರಪ್ಪರವರು ಕೊಡಗಿನ ನೆರೆಸಂತ್ರಸ್ತರಿಗಾಗಿ ನಿರ್ಮಾಣಗೊಂಡ ಮನೆಗಳನ್ನು ಹಸ್ತಾಂತರ ಮಾಡಲಿದ್ದಾರೆ.

ಸೋಮವಾರಪೇಟೆಯ ಜಂಬೂರು ಮತ್ತು ಕೊಡಗಿನ ಮಾದಪುರದಲ್ಲಿ ಈಗಾಗಲೆ 463 ಮನೆಗಳು ನಿರ್ಮಾಣಗೊಂಡಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಮನೆಯ ಸಂಪೂರ್ಣ ಕೆಲಸಕಾರ್ಯಗಳು ಕೊನೆಗೊಳ್ಳಲಿವೆ. ಮನೆ ಕಳೆದುಕೊಂಡ ನೆರೆ ಸಂತ್ರಸ್ತರಿಗೆ ಸರಕಾರ ನಿರ್ಮಿಸಿದ ಮನೆಗಳು ಹಸ್ತಾಂತರವಾಗಲಿದೆ.

Leave A Reply

Your email address will not be published.